ತಾಲೂಕಿಗೆ ಐನೋರಹೊಸಹಳ್ಳಿ ಗ್ರಾಪಂ ಮಾದರಿ: ಇಒ
Team Udayavani, Jun 27, 2020, 6:27 AM IST
ಬಂಗಾರಪೇಟೆ: ಕಳೆದ 5 ವರ್ಷಗಳಿಂದ ಅಕ್ರಮಗಳಿಲ್ಲದೆ ಪಾರದರ್ಶಕವಾಗಿ ಉತ್ತಮ ಆಡಳಿತ ನಡೆಸುವ ಮೂಲಕ ತಾಲೂಕಿನ ಐನೋರಹೊಸಹಳ್ಳಿ ಗ್ರಾಪಂ ಮಾದರಿ ಆಗಿದೆ ಎಂದು ತಾಪಂ ಇಒ ಎನ್. ವೆಂಕಟೇಶಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಐನೋರಹೊಸಹಳ್ಳಿ ಗ್ರಾಪಂ ಆಡಳಿತಾ ವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜನರು ತಮ್ಮ ಗ್ರಾಮಗಳಲ್ಲಿರುವ ಮೂಲ ಸೌಲಭ್ಯ ಬಗೆಹರಿಸುವರೆಂಬ ವಿಶ್ವಾಸದಿಂದ ಸದಸ್ಯರನ್ನು ಆಯ್ಕೆ ಮಾಡುವರು, ಮತದಾರರ ಅಂತರಾಳ ವನ್ನು ಅರಿತು ಸದಸ್ಯರು ಕೆಲಸ ಮಾಡಿದರೆ ಗಾಂಧಿ ಕಂಡಿದ್ದ ರಾಮ ರಾಜ್ಯದ ಕನಸು ಈಡೇರಲಿದೆ ಎಂದು ಹೇಳಿದರು.
ತಾಲೂಕಿನಲ್ಲೇ ಐನೋರಹೊಸಹಳ್ಳಿ ಗ್ರಾಪಂನಲ್ಲಿ ನರೇಗಾ ಕಾಮಗಾರಿ ಹೆಚ್ಚು ಕೈಗೊಳ್ಳಲಾಗಿದೆ. ಮುಂದೆ ಗ್ರಾಪಂಗೆ ಚುನಾವಣೆ ಘೋಷಣೆಯಾಗುವವ ರೆಗೂ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಲಿದ್ದು, ಅವರಿಗೂ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಧಾರಾಣಿ ನಾಗರಾಜ್ ಮಾತನಾಡಿದರು.
ಕಳೆದ 5 ವರ್ಷಗಳಿಂದ ಸರ್ಕಾರದ ಯೋಜನೆಗಳನ್ನು ಲೋಪವಿಲ್ಲದೆ ಅನುಷ್ಠಾನಗೊಳಿ ಸಲು ಹಾಗೂ ಉತ್ತಮ ಆಡಳಿತ ನೀಡಲು ಸಹಕರಿಸಿದ ಎಲ್ಲಾ ಸದಸ್ಯರಿಗೂ ಅಧಿಕಾರಿ ವರ್ಗಕ್ಕೂ ಕೃತಜ್ಞತೆಗಳನ್ನು ಸಲ್ಲಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಕವಿತಾ ಹನುಮಪ್ಪ, ಸದಸ್ಯರಾದ ಟಿ.ಎನ್.ರಾಮೇಗೌಡ, ರಾಮರೆಡ್ಡಿ, ಯಲುವಹಳ್ಳಿ ರಾಮಪ್ಪ, ತಾಪಂ ಎಡಿ ಮಂಜುನಾಥ್, ಪಿಡಿಒ ಚಂದ್ರಪ್ಪ, ಮುಖಂಡ ದೊಡ್ಡಅಂಕಂಡಹಳ್ಳಿ ರಾಮಕೃಷ್ಣಪ್ಪ, ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.