ಉಳ್ಳಾಲ ಕೋಡಿಯಲ್ಲಿ ಇನ್ನೋರ್ವ ಮಹಿಳೆಗೆ ಸೋಂಕು ದೃಢ
Team Udayavani, Jun 26, 2020, 5:13 AM IST
ಉಳ್ಳಾಲ: ಉಳ್ಳಾಲದಲ್ಲಿ ಕೋವಿಡ್ 19 ಆತಂಕ ಮುಂದುವರಿದಿದ್ದು ಉಳ್ಳಾಲ ಠಾಣಾ ಎಸ್‌ಐ ಸೇರಿದಂತೆ ಇಬ್ಬರು ಮಹಿಳೆಯರಿಗೆ ಸೋಂಕು ತಗಲಿ ಮಹಿಳೆ ಯೊಬ್ಬರು ಮೃತಪಟ್ಟ ಬೆನ್ನಿಗೆ ಇಂದು ಉಳ್ಳಾಲ ಕೋಡಿಯಲ್ಲಿ ಇನ್ನೋರ್ವ ಮಹಿಳೆಗೆ ಸೋಂಕು ದೃಢವಾಗಿದೆ.
ಉಳ್ಳಾಲ ಕೋಡಿಯ ಮಹಿಳೆ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾ ಗಿ ದ್ದು, ಚಿಕಿತ್ಸೆಯ ಮೊದಲು ಗಂಟಲ ದ್ರವ ಪರೀಕ್ಷೆಯ ಸಂದರ್ಭ ಸೋಂಕು ತಗಲಿರುವುದು ದೃಢಪಟ್ಟಿದೆ. ಉಳ್ಳಾಲ ಕೋಡಿ ಮನೆ ಯನ್ನು ಸೀಲ್‌ಡೌನ್ ಮಾಡಲು ಸಿದ್ಧತೆ ನಡೆದಿದೆ.
ಅಝಾದ್‌ನಗರದಲ್ಲಿ 56 ಜನರಿಗೆ ಕ್ವಾರಂಟೈನ್
ಉಳ್ಳಾಲದ ಅಝಾದ್‌ನಗರದಲ್ಲಿ ಇಬ್ಬರು ಮಹಿಳೆಯರಿಗೆ ಸೋಂಕು ದೃಢ ವಾದ ಹಿನ್ನೆಲೆಯಲ್ಲಿ ಎರಡು ಕಾಂಪೌಂಡ್ ನಲ್ಲಿದ್ದ ನಾಲ್ಕು ಮನೆಗಳನ್ನು ಸೀಲ್‌ಡೌನ್ ಮಾಡಿದ್ದು ಮನೆಯಲ್ಲಿದ್ದ ಒಟ್ಟು 26 ಜನರನ್ನು ಕ್ವಾರಂಟೈನ್‌ಗೆ ಒಳಪಡಿ ಸಲಾ ಗಿದೆ. ಇದರೊಂದಿಗೆ ಎರಡು ಖಾಸಗಿ ಆಸ್ಪತ್ರೆಯ 30 ಸಿಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಪೊಲೀಸ್ ಠಾಣೆ ಸೀಲ್‌ಡೌನ್
ಉಳ್ಳಾಲ ಎಸ್‌ಐಗೆ ಕೊರೊನಾ ಸೋಂಕು ದೃಢ ವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಯನ್ನು ಇಂದು ಸೀಲ್‌ಡೌನ್ ಮಾಡಲಾಯಿತು.
ಸೋಂಕು ತಗಲಿರುವ ಪೊಲೀಸ್ ಸಿಬಂದಿ ಐದು ದಿನಗಳಿಂದ ಠಾಣೆಗೆ ಬಂದಿರಲಿಲ್ಲ. ಆದರೆ ಪೊಲೀಸ್ ಠಾಣೆಯ ಎಲ್ಲ ಪೊಲೀಸರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಪೊಲೀಸ್ ಕ್ವಾರ್ಟರ್ಸ್‌ಸೀಲ್‌ಡೌನ್
ಪೊಲೀಸ್ ಠಾಣಾ ಕಚೇರಿಯನ್ನು ಹೊರಗಿನ ಫೋರ್ಟಿಕಾದಲ್ಲಿ ಆರಂಭಿಸಿದ್ದು ಪಕ್ಕದ ಕಟ್ಟಡದಲ್ಲಿ ಪೊಲೀಸರು ಠಾಣೆಯ ದೈನಂದಿನ ಕಾರ್ಯವನ್ನು ನಡೆಸುತ್ತಿದ್ದಾರೆ. ಅದಲ್ಲದೆ ಅಲ್ಲಿಯ ಪೊಲೀಸ್ ಕ್ವಾರ್ಟರ್ಸ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಜಾಗೃತಿ ಅಗತ್ಯ
ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿಸದೆ ಜ್ವರ ಬಂದಲ್ಲಿ ತತ್‌ಕ್ಷಣ ಪರೀಕ್ಷೆ ನಡೆಸಬೇಕು. ನಾಲ್ಕು ಪ್ರಕರಣಗಳಿಂದ ಸೋಂಕು ಇನ್ನಷ್ಟು ಹರಡುವ ಸಾಧ್ಯತೆ ಇದ್ದು ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ.
- ಯು.ಟಿ.ಖಾದರ್, ಶಾಸಕರು
ರಕ್ಷಣೆ ಅಗತ್ಯ
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ನಾಲ್ಕು ಜನರಿಗೆ ಸೋಂಕು ದೃಢ ವಾಗಿದೆ. ಆವಶ್ಯಕತೆ ಇದ್ದರೆ ಮಾತ್ರ ಹೊರಗೆ ಬನ್ನಿ, ಸಾಮಾ ಜಿಕ ಅಂತರವನ್ನು ಕಾಪಾಡಿಕೊಳ್ಳಿ. ನಮ್ಮ ರಕ್ಷಣೆ ನಮ್ಮ ಜವಾಬ್ದಾರಿಯಾಗಿರಬೇಕು . ರೋಗಕ್ಕೆ ಭಯಪಡಬೇಕಾಗಿಲ್ಲ. ಆದರೆ ಎಚ್ಚೆತ್ತುಕೊಳ್ಳಬೇಕು.
– ರಾಯಪ್ಪ,
ಉಳ್ಳಾಲ ನಗರಸಭೆ ಪೌರಾ ಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.