ಹೆಬ್ರಿ ಆಸ್ಪತ್ರೆ: ವೈದ್ಯರ ಸಹಿತ 7 ಸಿಬಂದಿಗೆ ಬಾಧೆ!
Team Udayavani, Jun 28, 2020, 9:00 AM IST
ಹೆಬ್ರಿ : ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಸಹಿತ 7 ಸಿಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶನಿ ವಾರ ಆಸ್ಪತ್ರೆಯನ್ನು, ಪಾಸಿಟಿವ್ ಬಂದವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಸಿಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಹೆಬ್ರಿ ತಾಲೂಕಿನ ಪ್ರಮುಖ ಸರಕಾರಿ ಆಸ್ಪತ್ರೆ ಇದಾಗಿದ್ದು, ದಿನನಿತ್ಯ ನೂರಾರು ರೋಗಿಗಳು ಬರುತ್ತಾರೆ. 2 ದಿನಗಳಿಂದ ಪರಿಸರದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಗೂ ಆರೋಗ್ಯ ತಪಾಸಣೆಯನ್ನು ಇದೇ ಸಿಬಂದಿ ಮಾಡಿದ್ದು, ಮಕ್ಕಳ ಪೋಷಕರು ಭೀತರಾಗಿದ್ದಾರೆ.
ಪಲಿಮಾರು: 4 ಮನೆ ಸೀಲ್‌ಡೌನ್
ಪಡುಬಿದ್ರಿ: ಹೆಬ್ರಿಯ ಸಮು ದಾಯ ಆರೋಗ್ಯ ಕೇಂದ್ರದಲ್ಲಿ ಐಸಿಟಿಸಿ ಕೌನ್ಸೆಲರ್ ಆಗಿರುವ 33ರ ಹರೆಯದ ಮಹಿಳೆ ಕೋವಿಡ್ ಬಾಧೆಗೊಳಗಾಗಿದ್ದಾರೆ. ಪಲಿಮಾರಿನ ಮನೆಯಿಂದ ದಿನಾಲೂ ಹೋಗಿ ಬರುತ್ತಿದ್ದ ಅವರನ್ನು ಇಂದು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ವಾಸವಿದ್ದ ಪಲಿಮಾರು ದರ್ಕಾಸ್ತಿನ 3 ಮನೆಗಳು ಹಾಗೂ ನಾಡ್ಪಾಲು ಗ್ರಾಮದ ಎನ್.ಎಸ್. ರಸ್ತೆಯ ಮನೆಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ.
ವೈದ್ಯೆಯ ಮನೆ ಸೀಲ್‌ಡೌನ್
ಕೋಟ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಸಾಲಿಗ್ರಾಮ ಕಾರ್ಕಡದ ನಿವಾಸಿಗೆ ಸೋಂಕು ಬಾಧಿಸಿರುವ ಕಾರಣ ಅವರು ವಾಸವಿರುವ ಕಾರ್ಕಡದ ಮನೆಯನ್ನು ಕಂಟೈನ್‌ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ ಹಾಗೂ ಮನೆಯವರನ್ನು ಹೌಸ್ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.