ಜು. 15ರೊಳಗೆ ದುರಸ್ತಿ ಭರವಸೆ; ವರ್ಷದೊಳಗೆ ಕಾಮಗಾರಿ ಪೂರ್ಣ
ಅರೆಕೆರೆಬೈಲು ಚರಂಡಿ ಅವ್ಯವಸ್ಥೆ
Team Udayavani, Jun 26, 2020, 6:08 AM IST
ಮಹಾನಗರ: ಗುಜ್ಜರಕೆರೆ ಸಮೀಪದ ಅರೆಕೆರೆಬೈಲು ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ತಲೆದೋರಿರುವ ಒಳಚರಂಡಿ ನೀರು ಉಕ್ಕಿ ಹರಿಯುವ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ದಿನ ಸನಿಹವಾಗುತ್ತಿದೆ.
ಜು. 15ರೊಳಗೆ ಸಮಸ್ಯೆ ನಿವಾರಿಸುವ ಭರವಸೆ ಯನ್ನು ಜನಪ್ರತಿನಿಧಿಗಳು ನೀಡಿ ದ್ದಾರೆ. ಒಟ್ಟು 4.5 ಲಕ್ಷ ರೂ.ಗಳ ಯೋಜನೆ ಇದಾಗಿದ್ದು, ಮುಂದಿನ ಒಂದು ವರ್ಷ ದೊ ಳಗೆ ಹಂತ ಹಂತವಾಗಿ ಸಮಸ್ಯೆ ನಿವಾರಣೆಯಾಗಲಿದೆ.
ಪ್ರತಿವರ್ಷ ಧಾರಾಕಾರ ಮಳೆಗೆ ಅರೆಕೆರೆಬೈಲು ಪ್ರದೇಶದಲ್ಲಿ ಒಳಚರಂಡಿಯಿಂದ ಉಕ್ಕಿ ಹರಿದ ನೀರು ರಸ್ತೆಯಲ್ಲಿ ತುಂಬಿ ಕೊಳ್ಳುವುದಲ್ಲದೆ, ಸನಿಹದ ಮನೆಗಳಿಗೂ ನುಗ್ಗುತ್ತಿದೆ. ರಸ್ತೆಯಲ್ಲಿ ಚರಂಡಿ ನೀರು ಹರಿದು, ನಡೆದಾಡಲೂ ಇಲ್ಲಿನ ನಿವಾಸಿಗಳು ಕಷ್ಟ ಅನುಭವಿ ಸುತ್ತಿದ್ದಾರೆ. ಈ ಬಗ್ಗೆ “ಉದಯವಾಣಿ’ ಈ ಹಿಂದೆಯೂ ವರದಿ ಪ್ರಕಟಿಸಿ ಸಂಬಂಧಪಟ್ಟ ಜನಪ್ರತಿ ನಿಧಿ ಗಳ ಗಮನ ಸೆಳೆದಿದೆ.
ಇದೀಗ ಮತ್ತೆ ಸಮಸ್ಯೆ ಮರು ಕಳಿಸುತ್ತಿರುವ ಹಿನ್ನೆಲೆ ಯಲ್ಲಿ ಆ ಭಾಗದ ಕಾರ್ಪೊರೇಟರ್ ರೇವತಿ ಅವರನ್ನು “ಉದಯ ವಾಣಿ’ ಸಂಪರ್ಕಿಸಿದ್ದು, ಜು. 15ರ ವೇಳೆಗೆ ಚರಂಡಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಹಲವು ವರ್ಷಗಳಿಂದ ಅರೆಕೆರೆ ಬೈಲು ಪರಿಸರದ ಜನರಿಗೆ ಒಳಚರಂಡಿಯದ್ದೇ ಸಮಸ್ಯೆಯಾಗಿದೆ. ಮನೆಗಳಿಗೆ ನೀರು ನುಗ್ಗುವ ಪರಿಣಾಮ ಮಳೆಗಾಲದಲ್ಲಿ ವಾಸಿ ಸಲೂ ಕಷ್ಟವಾಗುತ್ತಿದೆ. ಜನಪ್ರತಿ ನಿಧಿ ಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದಾಗಿ ಸ್ಥಳೀಯರಾದ ಪಿ. ನೇಮು ಕೊಟ್ಟಾರಿ ದೂರಿದ್ದಾರೆ.
ಹಲವಾರು ವರ್ಷದ ಸಮಸ್ಯೆ
ಇಲ್ಲಿ ಚರಂಡಿ ಅವ್ಯವಸ್ಥೆ ಹಲವಾರು ವರ್ಷದ ಸಮಸ್ಯೆಯಾಗಿದೆ. ವೆಟ್‌ವೆಲ್‌ನಲ್ಲಿ ನೀರು ಓವರ್ ಫ್ಲೋ ಆಗುತ್ತಿರುವುದರಿಂದ ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗು ತ್ತಿದೆ. ಹೀಗಾಗಿ, ವೆಟ್ ವೆಲ್‌ನಲ್ಲಿ ಹಳೆಯದಾದ ಪೈಪ್ ಕನೆಕ್ಷನ್‌ಗಳನ್ನು ತೆಗೆದು ಪರ್ಯಾಯ ಜೋಡಣೆ ಆಗಬೇಕಿದೆ. ಈಗಾಗಲೇ ಇಲ್ಲಿ ಕಾಮ ಗಾರಿ ನಡೆಯುತ್ತಿದ್ದು, ಜು.15ರ ವೇಳೆಗೆ ಒಳಚರಂಡಿಯಿಂದ ನೀರು ರಸ್ತೆ ಮೇಲೆ ಹರಿಯದಂತೆ ವ್ಯವಸ್ಥೆ ಮಾಡಿ ಕೊಡಲಾ ಗುವುದು. 4.5 ಲಕ್ಷ ರೂ. ವೆಚ್ಚದ ಕಾಮ ಗಾರಿಯಾಗಿರುವುದರಿಂದ ಹಂತ ಹಂತವಾಗಿ ಮುಂದಿನ ಒಂದು ವರ್ಷದೊಳಗೆ ಎಲ್ಲ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಶೀಘ್ರ ಸಮಸ್ಯೆ ನಿವಾರಣೆ
ಅರೆಕೆರೆಬೈಲ್‌ನಲ್ಲಿ ಒಳಚರಂಡಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಇಲ್ಲಿ ಸಮಸ್ಯೆ ನಿವಾರಣೆಗೆ ಕೆಲವು ಪೈಪ್‌ಲೈನ್‌ಗಳನ್ನು ಬದಲಾಯಿಸಬೇಕಿದೆ. ಕೋವಿಡ್ 19 ಭೀತಿಯಿಂದ ಲಾಕ್‌ಡೌನ್ ಆದ ಪರಿಣಾಮ ಇಲ್ಲಿ ಉಂಟಾಗಿರುವ ಸಮಸ್ಯೆ ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ಶೀಘ್ರ ಈ ಸಮಸ್ಯೆಯನ್ನು ನಿವಾರಿಸಿಕೊಡಲಾಗುವುದು.
– ಡಿ. ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.