ನೀರು ಹರಿಸುವ ವೇಳೆ ಕಾಲುವೆ ದುರಸ್ತಿ!
ಜುಲೈನಲ್ಲಿ ಕಾಲುವೆಗೆ ನೀರು ಸಾಧ್ಯತೆ
Team Udayavani, Jun 29, 2020, 4:29 PM IST
ಸಾಂದರ್ಭಿಕ ಚಿತ್ರ
ಗಂಗಾವತಿ: ತುಂಗಭದ್ರಾ ಯೋಜನೆಯ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಎಡದಂಡೆ ಕಾಲುವೆಯ ಒಳಮೈ ಭದ್ರಪಡಿಸುವ ಕಾಮಗಾರಿ ಕೈಗೊಳ್ಳಲು ರಾಜ್ಯ ಸರಕಾರ 63.19 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಮುಗಿಸಿ ಗುತ್ತೆಗೆದಾರನಿಗೆ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದೆ.
ಡ್ಯಾಂನಿಂದ 47 ಮೈಲ್ವರೆಗೆ ಎಡದಂಡೆ ಕಾಲುವೆಯ ಲೈನಿಂಗ್ ಅಭದ್ರವಾಗಿರುವ ಕಡೆ ಒಳಮೈ ಭದ್ರಪಡಿಸಲು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರತಿಬಾರಿಯೂ ಕಾಲುವೆಯ ಕ್ಲೋಸರ್ ಸಂದರ್ಭದಲ್ಲಿ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಕಾಲುವೆ ಕಾಮಗಾರಿ ಕೈಗೊಳ್ಳಲು ಕನಿಷ್ಠ 4-5 ತಿಂಗಳು ಬೇಕಾಗುತ್ತದೆ. ಜುಲೈ ತಿಂಗಳಲ್ಲಿ ಕಾಲುವೆಗಳಿಗೆ ನೀರು ಹರಿಸಲು ಯೋಜಿಸಿರುವಾಗ ಕಾಮಗಾರಿ ಮಾಡಲು ಟೆಂಡರ್ ಕರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಹಿಂದೆ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರಕಾರದ ಅವಧಿಯಲ್ಲೂ ಇದೇ ರೀತಿ ಅವರಸದಲ್ಲಿ ಕಾಮಗಾರಿ ಮಾಡಲು ಮುಂದಾದಾಗ ಬಿಜೆಪಿ, ರೈತ ಸಂಘ ಸೇರಿ ವಿವಿಧ ಸಂಘ ಸಂಸ್ಥೆಯ ಮುಖಂಡರು ಹೋರಾಟ ಮಾಡಿ ಕಾಮಗಾರಿ ನಡೆಸದಂತೆ ಒತ್ತಾಯಿಸಿದ್ದರು. ಎರಡು ವರ್ಷಗಳ ಹಿಂದೆ ಎಡದಂಡೆ ಕಾಲುವೆ ಲೈನಿಂಗ್ ಅಭದ್ರವಾಗಿರುವ ಕಡೆ ಲೈನಿಂಗ್ ಭದ್ರಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಪುನಃ ಲೈನಿಂಗ್ ದುರಸ್ತಿ ನೆಪದಲ್ಲಿ ಸರಕಾರದ ಹಣ ಪೋಲು ಮಾಡಲಾಗುತ್ತಿದೆ.
ಕಳೆದ ವರ್ಷ 19 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಮಲ್ಲಾಪೂರ, ರಾಂಪೂರ, ದಾಸನಾಳ ಸೇರಿ ವಿವಿಧೆಡೆ ಲೈನಿಂಗ್ ಕಾಮಗಾರಿ ನಡೆಸಲಾಗಿದೆ ಎಂದು ಬಿಲ್ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಪುನಃ ಲೈನಿಂಗ್ ದುರಸ್ತಿ ಮಾಡಲು 63.19 ಕೋಟಿ ಖರ್ಚು ಮಾಡುವ ಅವಶ್ಯಕತೆ ಇದೆಯಾ ಎಂದು ರೈತ ಮುಖಂಡರು ಪ್ರಶ್ನೆ ಮಾಡಿದ್ದಾರೆ.
ಅವಸರದ ಕಾಮಗಾರಿ: ಕಾಲುವೆ ಲೈನಿಂಗ್ ಕಾಮಗಾರಿಯನ್ನು ಕಾಲುವೆಗಳಿಗೆ ನೀರು ಹರಿಸುವ ಮುಂಚೆ ಮಾಡುವ ಭರದಲ್ಲಿ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲ. ಅವರಸರದಲ್ಲಿ ಕಾಮಗಾರಿ ಮಾಡಿ ಹಣ ಪೋಲು ಮಾಡುವ ಬದಲಿಗೆ ಕಾಲುವೆ ಕ್ಲೋಸರ್ ಸಂದರ್ಭದಲ್ಲಿ ಪ್ರಮುಖವಾಗಿ ಎಲ್ಲಿ ಕಾಲುವೆಯಲ್ಲಿ ಬೋಂಗಾ ಬಿದ್ದು ನೀರು ಪೋಲಾಗುವುತ್ತಿದೆ ಎಂದು ಪತ್ತೆ ಮಾಡಬೇಕು.
