ಭೂ ಸುಧಾರಣೆ ಕಾಯ್ದೆ ಕೈಬಿಡಿ
Team Udayavani, Jun 27, 2020, 4:34 AM IST
ಕೊಳ್ಳೇಗಾಲ: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಸೇರಿದ ಪ್ರತಿಭಟ
ನಾಕಾರರು, ಮುಖ್ಯ ರಸ್ತೆಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಲೋಕೋ ಪಯೋಗಿ ಇಲಾಖೆ ವಸತಿ ಗೃಹಕ್ಕೆ ಆಗಮಿಸಿ ಶಾಸಕ ಮಹೇಶ್‌ಗೆ ಮನವಿ ಸಲ್ಲಿಸಿದರು. ಬಳಿಕ ತಾಪಂ ಆವರ ಣದಲ್ಲಿ ಹನೂರು ಶಾಸಕ ನರೇಂದ್ರರಿಗೂ ಮನವಿ ನೀಡಿ, ಶಾಸನ ಸಭೆಯಲ್ಲಿ ಚರ್ಚಿಸಿ ಕಾಯ್ದೆ ರದ್ದುಗೊಳಿಸು ವಂತೆ ಒತ್ತಾಯಿಸಿದರು. ಶಾಸಕ ಮಹೇಶ್ ಮಾತನಾಡಿ, ಭೂ ಸುಧಾರಣಾ ಕಾಯ್ದೆ ಶಾಸನ ಸಭೆಯಲ್ಲಿ ಚರ್ಚೆಗೆ ತರದೆ ಸರ್ಕಾರ ದಿಢೀರನೆ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ.
ಈ ಬಗ್ಗೆ ಶಾಸನ ಸಭೆಯಲ್ಲಿ ರೈತರ ಪರ ಧ್ವನಿ ಎತ್ತುವು ದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸೋಮಣ್ಣ, ರೈತ ಮುಖಂಡರಾದ ಶಿವಮಲ್ಲು, ನಾಗರಾಜು, ರಾಜಪ್ಪ, ಜೋಯಲ್ಸ್, ಗೋವಿಂದರಾಜು, ಚೌಡಶೆಟ್ಟಿ, ಅಣಗಳ್ಳಿ ಬಸವರಾಜು, ರಾಜೇಂದ್ರ, ಶಿವ ಕುಮಾರ್, ರವಿನಾಯ್ಡು, ತಾಲೂಕು ಅಧ್ಯಕ್ಷ ಗೌಡೇ ಗೌಡ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.