![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 27, 2020, 5:52 AM IST
ಬೇಲೂರು: ತಾಲೂಕಿನಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಚಾಮುಂಡೇಶ್ವರಿ ವಿದ್ಯುತ್ ನಿಗಮದ (ಸೆಸ್ಕ್ ) ಅಧಿಕಾರಿಗಳು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪಗಳಿದ್ದು ಅಂಥಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಎಚ್ಚರಿಸಿದರು. ತಾ ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರೈತರು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಸೆಸ್ಕ್ ಕಚೇರಿಗೆ ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ ಸೆಸ್ಕ್ ಎಂಜಿನಿಯರ್ ಕವಿತಾ ಅವರಿಗೆ ಸೂಚಿಸಿದರು. ಅನೇಕ ಗ್ರಾಮಗಳಲ್ಲಿ ರಸ್ತೆಗಳಲ್ಲೇ ವಿದ್ಯುತ್ ಕಂಬಗಳನ್ನು ನೆಡಲಾಗಿದೆ. ಕೆಲವು ಕಡೆ ಕುಡಿಯುವ ನೀರಿಗಾಗಿ ವಿದ್ಯುತ್‌ಸಂಪರ್ಕ ನೀಡಿಲ್ಲ. ಇದರಿಂದ ಗ್ರಾಮೀಣ ಜನತೆಗೆ ಸಮಸ್ಯೆ ಉಂಟಾಗಿದೆ. ಇತ್ತೀಚೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಲು ಸೆಸ್ಕ್ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಜಿಪಂ ಸದಸ್ಯೆ ಲತಾ ಮಾತನಾಡಿ, ಹಗರೆ ಮುಖ್ಯ ರಸ್ತೆಯಲ್ಲಿ ಪೆಟ್ಟಿಗೆ ಅಂಗಡಿಗಳ ಹವಳಿ ಹೆಚ್ಚಾಗಿದ್ದು ಸರ್ಕಾರಿ ಶಾಲೆ ಮತ್ತು ಶೌಚಾಲಯದ ಮುಂಭಾಗದಲ್ಲೇ ಅಂಗಡಿ ತೆರೆದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸಂಬಂಧಪಟ್ಟವರು ಕ್ರಮ ಕೈಗಳ್ಳಬೇಕು ಎಂದು ಒತ್ತಾಯಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಮಾತನಾಡಿ, ಇದುವರೆಗೂ ತಾಲೂಕಿನ 12,775 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, 13ಸಾವಿರ ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ ಎಂದರು.
ಜಿಪಂ ಸದಸ್ಯ ಸೈಯದ್ ತೌμಕ್ ಮಾತನಾಡಿ, ಸನ್ಯಾಸಿಹಳ್ಳಿ ಪಿಡಿಒ ಕರ್ತವ್ಯಕ್ಕೆ ಗೈರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು. ಸಭೆಯಲ್ಲಿ ತಾ ಪಂ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷೆ ಜಮುನಾ, ಸದಸ್ಯೆ ಸುನೀತ ಉಪಸ್ಥಿತರಿದ್ದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.