ಶರಣ ಸಾಹಿತ್ಯ ಪರಿಷತ್‌ನಿಂದ ಮಹಾಮನೆ ಕಾರ್ಯಕ್ರಮ
Team Udayavani, Jun 29, 2020, 9:55 AM IST
ಕಂಪ್ಲಿ: ಪಟ್ಟಣದ ತಾಲೂಕು ಶರಣ ಸಾಹಿತ್ಯ ಪರಿಷತ್ 119ನೇ ಮಹಾಮನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಾಸವಿ ಅನುದಾನಿತ ಹಿ.ಪ್ರಾ ಶಾಲೆ ಮುಖ್ಯಗುರು ರಾಜು ಬಿಲಂಕರ್ “ಶರಣ ಸಾಹಿತ್ಯದ ಔಚಿತ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜನಸಾಮಾನ್ಯರಿಗಾಗಿ ಸರಳ ಶೈಲಿಯಲ್ಲಿ ವಚನ ಸಾಹಿತ್ಯ ಸೃಷ್ಟಿಯಾಗುವ ಮೂಲಕ ಕನ್ನಡ ಸಾಹಿತ್ಯದ ವಿಶೇಷ ಸಾಹಿತ್ಯ ಪ್ರಕಾರವಾಗಿ ರೂಪುಗೊಂಡಿದೆ. ಶರಣರು ಎಲ್ಲ ಕಾಯಕಗಳನ್ನು ಸಮಾನ ಮತ್ತು ಶ್ರೇಷ್ಠವೆಂದು ಸಾರಿದ್ದಾರೆ. ಸ್ತ್ರೀ ಸಮಾನತೆ, ವೈಚಾರಿಕ ಪ್ರಜ್ಞೆ ಮೂಡಿಸುವ ಜತೆಗೆ ಮೌಡ್ಯ, ಅಸಮಾನತೆಯನ್ನು, ಶ್ರೇಣಿಕೃತ ಸಮಾಜ ವ್ಯವಸ್ಥೆ ವಿರೋ ಧಿಸುವಲ್ಲಿ ಶರಣರ ವಚನ ಸಾಹಿತ್ಯ ಗಟ್ಟಿ ನೆಲೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ತಮಾನ ಜೀವನವು ಮಾನವೀಯತೆಯ ಮೌಲ್ಯಗಳಿಂದ ವಿಮುಖವಾಗುತ್ತಿದ್ದು, ಕೇವಲ ಭೋಗ ಜೀವನ ಪ್ರೇರೇಪಿಸುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪರಿಷತ್ತಿನ ಪದಾಧಿಕಾರಿ ಎಸ್ .ಡಿ.ಬಸವರಾಜ, ಶಿಕ್ಷಕಿ ಸಾಹಿತಿ ವೀರಮ್ಮ ನಾಗರಾಜ, ಬಂಗಿ ದೊಡ್ಡ ಮಂಜುನಾಥ, ಈರಪ್ಪ ಸೊರಟೂರು, ಬಸವರಾಜ, ಶ್ಯಾಂಸುಂದರರಾವ್ ಸೇರಿದಂತೆ ಅನೇಕರಿದ್ದರು. ಈರಪ್ಪ ಸೊರಟೂರು ನಿರೂಪಿಸಿದರು. ಯೋಗ ಗುರು ಬಸವರಾಜ ಸ್ವಾಗತಿಸಿದರು. ಶ್ಯಾಂಸುಂದರರಾವ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.