ಯಾರ ಹೆಗಲಾದರೂ ಏರಬಲ್ಲದು ಕೋವಿಡ್
Team Udayavani, Jun 28, 2020, 11:13 AM IST
ಹೊಸದಿಲ್ಲಿ: ಆರಂಭದಲ್ಲೆಲ್ಲಾ 60 ವರ್ಷ ಮೇಲ್ಪಟ್ಟವರು, ಮಕ್ಕಳಿಗೆ ಕೋವಿಡ್ ವೈರಸ್ ಅಂಟಿಕೊಳ್ಳುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತಿತ್ತು. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಸೋಂಕು ತಗುಲುವ ಅಪಾಯ ಹೊಂದಿರುವವರ ಪಟ್ಟಿ ಕೂಡ ಬೆಳೆಯುತ್ತಿದೆ. ಈಗ ಗರ್ಭಿಣಿಯರು, ಬೊಜ್ಜು ದೇಹ ಹೊಂದಿರುವವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬಹುಬೇಗ ಕೊರೊನಾ ವೈರಾಣುವಿನ ಕೆಂಗಣ್ಣಿಗೆ ಬೀಳು ತ್ತಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಹೇಳಿದೆ.
ಮೇಲಿನ ಮೂವರು ಮಾತ್ರವಲ್ಲ, ಕಿಡ್ನಿಗೆ ಸಂಬಂಧಿಸಿದ ಕಾಯಿಲೆ, ಧೀರ್ಘಕಾಲದ ಶ್ವಾಸಕೋಶದ ಸಮಸ್ಯೆ (ಸಿಒಪಿಡಿ), ಕೆಂಪು ರಕ್ತ ಕಣಗಳಿಗೆ ಸಂಬಂಧಿಸಿದ ಸಿಕಲ್ ಸೆಲ್ ಅನಿಮಿಯ, ಅಂಗಾಂಗ ಕಸಿ ಪ್ರಕ್ರಿಯೆಗೆ ಒಳಪಟ್ಟವರು, ಟೆ„ಪ್ 2 ಮಧುಮೇಹ ಹೊಂದಿರುವವರು ಸಹ ಕೋವಿಡ್ ಅಪಾಯಕ್ಕೆ ತೀರಾ ಹತ್ತಿರದಲ್ಲಿದ್ದಾರೆ. ಈ ಸಮಸ್ಯೆಗಳನ್ನು ಹೊಂದಿರುವವರ ವಯಸ್ಸು ಎಷ್ಟೇ ಆಗಿದ್ದರೂ, ಯಾವುದೇ ಸಂದರ್ಭದಲ್ಲಾದರೂ ಸೋಂಕು ತಗುಲಬಹುದು ಎಂದು ಸಿ.ಡಿ.ಸಿ. ಸಂಶೋಧಕರು ಹೇಳಿದ್ದಾರೆ.
ಇದೇ ವೇಳೆ, “”ಅಸ್ತಮಾ ಸೇರಿ ಶ್ವಾಸಕೋಶದ ಇತರ ಎಲ್ಲ ಕಾಯಿಲೆಗಳು, ನರವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಪಿತ್ತಜನಕಾಂಗದ ತೊಂದರೆ ಹೊಂದಿರುವವರು ಹಾಗೂ ಈ ಹಿಂದೆ ಪಾರ್ಶ್ವವಾಯುವಿಗೆ ತುತ್ತಾದವರಿಗೂ ಸೋಂಕು ತಗುಲುವ ಅಪಾಯವಿದೆ. ರೋಗ ನಿರೋಧಕ ವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರ ಈ ಸೋಂಕಿನಿಂದ ಪಾರಾಗಬಹುದು” ಎಂದು ಸಿಡಿಸಿ ಉಪನಿರ್ದೇಶಕ ಡಾ| ಜೇಯ್ ಬಟ್ಲರ್ ಹೇಳಿದ್ದಾರೆ.
ಡೆಕ್ಸಾಮೆಥಾಸೋನ್ ಬಳಕೆಗೆ ಅನುಮತಿ
ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಕಡಿಮೆ ಬೆಲೆಯ ಸ್ಟಿರಾಯ್ಡ, ಡೆಕ್ಸಾಮೆಥಾಸೋನ್ ಬಳಕೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ.
ಮಧ್ಯಮ ಮತ್ತು ಗಂಭೀರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳಿಗೆ ಮಿಥೈಲ್ಪ್ರಡ್ನಿಸೊಲೋನ್ಗೆ ಬದಲು ಡೆಕ್ಸಾಮೆಥಾಸೋನ್ ಬಳಸುವಂತೆ ಸೂಚಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಕೋವಿಡ್ ಕ್ಲಿನಿಕಲ್ ಪ್ರೋಟೊಕಾಲ್ ಪರಿಷ್ಕರಿಸಿದ್ದು, ಡೆಕ್ಸಾಮೆಥಾಸೋನ್ ಬಳಕೆಗೆ ಶಿಫಾರಸ್ಸು ಮಾಡಿದೆ. ಈಗಾಗಲೇ ಡೆಕ್ಸಾಮೆಥಾಸೋನ್‌ನ್ನು ಸಂಧಿವಾತ ಸೇರಿದಂತೆ ಹಲವು ರೋಗಗಳ ಚಿಕಿತ್ಸೆ ವೇಳೆ ಉರಿಯೂತ ಶಮನಕ್ಕಾಗಿ ಬಳಸಲಾಗುತ್ತದೆ. ಇದೀಗ ಕೋವಿಡ್ ಚಿಕಿತ್ಸೆಗೂ ಇದನ್ನು ಬಳಸಲು ಶಿಫಾರಸ್ಸು ಮಾಡಲಾಗಿದೆ. ಆಮ್ಲಜನಕದ ಪೂರೈಕೆಯ ಅಗತ್ಯವಿರುವ ಮತ್ತು ಅತಿಯಾದ ಉರಿಯೂತದ ಸಮಸ್ಯೆ ಹೊಂದಿರುವ ಕೋವಿಡ್ ರೋಗಿಗಳಿಗೆ ಇದನ್ನು ಬಳಸಬಹುದು ಎಂದು ತಿಳಿಸಲಾಗಿದೆ. ಕಳೆದ 60 ವರ್ಷಗಳಿಂದ ಕಡಿಮೆ ಡೋಸ್‌ನ ಡೆಕ್ಸಾಮೆಥಾಸೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅತ್ಯಂತ ಅಗ್ಗದ ಔಷಧವಾಗಿದೆ. ಕೋವಿಡ್ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿ ಎಂಬುದು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಜೀವನ್ಮರಣ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ಇದನ್ನು ನೀಡಿದಾಗ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.