ಅಪಾಯದ ಮುನ್ಸೂಚನೆ ಜಾಗತಿಕ ತಾಪಮಾನ ಏರಿಕೆ
Team Udayavani, Jun 28, 2020, 9:00 AM IST
ಜಗತ್ತು ಹಲವು ಅಪಾಯಗಳನ್ನು ಎದುರಿಸುತ್ತಿದೆ. ಇತ್ತೀಚೆಗಷ್ಟೇ ಅಮೆಜಾನ್ ಕಾಡುಗಳಲ್ಲಿ ಕಾಣಿಸಿಕೊಂಡ ಕಾಳಿYಚ್ಚಿನಿಂದಾಗಿ ಲಕ್ಷಾಂತರ ಪ್ರಾಣಿಗಳು ಬೆಂಕಿಗಾಹುತಿಯಾದವು. ಅಂಫಾನ ಎಂಬ ಚಂಡಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಈಗೀಗ ಹಿಮನದಿಗಳ ಕರುಗುವಿಕೆ, ಸಮುದ್ರ ಉಬ್ಬರಗಳ ಹೆಚ್ಚಳ, ಭೂ ಕಂಪನ, ಬಿರುಗಾಳಿ, ಅತಿವೃಷ್ಟಿ ..ಹೀಗೆ ಹೇಳುತ್ತಾ ಹೋದರೆ ಪ್ರಕೃತಿ ವಿಕೋಪಗಳ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತದೆ. ಇವುಗಳ ನೇರ ಪರಿಣಾಮವನ್ನು ಜಗತ್ತು ಎದುರಿಸಿ, ಕಣ್ಣೀರು ಹಾಕುತ್ತಿದೆ. ಹಾಗಾದರೆ ಇದಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನು ನಾವು ಕೇಳಿಕೊಂಡರೆ ಉತ್ತರ ಅದುವೇ, ಜಾಗತಿಕ ತಾಪಮಾನ ಏರಿಕೆ.
ಜಾಗತಿಕ ತಾಪಮಾನ ಏರಿಕೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಜೀವ ಸಂಕುಲವೇ ಸಮಸ್ಯೆ ಎದುರಿಸುವಂತಾಗಿದೆ. 2010-19ರ ದಶಕದಲ್ಲಿ ಅತೀ ಹೆಚ್ಚು ಜಾಗತಿಕ ತಾಪಮಾನ ಏರಿಕೆಯಾಗಿರುವುದು ಇತಿಹಾಸದಲ್ಲಿಯೇ ಮೊದಲು. ಇದು ಅಪಾಯಕಾರಿ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ಬಗ್ಗೆ ಅರಿವು ಕೂಡ ಮೂಡಿಸಲಾಗುತ್ತಿದೆ.
ಸರಳವಾಗಿ ಹೇಳುವುದಾದರೆ ಭೂ ಮಂಡಲದಲ್ಲಿ ತಾಪಮಾನ ಏರಿಕೆಯನ್ನೇ ಜಾಗತಿಕ ತಾಪಮಾನ ಏರಿಕೆ ಎನ್ನಲಾಗುತ್ತದೆ. ಇದರಿಂದ ಹವಾಮಾನದಲ್ಲಿ ಬದಲಾವಣೆ ಉಂಟಾಗುವ ಜತೆಗೆ ಹಲವು ವಿಕ್ಷಿಪ್ತ ಘಟನೆಗಳಿಗೂ ಕಾರಣವಾಗುತ್ತಿದೆ. ತಾಪಮಾನ ಏರಿಕೆಯಿಂದಾಗಿ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೆ„ಡ್ ಪ್ರಮಾಣ ಹೆಚ್ಚಳವಾಗಿ ವಾಯುಮಾಲಿನ್ಯ ಮತ್ತು ಹಸುರು ಮನೆಯ ಮೇಲೆ ನೇರ ಪರಿಣಾಮ ಉಂಟಾಗು ತ್ತಿದೆ. ಇದರಿಂದ ಭೂಮಿ ತನ್ನ ಸಮತೋಲನ ಕಳೆದುಕೊಂಡು ಹಲವು ಅಪಾಯಗಳನ್ನು ಎದುರಿಸುತ್ತದೆ.
