ಬೆಂಗಳೂರು ಕಟ್ಟಿದ ಕೆಂಪೇಗೌಡರ ಮೌಲ್ಯ ಚಿರಸ್ಥಾಯಿಯಾಗಬೇಕು


Team Udayavani, Jun 27, 2020, 6:52 AM IST

kempa dcm

ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಪ್ರತಿಯೊಬ್ಬರೂ ಸ್ಮರಿಸುವುದು ಸಹಜವೇ. ಅದರೆ ಅವರ ಆಡಳಿತ, ಅಭಿವೃದ್ಧಿಯ ದೃಷ್ಟಿ, ಕೃಷಿಗೆ ನೀಡಿದ ಮಹತ್ವ ಸ್ಮರಣೀಯ. ನಾಡಪ್ರಭು ಕೆಂಪೇಗೌಡರ ಜಯಂತಿ ಮತ್ತೆ ಬಂದಿದೆ. ಕೇವಲ  ಜಯಂತಿಯಂದು ಮಾತ್ರವಲ್ಲದೆ, ನಾಡಿನ ಪ್ರತಿ ಯೊಬ್ಬರೂ ಅನುದಿನವೂ ಸ್ಮರಿಸಲೇಬೇಕಾದ ಪ್ರಾತಃಸ್ಮರ ಣೀಯರಲ್ಲಿ ಅಗ್ರಮಾನ್ಯರು ನಮ್ಮ ನಾಡಪ್ರಭುಗಳು. ಅಪ್ರತಿಮ ಆಡಳಿತಗಾರರೂ, ಪ್ರಖರ ದೂರದೃಷ್ಟಿಯುಳ್ಳವರೂ ಆಗಿದ್ದ  ಅವರು, ಐದು ಶತಮಾನಗಳ ಹಿಂದೆ ಕಟ್ಟಿದ ಬೆಂಗಳೂರೆಂಬ ಕನಸಿನ ನಗರಿಯಲ್ಲಿ ನಾವೆಲ್ಲರೂ ಇದ್ದೇವೆ.

ನಾನು ಅವರ ಪ್ರಭಾವದಲ್ಲೇ ಇದ್ದೇನೆ ಮಾತ್ರವಲ್ಲದೆ, ಅದೆಷ್ಟೋ ವಿಷಯಗಳ ಬಗ್ಗೆ ಚಕಿತನಾಗಿದ್ದೇನೆ.  ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ನನಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಿ ನಾಡಪ್ರಭುಗಳ ವಿಷಯದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವ ಹಿಸಬೇಕೆಂದು  ಸೂಚಿಸಿದ್ದನ್ನು ಶಿರಸಾವಹಿಸಿ ಮಾಡುತ್ತಿದ್ದೇನೆ. ಮೂಲತಃ ಪ್ರಭುಗಳ ವೀರಸಮಾಧಿ ಯುಳ್ಳ ಕೆಂಪಾಪುರಕ್ಕೆ ಅನತಿದೂರದ ಗ್ರಾಮದಲ್ಲಿ ಹುಟ್ಟಿದ ನಾನು ಬಾಲ್ಯದಿಂದಲೇ ಪ್ರಭುಗಳ ಕಥೆಗಳನ್ನು, ಅವರ ಸಾಹಸಗಾಥೆಗಳನ್ನು ಕೇಳುತ್ತ  ಬೆಳೆದವನು.

