ಕ್ವಾರಂಟೈನ್ ಸೂಚನೆ ಕಡೆಗಣಿಸಿದ ವೃದ್ಧನಿಗೆ ಸೋಂಕು
Team Udayavani, Jun 29, 2020, 9:38 AM IST
ಹರಿಹರ: ಹೋಂ ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ನೀಡಿದ ಸೂಚನೆ ಕಡೆಗಣಿಸಿದ ವೃದ್ಧರೊಬ್ಬರು ನಗರಕ್ಕೆ ವಾಪಸ್ಸಾಗುವ ಮೂಲಕ ಇಲ್ಲಿನ ಗಂಗಾನಗರಕ್ಕೆ ಸೋಂಕು ಹೊತ್ತು ತಂದಂತಾಗಿದೆ.
ಎಪಿಎಂಸಿ ಹಿಂಭಾಗದ ಗಂಗಾನಗರದ ವ್ಯಕ್ತಿಯೋರ್ವರಿಗೆ ಶನಿವಾರ ಸಂಜೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. 65 ವರ್ಷದ ಕೂಲಿ ಕೆಲಸ ಮಾಡುವ ಈ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಕೆಲ ದಿನಗಳ ಹಿಂದೆ ಹಾವೇರಿ ತಾಲೂಕು ದೇವರಗುಡ್ಡ ಪಿಎಚ್‌ಸಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ಭೇಟಿ ನೀಡಿದ್ದರು. ಆ ಮನೆಗೆ ಇವರ ಸಂಬಂಧಿ ಯಾದ ಮಂಡ್ಯದ ಹಾಟ್‌ಸ್ಪಾಟ್ ಪ್ರದೇಶದ ನಿವಾಸಿಯೊಬ್ಬರು ಬಂದಿದ್ದರು. ಈ ಮಾಹಿತಿ ತಿಳಿದ ಅಲ್ಲಿನ ಆರೋಗ್ಯ ಇಲಾಖೆಯವರು ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದರು. ಆದರೂ ಇವರು ಕಣ್ತಪ್ಪಿಸಿ ಗಂಗಾನಗರದ ಮಗಳ ಮನೆಗೆ ಆಗಮಿಸಿದ್ದಾರೆ. ಕೊಳಚೆ ಪ್ರದೇಶದಲ್ಲಿ ಸಾಮೂಹಿಕವಾಗಿ ಗಂಟಲು ದ್ರವ ಸಂಗ್ರಹಿಸುವಾಗ ಸೋಂಕಿತ ವ್ಯಕ್ತಿ ಹಾಗೂ ಆತನ ಕುಟುಂಬದವರು ಸಹ ಪರೀಕ್ಷೆಗೆ ಒಳಗಾಗಿದ್ದರು. ಶನಿವಾರ ಸೋಂಕು ದೃಢಪಡುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ವೃದ್ಧನನ್ನು ದಾವಣಗೆರೆ ಕೋವಿಡ್-19 ಆಸ್ಪತ್ರೆಗೆ ಸಾಗಿಸಿದರು.
ಈತನ ಪ್ರಾಥಮಿಕ ಸಂಪರ್ಕದಲ್ಲಿರುವ ಐವರು, ದ್ವಿತೀಯ ಸಂಪರ್ಕದಲ್ಲಿರುವ ಇಬ್ಬರ ದ್ರವ ಮಾದರಿ ಸಂಗ್ರಹಿಸಿ ಹೋಂ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಇದುವರೆಗೆ ಒಟ್ಟು 17 ಕೋವಿಡ್ ಪ್ರಕರಣ ವರದಿಯಾಗಿದ್ದು, ಈ ಪೈಕಿ ರಾಜನಹಳ್ಳಿಯ ಗರ್ಭಿಣಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಮರಳಿದ್ದಾರೆ. ಗಂಗಾನಗರದಲ್ಲಿ ಭಾನುವಾರ ಆರೋಗ್ಯ ಇಲಾಖೆ ಸಿಬ್ಬಂದಿ ಸಂಚರಿಸಿ ನಿವಾಸಿಗಳಿಗೆ ಸೂಚನೆ ನೀಡಿದರು.
ನಗರಸಭೆ ಸಿಬ್ಬಂದಿ ಸ್ವಚ್ಛತೆ ಕೈಗೊಂಡು ಕ್ರಿಮಿನಾಶಕ ಸಿಂಪಡಿಸಿದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್, ಡಾ| ಡಿ.ಎಂ. ನಟರಾಜ್, ಹಿರಿಯ ಆರೋಗ್ಯ ಸಹಾಯಕರಾದ ಎಂ.ವಿ. ಹೊರಕೇರಿ, ಎಂ. ಉಮ್ಮಣ್ಣ, ದಾದಾಪೀರ್, ಉಮ್ಲಾ ನಾಯಕ್, ಸಂತೋಷ್ ರೋಖಡೆ, ಗ್ರಾಮಲೆಕ್ಕಾಧಿಕಾರಿ ಹೇಮಂತ್ ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.