ಹುಲಿ ಕಥೆ ಹೇಳ್ತಾರೆ ಗಿರಿರಾಜ್
ಮೆಹ್ತಾ ನಿರ್ಮಾಣದ ಅವನಿ ರಿಟರ್ನ್ಸ್
Team Udayavani, Jun 28, 2020, 4:41 AM IST
ನಿರ್ದೇಶಕ “ಜಟ್ಟ’ ಗಿರಿರಾಜ್ ಯಾವುದೇ ಚಿತ್ರ ಮಾಡಿದರೂ ಅದರಲ್ಲಿ ಹೊಸ ವಿಷಯ ಇದ್ದೇ ಇರುತ್ತೆ. ಅಷ್ಟೇ ಅಲ್ಲ, ಅವರ ಚಿತ್ರಗಳಲ್ಲಿ ಸಾಕಷ್ಟು ಸೂಕ್ಷ್ಮತೆ ಇರುತ್ತದೆ. ಅವರ ಹಿಂದಿನ ಸಿನಿಮಾಗಳನ್ನು ಗಮನಿಸಿದರೆ, ಅದರೊಳಗಿರುವ ಗಂಭೀರತೆ ಅರ್ಥವಾಗುತ್ತೆ. ಈಗ ಅವರು ಮತ್ತೂಂದು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ “ಅವನಿ ರಿಟರ್ನ್ಸ್’ ಎಂದು ಹೆಸರಿಡಲಾಗಿದೆ.
ಮಹಾರಾಷ್ಟ್ರದಲ್ಲಿ ಅವನಿ ಹೆಸರಿನ ಹುಲಿ ಎರಡು ವರ್ಷಗಳಿದಲೂ ಸುಮಾರು 13ಕ್ಕೂ ಹೆಚ್ಚು ಹಳ್ಳಿ ಜನರ ಪ್ರಾಣ ತೆಗೆದಿತ್ತು. ಅದರಿಂದಾಗಿ ಆ ಹುಲಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಶೂಟ್ ಮಾಡಲಾಯಿತು. ಆ ಬಳಿಕ ಹುಲಿಯನ್ನು ಸಾಯಿಸಬಾರದು ಎಂದು ಪ್ರಾಣಿ ಪ್ರಿಯರು ಕೂಡ ದೊಡ್ಡದ್ದಾಗಿಯೇ ಧ್ವನಿ ಎತ್ತಿದ್ದರು. ಆ ಪ್ರಕರಣದ ಕುರಿತಂತೆ ಗಿರಿರಾಜ್ ಅವರು ಒಂದು ಸ್ಕ್ರಿಪ್ಟ್ ಮಾಡಿಕೊಂಡು ಇದೀಗ “ಅವನಿ ರಿಟರ್ನ್ಸ್’ ಸಿನಿಮಾ ಮಾಡುತ್ತಿದ್ದಾರೆ.
ಈ ಸಿನಿಮಾವನ್ನು ಉಯದ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಯಲ್ಲಿ ತಯಾರು ಮಾಡಲಾಗುತ್ತಿದೆ. ಗಿರಿರಾಜ್ ಅವರು ಈ ಕಥೆ ಪೂರ್ಣಗೊಳಿಸುವ ಮುನ್ನ, ಕನ್ನಡಕ್ಕೆ ಮಾತ್ರ ಅಂದುಕೊಂಡಿದ್ದರು. ಆದರೆ, ಸ್ಕ್ರಿಪ್ಟ್ ಮಾಡಿದ ಬಳಿಕ ಈ ಕಥೆ ಎಲ್ಲಾ ಕಡೆ ಸಲ್ಲುವಂಥದ್ದು ಎಂಬುದನ್ನು ಅರಿತು ದಕ್ಷಿಣ ಭಾರತ ಭಾಷೆಯಲ್ಲಿ ಮಾಡುವ ಯೋಚನೆ ಮಾಡಲಾಗಿದೆಯಂತೆ.
ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಚಿತ್ರದಲ್ಲಿ ಗ್ರಾಫಿಕ್ಸ್‌ಗೆ ಹೆಚ್ಚು ಕೆಲಸವಿದೆ. ಆದ್ದರಿಂದ ಸಿನಿಮಾ ಮುಂದಿನ ವರ್ಷ ಶುರುವಾಗಲಿದೆ ಎಂದು ಹೇಳುವ ನಿರ್ಮಾಪಕ ಉದಯ್ ಮೆಹ್ತಾ, ಇದೇ ಮೊದಲ ಸಲ ಈ ರೀತಿಯ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿರುವುದು ನಮ್ಮ ಖುಷಿಯನ್ನು ಹೆಚ್ಚಿಸಿದೆ. ಸಿನಿಮಾದಲ್ಲಿ ಹುಲಿಯೇ ಹೀರೋ. ಉಳಿದಂತೆ ಒಂದಷ್ಟು ಪ್ರಮುಖ ಪಾತ್ರಗಳಿವೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಕೊಡುವುದಾಗಿ ಹೇಳುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.