ಪ್ರಮುಖವಾಗಿ ಅಕ್ವಾಡೆಕ್ಟ್ ಇರುವ ಕಡೆ ನೀರು ಪೋಲಾಗುತ್ತಿದ್ದು, ಪ್ರಮುಖ ಅಕ್ವಾಡೆಕ್ಟ್ ದುರಸ್ತಿ ಮಾಡುವ ಅವಸರವಿದ್ದು, ಬರೀ ಲೈನಿಂಗ್ ಮಾಡಲು ಇಲಾಖೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸುತ್ತಿರುವುದು ಅನುಮಾನಕ್ಕೀಡು ಮಾಡಿದೆ. ಕಳೆದ ವರ್ಷ ಕೇಸರಟ್ಟಿ ಮತ್ತು ಸೋಮನಾಳ ಹತ್ತಿರ ಅಕ್ವಾಡೆಕ್ಟ್ ಹತ್ತಿರ ಕಾಲುವೆ ಕುಸಿತ ಕಂಡು ಬಂದಿತ್ತು.
ಎರಡ್ಮೂರು ವರ್ಷಗಳ ಹಿಂದೆ ತುಂಗಭದ್ರಾ ಎಡದಂಡೆ ಕಾಲುವೆಯ ಒಳಮೈ ಭದ್ರಪಡಿಸುವ (ಲೈನಿಂಗ್)ಕಾಮಗಾರಿ ಮಾಡಲಾಗಿದೆ. ಪುನಃ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಲೈನಿಂಗ್ ಮಾಡಲು 63.19 ಕೋಟಿ ವೆಚ್ಚದ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲು ಪೂಜೆ ಮಾಡುವ ಮೂಲಕ ಸಾರ್ವಜನಿಕರ ಕೋಟ್ಯಂತರ ರೂ. ಪೋಲು ಮಾಡುತ್ತಿರುವುದು ಅನ್ಯಾಯ. ಸರ್ಕಾರಕ್ಕೆ ಕಾಲುವೆ ಲೈನಿಂಗ್ ಭದ್ರಪಡಿಸುವ ಕಾಳಜಿ ಇದ್ದರೆ ಕಾಲುವೆ ಕ್ಲೋಸರ್ ಸಂದರ್ಭದಲ್ಲಿ ಕಾಮಗಾರಿ ಮಾಡಬೇಕು. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜುಲೈನಲ್ಲಿ ಕಾಲುವೆಗಳಿಗೆ ನೀರು ಹರಿಸುವ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಮಗಾರಿ ಮಾಡುತ್ತಿರುವುದು ಎಷ್ಟು ಸರಿ. ಕಾಮಗಾರಿ ನಿಲ್ಲಿಸುವಂತೆ ರೈತ ಸಂಘ ಹೋರಾಟ ರೂಪಿಸಲಿದೆ.ಚಾಮರಸಪಾಟೀಲ್ ಬೆಟ್ಟದೂರು ಕರ್ನಾಟಕ ರೈತ ಸಂಘ ಹಸಿರು ಸೇನೆ ಮುಖಂಡರು
ಎಡದಂಡೆ ಕಾಲುವೆಯ ಒಳಮೈ ಅಲ್ಲಲ್ಲಿ ಹಾಳಾಗಿದ್ದು, ಅಂತಹ ಕಡೆ ಲೈನಿಂಗ ಹರಿಸಲು ಸಿದ್ಧ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾಮಗಾರಿ ಮಾಡಲು ಅಸಾಧ್ಯವಾಗಿದೆ. ಡ್ಯಾಂ ಭರ್ತಿಯಾಗುವ ತನಕ ಆಯ್ದ ಕಡೆ ಕಾಮಗಾರಿ ಮಾಡಿ ಮುಂದಿನ ಕಾಮಗಾರಿಯನ್ನು ಕ್ಲೋಸರ್ ಸಂದರ್ಭದಲ್ಲಿ ಮಾಡುವಂತೆ ಗುತ್ತೆದಾರನಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ಅವಧಿ 12 ತಿಂಗಳಾಗಿದ್ದು ಅನುದಾನ ವಾಪಸ್ ಹೋಗುವುದಿಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ. –ಪರಣ್ಣ ಮುನವಳ್ಳಿ, ಶಾಸಕರು
-ಕೆ. ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.