ಕೊಳೆತ ಆಹಾರ ಧಾನ್ಯ ಚೀಲ ಸುಟ್ಟ ಅಂಗನವಾಡಿ ಕಾರ್ಯಕರ್ತೆ
Team Udayavani, Jun 26, 2020, 1:37 PM IST
ನಾಲತವಾಡ: ಲೊಟಗೇರಿ ಅಂಗನವಾಡಿಯಲ್ಲಿ ಕೊಳೆತಿದ್ದ ಆಹಾರ ದಾಸ್ತಾನು ಸುಟ್ಟು ಹಾಕಲಾಯಿತು.
ನಾಲತವಾಡ: ಸಮೀಪದ ಲೊಟಗೇರಿ ಅಂಗನವಾಡಿ ಕಾರ್ಯಕರ್ತೆಯ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಹಾರ ಧಾನ್ಯ ದುರ್ಬಳಕೆಗೆ ಕಾರಣ ಕೇಳಿ ಅಧಿಕಾರಿಗಳು ನೀಡಿದ ನೋಟಿಸ್‌ಗೆ ಕ್ಯಾರೆ ಅನ್ನದೆ ಗುರುವಾರ ಕೊಳೆತಿದ್ದ ಆಹಾರ ಚೀಲಗಳನ್ನು ಸುಟ್ಟು ಹಾಕಿದ್ದಾರೆ.
ಈಚೆಗಷ್ಟೇ ಅಂಗನವಾಡಿಗೆ ಭೇಟಿ ನೀಡಿ ಹೋಗಿದ್ದ ಸಿಡಿಪಿಒ ಸಾವಿತ್ರಿ ಗುಗ್ಗರಿ ಅವರು ಗುರುವಾರ ಕೊಳೆತು ಹೋಗಿದ್ದ ದಾಸ್ತಾನಿನ ಲೆಕ್ಕ ಮಾಡಿಕೊಂಡು ಬರಲು ಮೇಲ್ವಿಚಾರಕರನ್ನು ಕಳುಹಿಸಿದ್ದರು. ಅದರಂತೆ ಮೇಲ್ವಿಚಾರಕಿಯೊಬ್ಬರು ಅಂಗನವಾಡಿಗೆ ಬಂದು ಕೊಳೆತು ಹೋಗಿದ್ದ ಆಹಾರ ಧಾನ್ಯಗಳೆಷ್ಟು ಎಂಬುದನ್ನು ಪಟ್ಟಿ ಮಾಡಿಕೊಳ್ಳುವಲ್ಲಿ ನಿರತವಾಗಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅವರ ಕುಟುಂಬದವರು ಕಣ್ತಪ್ಪಿಸಿ ಕೊಳೆತಿದ್ದ ಆಹಾರ ಧಾನ್ಯ ಚೀಲಗಳನ್ನು ಸುಟ್ಟು ಹಾಕಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕೊಳೆತು ಹೋಗಿದ್ದ ಆಹಾರ ದಾಸ್ತಾನಿನ ಲೆಕ್ಕ ಮಾಡಿಕೊಂಡು ಬರಲು ಸಿಡಿಪಿಒ ಅವರು ತಿಳಿಸಿದ್ದರು. ಅದರಂತೆ ದಾಸ್ತಾನಿನ ಲೆಕ್ಕ ತೆಗೆದುಕೊಳ್ಳುವ ವೇಳೆ ಕಣ್ತಪ್ಪಿಸಿ ಅಂಗನವಾಡಿ ಹಿಂದೆ ಆಹಾರ ಸುಟ್ಟು ಹಾಕಿದ್ದಾರೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಂಗನವಾಡಿ ಕಾರ್ಯಕರ್ತೆ ಈ ಕುರಿತು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನು ಇಲ್ಲ.
ವಿಜಯಲಕ್ಷ್ಮೀ ಮಂಟೂರಕರ್,
ಮೇಲ್ವಾಚಾರಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.