ಕಾರಣ ಏನು?
ಮನುಷ್ಯ ತನ್ನ ವಿಲಾಸಿ ಜೀವನಕ್ಕಾಗಿ ಇಡೀ ಪರಿಸರ ವ್ಯವಸ್ಥೆಯನ್ನು ಬಲಿ ಕೊಟ್ಟಿರುವುದು ಜಾಗತಿಕ ತಾಪಮಾನ ಏರಿಕೆಗೆ ಪ್ರಥಮ ಕಾರಣವಾಗಿದೆ. ಇನ್ನು ಕೈಗಾರಿಕೆಗಳಿಂದ ವಿಷಾನಿಲ ಬಿಡುಗಡೆ, ಪರಿಸರ ನಾಶದಿಂದಾಗಿ ಕೂಡ ತಾಪಮಾನ ಏರುತ್ತಿದೆ.
ಪರಿಣಾಮಗಳೇನು?
ಜಾಗತಿಕ ತಾಪಮಾನದಿಂದಾಗಿ ಇಂದು ದೇಶದ ಕೃಷಿ ಕ್ಷೇತ್ರವೂ ನೇರ ಪರಿಣಾಮ ಅನುಭವಿಸುತ್ತಿದೆ. ಪ್ರಕೃತಿಯ ಅಸಮತೋಲನದಿಂದ ಅತಿವೃಷ್ಟಿ-ಅನಾವೃಷ್ಟಿಯಾಗಿ ಕೃಷಿ ಕ್ಷೇತ್ರ ಹಿನ್ನಡೆ ಅನುಭವಿಸುತ್ತದೆ.
ಪರಿಹಾರವೇನು?
ಜಾಗತಿಕ ತಾಪಮಾನ ಇಳಿಕೆ ಮಾಡಲು ವಿಶ್ವಸಂಸ್ಥೆ ಸಹಿತ ಎಲ್ಲ ದೇಶಗಳೂ ಕೂಡ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿವೆ. ಪರಿಸರ ಇದ್ದರೆ ನಾವು ಎಂಬ ಪ್ರಜ್ಞಾಪೂರ್ವಕ ತಿಳಿವಳಿಕೆಯಿಂದ ಈ ಕ್ರಮಕ್ಕೆ ಹಲವು ದೇಶಗಳು ಕೈಜೋಡಿಸಿವೆ. ಪರಿಸರವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿವೆ. ಅಲ್ಲದೇ
ಸೌರಶಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಪ್ಯಾರಿಸ್ ಒಪ್ಪಂದವೇ ಪರಿಹಾರ
ಕೈಗಾರಿಕೆ ಮತ್ತು ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೆ„ಡ್ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ 2015ರಲ್ಲಿ ಹಲವು ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದವು. ನವೀಕರಿಸಲಾಗದ ಇಂಧನಗಳನ್ನು ಹೊರತುಪಡಿಸಿ, ನವೀಕರಿಸಬಹುದಾದ ಇಂಧನಗಳ ಬಳಕೆಗೆ ಈ ಒಪ್ಪಂದದಲ್ಲಿ ಸಲಹೆ ನೀಡಲಾಗಿದೆ. ಆದರೆ ಈ ಒಪ್ಪಂದವನ್ನು ಅದೆಷ್ಟು ರಾಷ್ಟ್ರಗಳು ಸರಿಯಾಗಿ ಪಾಲಿಸುತ್ತಿವೆ ಎಂಬುದು ಯಕ್ಷ ಪ್ರಶ್ನೆ. ಈ ಒಪ್ಪಂದದಿಂದ ಅಮೆರಿಕ ಈಗಾಗಲೇ ಹೊರಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್ ಚೋಲ್‌ಗೆ ಬೇಡಿಕೆ
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.