ನಮ್ಮ ತಾಯಿ-ತಂದೆ ಹೇಳುತ್ತಿದ್ದ ಕಥೆಗಳು ನನ್ನ ಸ್ಮತಿಪಟಲದಲ್ಲಿ ಪಟ್ಟಾಗಿ ಅಚ್ಚೊತ್ತಿವೆ. ಜೀವನದಲ್ಲಿ ನನ್ನ ಪಯಣದ ಪಥಗಳೂ ಬದಲಾಗು  ತ್ತಿದ್ದಂತೆಯೇ ನನಗೆ ಕೆಂಪೇಗೌಡರ ಕುರಿತಾದ ಆಸಕ್ತಿ, ಅವರ ಬಗ್ಗೆ  ಅಧ್ಯಯನಶೀಲತೆಯ ಉತ್ಕಟತೆಯೂ ಹೆಚ್ಚಾಯಿತು. ಅದರಲ್ಲೂ ಶಾಸಕನಾದ ಮೇಲೆ, ಮಲ್ಲೇಶ್ವರ ಕ್ಷೇತ್ರದ ಮಹಾ ಜನತೆಯ ಆಶೋತ್ತರಗಳನ್ನು ಈಡೇರಿಸಲು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಾಗಲೆಲ್ಲ ಕೆಂಪೇಗೌಡರ ದಾರ್ಶನಿಕತೆ, ಅವರ ಅಭಿವೃದ್ಧಿಶೀಲತೆಯೂ ನನ್ನನ್ನು ಬಹುವಾಗಿ ಕಾಡಿದ್ದರಲ್ಲಿ ಅತಿಶಯವಿಲ್ಲ.

ಐದು ಶತಮಾನಗಳೇ ಆಗಿಹೋದ ಮೇಲೆಯೂ ಅವರ ಅಭಿವೃದ್ಧಿಯ ಕುರುಹು ಗಳು ಅಚ್ಚಳಿಯದೇ ಉಳಿದಿವೆ ಎಂದರೆ ಅವರಿಂದ  ಪ್ರಭಾವಿ ತನಾಗದೇ ಇರಲು ಹೇಗೆ ಸಾಧ್ಯ? ವಿಜಯನಗರ, ಅದರಲ್ಲೂ ಶ್ರೀಕೃಷ್ಣದೇವರಾಯರ ಸಮಕಾಲೀನರಾಗಿ ಅವರ ಸಾಮ್ರಾಜ್ಯದ ದಕ್ಷಿಣದಲ್ಲಿ ರಾಮರಾಜ್ಯದಂಥ ಆಡಳಿತ ನಡೆಸಿದ ಕೆಂಪೇಗೌಡರ ಬಗ್ಗೆ ಇನ್ನಷ್ಟು ಆಳವಾದ  ಅಧ್ಯಯನ ಆಗಬೇಕಿದೆ. ಬೆಂಗ ಳೂರು ಕಟ್ಟಿದರೆಂಬ ವಿಷಯಕ್ಕಿಂತ ನಂಬಿಕೆ,

ಆತ್ಮ ವಿಶ್ವಾಸ, ನಿಷ್ಠೆ ಮತ್ತು ಮೌಲ್ಯ ಎಂಬ ನಾಲ್ಕು ತಣ್ತೀಗಳ ಮೇಲೆ ಆಡಳಿತವನ್ನು ನಿಲ್ಲಿಸಿದ್ದ ಅವರು, ಜನಪರವಾಗಿ ಕೆಲಸ ಮಾಡಿದ್ದು ಹಾಗೂ  ಜೀವಿತದುದ್ದಕ್ಕೂ ಈ ತಣ್ತೀ ಗಳನ್ನು ಮೀರಿ ನಡೆಯದಿರುವುದು ನನ್ನ ಯೋಚನೆಗಳಲ್ಲಿ ಬದಲಾವಣೆ ತಂದ ಅಂಶಗಳಲ್ಲಿ ಪ್ರಮುಖವು ಎಂದು ನಿಸ್ಸಂಶಯವಾಗಿ ಹೇಳಬಲ್ಲೆ. ಕುಟಿಲತೆ ಇಲ್ಲದ ರಾಜನೀತಿ, ವಿಸ್ತರಣಾವಾದವಿರದ ರಣನೀತಿ  ಇವತ್ತಿಗೂ ಕೆಂಪೇಗೌಡರನ್ನು ರಾಜಕೀಯವಾಗಿ ಯೂ ಅಜರಾಮರರನ್ನಾಗಿ ಮಾಡಿದೆ.

