ಅರ್ಥಶಾಸ್ತ್ರ ಇನ್ನೂ ಅರ್ಥವಾಗಬೇಕಿದೆ!


Team Udayavani, Jun 28, 2020, 9:30 AM IST

ಅರ್ಥಶಾಸ್ತ್ರ ಇನ್ನೂ ಅರ್ಥವಾಗಬೇಕಿದೆ!

ಅರ್ಥಶಾಸ್ತ್ರದ ಅರಿವಿನ ಕೊರತೆ ಅಭಿವೃದ್ಧಿಯ ವೇಗವನ್ನು ಪರೋಕ್ಷವಾಗಿ ಕೊಂಚ ಮಟ್ಟಿಗೆ ತಗ್ಗಿಸಿದೆ ಎನಿಸುತ್ತದೆ.

ಜೀವನದಲ್ಲಿ ಅರ್ಥಶಾಸ್ತ್ರ ಎಂಬುದು ಮುಖ್ಯ ಅಂಗ. ಬದುಕಿನಲ್ಲಿ ಹಣ, ಶ್ರಮ, ದುಡಿಮೆ, ಉಳಿತಾಯ ಇವೆಲ್ಲದರ ಬಗ್ಗೆ ಅರ್ಥಶಾಸ್ತ್ರ ಅರ್ಥವಾಗಿ ತಿಳಿಸಿಕೊಡುತ್ತದೆ. ಜೀವನದಲ್ಲಿ ಆರ್ಥಿಕ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕಾದರೆ ನಮಗೆ ಅರ್ಥಶಾಸ್ತ್ರದ ಜ್ಞಾನ ಅಗತ್ಯ. ಕೋವಿಡ್‌ 19 ವೈರಸ್‌ ಕಾಣಿಸಿಕೊಂಡ ಅನಂತರ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಚರ್ಚೆಯಾಗಿದ್ದು ರಾಷ್ಟ್ರಗಳ ಆರ್ಥಿಕ ವೃದ್ಧಿ ದರ(ಜಿಡಿಪಿ)ದ ಬಗ್ಗೆ. ಭಾರತವು ಇದಕ್ಕೆ ಹೊರತಾಗಿಲ್ಲ . 2019-20ರ ಕೊನೆಯ ತ್ತೈಮಾಸಿಕದಲ್ಲಿ ಜಿಡಿಪಿ ದರ ಶೇ. 4.2ರಷ್ಟು ಕುಸಿತದೊಂದಿಗೆ ದಾಖಲಾಯಿತು. ಕಳೆದ 11 ವರ್ಷಗಳಲ್ಲಿಯೇ ದಾಖಲಾದ ಕನಿಷ್ಠ ಆರ್ಥಿಕ ವೃದ್ಧಿ ದರ ಇದಾಗಿದ್ದು, ಇದನ್ನು ಅನೇಕ ಆರ್ಥಿಕ ತಜ್ಞರು ಸಹ ವಿಶ್ಲೇಷಿಸಿದರು. ಆರ್ಥಿಕ ಬೆಳವಣಿಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೂ ನೇರ ಸಂಬಂಧವಿರುವುದನ್ನು ನಾವೆಷ್ಟು ಬಲ್ಲೆವು ಎಂಬುದನ್ನು ಮನಗಾಣಬೇಕಿದೆ.

ಭಾರತದಲ್ಲಿ ಜನಸಂಖ್ಯೆ 130 ಕೋಟಿಯನ್ನು ದಾಟಿ ಮುನ್ನುಗ್ಗುತ್ತಿರುವಾಗ ಶೀಘ್ರ ಅಭಿವೃದ್ಧಿ ಏಕೆ ಸಾಧ್ಯವಾಗುತ್ತಿಲ್ಲ? ಹೀಗೆ ಯೋಚಿಸುತ್ತ ಹೋದರೆ, ಅದರ ನಂಟು ಬಡತನದ ವಿಷವರ್ತುಲದೊಂದಿಗೆ ಬೆಸೆದುಕೊಳ್ಳುತ್ತದೆ. ಕಡಿಮೆ ಆದಾಯ, ಕಡಿಮೆ ಉಳಿತಾಯ, ಕಡಿಮೆ ಹೂಡಿಕೆ, ಕನಿಷ್ಠ ಮಟ್ಟದ ಉತ್ಪಾದನೆ-ಕನಿಷ್ಠ ಕೂಲಿ(ವೇತನ).. ಹೀಗೆ ಒಂದಕ್ಕೊಂದು ನೇರ ಸಂಬಂಧ ಹೊಂದಿರುತ್ತದೆ.

