ಹಾಕಿ ಗೋಲ್ ಕೀಪರ್ ಸೂರಜ್ ಕರ್ಕೇರ ಸಾಯ್‌ನಲ್ಲೀಗ ಏಕಾಂಗಿ
ಮುಂಬಯಿಗೆ ಹೋದರೆ ಕೋವಿಡ್-19 ಭೀತಿ!
Team Udayavani, Jun 29, 2020, 6:21 AM IST
ಬೆಂಗಳೂರು: ಲಾಕ್‌ಡೌನ್ ವೇಳೆ ಸತತ 100 ದಿನಗಳ ಕಾಲ ಬೆಂಗಳೂರಿನ “ಸಾಯ್’ ಕಚೇರಿಯಲ್ಲಿ ಉಳಿದಿದ್ದ ಭಾರತದ ಹಾಕಿ ಆಟಗಾರರೆಲ್ಲ ಈಗ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಆದರೆ ಗೋಲ್‌ಕೀಪರ್ ಸೂರಜ್ ಕರ್ಕೇರ ಮಾತ್ರ ಸಾಯ್‌ನಲ್ಲೇ ಒಬ್ಬಂಟಿ ಯಾಗಿ ಉಳಿದುಕೊಂಡಿದ್ದಾರೆ. ಮುಂಬಯಿಯ ಮಲಾಡ್‌ನವರಾದ ಸೂರಜ್, ಅಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ.
24ರ ಹರೆಯದ ಗೋಲ್ ಕೀಪರ್‌ಗೆ ಜತೆ ನೀಡಲು ಕೋಚ್ ಗ್ರಹಾಂ ರೀಡ್ ಮತ್ತು ಕೆಲವು ಸಹಾಯಕ ಸಿಬಂದಿ ಮಾತ್ರವೇ ಇದ್ದಾರೆ.
“ನಾನು ಮನೆಗೆ ಬರುವ ಕುರಿತು ಕುಟುಂಬದವರಲ್ಲಿ ವಿಚರಿಸಿದೆ. ಆದರೆ ಇಲ್ಲಿ ಪರಿಸ್ಥಿತಿ ಭೀಕರವಾಗಿದೆ, ಅಲ್ಲೇ ಉಳಿಯುವಂತೆ ಸೂಚಿಸಿದರು. ಹೀಗಾಗಿ ಮುಂಬಯಿಗೆ ಹೋಗದಿರು ವುದೇ ಕ್ಷೇಮ ಎಂಬ ನಿರ್ಧಾರಕ್ಕೆ ಬಂದೆ’ ಎಂಬುದಾಗಿ ಸೂರಜ್ ಹೇಳಿದರು.
“ಇದೊಂದು ಕಠಿನ ನಿರ್ಧಾರ. ನಾನು ಮನೆಯಿಂದ ಇಷ್ಟು ಕಾಲ ಹೊರಗುಳಿದವನೇ ಅಲ್ಲ. ಆದರೆ ಈಗ ಅನಿವಾರ್ಯವಾಗಿದೆ. ಅಕಸ್ಮಾತ್ ಮುಂಬಯಿಗೆ ಹೋಗಿ ವೈರಸ್ ಏನಾ ದರೂ ಅಂಟಿಕೊಂಡರೆ ಇದರಿಂದ ಚೇತರಿಸಲು, ಮರಳಿ ಫಿಟ್‌ನೆಸ್ ಸಂಪಾದಿಸಲು ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳಲಿಲ್ಲ…’ ಎಂದರು.
ಹೀಗಿದೆ ದಿನಚರಿ…
“ಏನೂ ಕೆಲಸ ಇಲ್ಲದೆ, ಅಭ್ಯಾಸ ವನ್ನೂ ಮಾಡಲಾಗದೆ ಒಬ್ಬಂಟಿಯಾಗಿ ಇರುವುದು ಬಹಳ ಕಷ್ಟ. ಆದರೆ ಆಹ ಆಟಗಾರರೆಲ್ಲ ಕರೆ ಮಾಡಿ ಮಾತಾಡುತ್ತ ಇರುತ್ತಾರೆ. ಪ್ರಧಾನ ಕೋಚ್ ಗ್ರಹಾಂ ರೀಡ್, ಇತರ ಸಿಬಂದಿ ಇದ್ದಾರೆ. ಊಟ, ಉಪಾಹಾರದ ವೇಳೆ ಒಟ್ಟುಗೂಡಿ ಮಾತುಕತೆ ನಡೆಸುತ್ತೇವೆ. ಕ್ಯಾಂಪಸ್‌ನಲ್ಲಿ ಜಾಗಿಂಗ್ ಮಾಡುತ್ತೇನೆ. ಓದುವ ಹವ್ಯಾಸವಿದೆ. ಸಿನೆಮಾ ನೋಡುತ್ತೇನೆ. ಮಾನಸಿಕವಾಗಿ ಗಟ್ಟಿಗೊಳ್ಳಲು ಇಷ್ಟು ಸಾಕು’ ಎಂಬುದಾಗಿ ಕರ್ಕೇರ ತಮ್ಮ ದಿನಚರಿಯನ್ನು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.