ಅಭಿ  ವೃದ್ಧಿಯ ಅಜೆಂಡಾದೊಂದಿಗೆ ಸಾಗಿದ ಅವರು ಓರ್ವ ಸ್ವತಂತ್ರ ದೊರೆ ಅಥವಾ ಚಕ್ರವರ್ತಿಯೂ ಮಾಡಲು ಸಾಧ್ಯವಾಗದ್ದನ್ನು  ನಮಗಾಗಿ ಮಾಡಿಟ್ಟುಹೋಗಿದ್ದಾರೆ. 59 ವರ್ಷಗಳ ಅವರ ಅವಿಚ್ಛಿನ್ನ ಆಡಳಿತದಲ್ಲಿ ತಲೆ ತಲೆಮಾರು ಮರೆಯದ ಅದೆಷ್ಟೋ ಮೈಲುಗಲ್ಲುಗಳು ಸ್ಥಾಪನೆಯಾಗಿದ್ದವು. ಇವತ್ತಿನ ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ  ನಾಯಕನೂ ಕೆಂಪೇ ಗೌಡರಿಂದ ಕಲಿಯಲೇಬೇಕಾದ್ದು ಬಹಳಷ್ಟಿದೆ.

ಕೆಂಪೇಗೌಡ ಬೆಂಗಳೂರು ಮತ್ತದರ ಸುತ್ತಮುತ್ತಲಿನ ಪ್ರದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದರು. ಅತ್ತ ರಾಜಕೀಯ ಮೌಲ್ಯಗಳಿಗೆ ಬೆಲೆ  ಕೊಡುತ್ತಲೇ ಮತ್ತೂಂ ದೆಡೆ ತಮ್ಮ ಪರಿಪಾಲನೆಯ ನೆಲದ ಅಭಿವೃದ್ಧಿಗೆ ಒತ್ತು ನೀಡಿದರು. ಹೀಗಾಗಿ ರಾಜಕೀಯವಾಗಿಯೂ ಕೆಂಪೇ ಗೌಡರು ವರ್ತಮಾನದ ಪ್ರತಿಯೊಬ್ಬ ನಾಯಕನಿಗೂ ಮಾರ್ಗದರ್ಶಿ ಮತ್ತು ಆದರ್ಶ. ರಾಜಕೀಯ  ವಿದ್ಯಾರ್ಥಿಗಳು ಈ ಹಿನ್ನೆಲೆಯಲ್ಲಿ ಗೌಡರನ್ನು ಅಧ್ಯಯನ ಮಾಡಬೇಕಿದೆ.

ಹೊಸ ತಲೆಮಾರಿಗೆ ಹೇಳಬೇಕು: ನನ್ನ ಬಹು ಆಸೆ ಎಂದರೆ ಕೆಂಪೇಗೌಡರನ್ನು ಈಗಿನ ಹಾಗೂ ನಂತರದ ತಲೆಮಾರಿನ ಯುವಜನತೆಗೆ ಪರಿಚಯಿಸಬೇಕು. ಅಂತಿಮವಾಗಿ ನನ್ನ ಆಸೆ ಇಷ್ಟೇ. ಮುಂದಿನ ತಲೆಮಾರುಗಳು ಕೆಂಪೇಗೌಡರ ಬಗ್ಗೆ ಮಾತನಾಡಬೇಕು.  ನವಯುಗದ ಯುವಕ ಯುವತಿಯರಿಗೆ, ದೇಶ ವಿದೇಶಗಳ ಜನರು ನಾಡಪ್ರಭುಗಳ ಬಗ್ಗೆ ತಿಳಿಯಬೇಕು. ಅವರ ಅಭಿವೃದ್ಧಿಯ  ಮಾದರಿ, ಜನಪರ ಆಡಳಿತ, ರಾಜಕೀಯ ಮೌಲ್ಯಗಳು,  ವ್ಯಾಪಾರ-  ವಾಣಿಜ್ಯ ಚಟುವಟಿಕೆ, ಪರಿಸರ ಪ್ರೀತಿ ಇತ್ಯಾದಿಗಳು ಚಿರಸ್ಥಾಯಿಯಾಗಿ ಉಳಿಯಬೇಕು. ಇಷ್ಟು ಸಾಕಾರವಾದರೆ ಅದಕ್ಕಿಂತ ಧನ್ಯತೆ ಬೇರೆನಿದೆ?

* ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಉಪ ಮುಖ್ಯಮಂತ್ರಿ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.