ಹಾಗಾದರೆ ಬಡತನ ನಿಯಂತ್ರಿಸುವುದು ಹೇಗೆ? ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡರೆ ಸಾಕೇ?. ಆರ್ಥಿಕ ಸ್ಥಿತಿಗತಿಗಳ ಕುರಿತು ಅರಿವು ಮೂಡಿಸುವುದು ಮುಖ್ಯ ಎಂದೇಕೆ ಅನಿಸುವುದಿಲ್ಲ. ಕೋವಿಡ್‌ 19 ಭಾರತಕ್ಕೆ ಕಾಲಿಟ್ಟ ಅನಂತರ ಭಾರತ ಸರಕಾರವು ಹಲವಾರು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿತು. ದಿನಕ್ಕೊಂದು ಆಥಿìಕ ಪರಿಭಾಷೆಗಳನ್ನು ತಿಳಿಸುವಾಗ ಜನರು, ವಿದ್ಯಾರ್ಥಿಗಳು ಗೊಂದಲಕ್ಕೀಡಾದರು. ಇವುಗಳ ಅರ್ಥ ಹುಡುಕಲು ಗೂಗಲ್‌ ಮೊರೆ ಹೋದರು. ಆಗಷ್ಟೇ ನೋಡಿ, ಮತ್ತೆ ಮರೆತೇಬಿಟ್ಟರು. ಆದರೆ ದೈನಂದಿನ ಜೀವನದಲ್ಲಿ ಕೆಲವು ಆರ್ಥಿಕ ಪರಿಭಾಷೆಗಳನ್ನು ಬಹುಮುಖ್ಯವಾಗಿ ತಿಳಿದಿರಬೇಕಾದುದು ಅಗತ್ಯ. ಆದರೆ ಸಾಮಾನ್ಯವಾದ ರೆಪೋ ದರ, ರಿವರ್ಸ್‌ ರೆಪೋ ದರಗಳ ಬಗ್ಗೆ ಕೂಡ ಸಾಮಾನ್ಯ ಜ್ಞಾನ ಇಲ್ಲದಿರುವ ಮಾತು ಕೇಳಿಬಂದಾಗ ಆಗ ಜನ ಸಾಮಾನ್ಯರಿಗೆ ಅರ್ಥಶಾಸ್ತ್ರ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಅರಿವಿನ ಕೊರತೆ ಇದೆ ಎಂದೆನಿಸುತ್ತದೆ.

17ಕ್ಕಿಂತಲೂ ಅಧಿಕ ಪಾಲನ್ನು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಕೃಷಿ ವಲಯದ ಕುರಿತು ಬಹುತೇಕ ಕೃಷಿಕರಿಗೆ, ಅಭಿವೃದ್ಧಿಯಲ್ಲಿ ತಮ್ಮ ಪಾಲು ಎಷ್ಟಿದೆ ಎಂಬುದರ ಅರಿವಿದ್ದಂತೆ ಕಾಣುವುದಿಲ್ಲ. ಹೊಟೇಲ್‌ನಲ್ಲಿ ಭಕ್ಷ್ಯ ಭೋಜನಗಳನ್ನು ಗ್ರಾಹಕರು ಕೂತಲ್ಲಿಗೆ ತಂದು ಬಡಿಸುವ ಒಬ್ಬ ಸಪ್ಲಯರ್‌ರಿಗೆ ತಾನು ಸೇವಾ ವಲಯದ ಭಾಗವೆಂಬುದು ತಿಳಿದಿರುವುದಿಲ್ಲ. ಮರಗೆಲಸ ಮಾಡುವ ಬಡಗಿಗೆ ತಾನೊಬ್ಬ ಸಂಪನ್ಮೂಲ ವ್ಯಕ್ತಿಯೆಂಬುದು ಇನ್ನೂ ತಿಳಿಯಬೇಕಿದೆ. ಇವರೆಲ್ಲರ ಅರಿವಿನ ಕೊರತೆ ಅಭಿವೃದ್ಧಿಯ ವೇಗವನ್ನು ಪರೋಕ್ಷವಾಗಿ ಕೊಂಚ ಮಟ್ಟಿಗೆ ತಗ್ಗಿಸಿದೆ ಎನಿಸುತ್ತದೆ. ಹುಂಡಿಯಲ್ಲಿ ಇಟ್ಟ ಕಾಸು ಅಕ್ಷಯ ವಾಗದು,”ನಡೆಯುತ್ತಿದ್ದರೆ ನಾಣ್ಯ’ ಅಂದರೆ ಹಣವು ಸದಾ ಚಲನಶೀಲತೆಯಿಂದಿದ್ದರೆ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಾಗಿದೆ. ಅರ್ಥಶಾಸ್ತ್ರ ವ್ಯಕ್ತಿಗತವಾಗಿ, ಸಮುದಾಯದ ಭಾಗವಾಗಿ ಬೆಸೆದು ಕೊಂಡಿರುವ ಬಗೆ ಯನ್ನು ಎಲ್ಲರೂ ಗುರುತಿಸಿ ಅಭಿವೃದ್ಧಿಗೆ ಕೈ ಜೋಡಿಸುವ ಅಗತ್ಯವಿದೆ.


 ಶಕುಂತಲಾ ವಿನಯ್‌  ಬೆಂಗಳೂರು ವಿವಿ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.