ಬ್ರಹ್ಮಾವರ: ಕಳಪೆ ಗುಣಮಟ್ಟದ ಕಾಂಕ್ರೀಟ್ ರಸ್ತೆ
Team Udayavani, Jun 30, 2020, 5:24 AM IST
ಬ್ರಹ್ಮಾವರ: ಬ್ರಹ್ಮಾವರ ಪರಿಸರದಲ್ಲಿ ಹಲವು ರಸ್ತೆಗಳು ಕಾಂಕ್ರಿಟೀಕರಣಗೊಂಡಿದೆ. ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯಡಿ, ಜಿ.ಪಂ. ಯೋಜನೆಯಡಿ ಹಾಗೂ ಇತರೆ ಯೋಜನೆಯಡಿ ಡಾಂಬರೀಕರಣ ರಸ್ತೆಗಳನ್ನು ನವೀಕರಿಸಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಾಡುಗೊಳಿಸಿ ಕಾಮಗಾರಿ ಮಾಡಲಾಗಿದೆ. ಆದರೆ ಹಲವು ಕಡೆ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ.
ಕಳೆದ 2 ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ಚಾಂತಾರು ಅಗ್ರಹಾರ ರಸ್ತೆ ಕಾಂಕ್ರಿಟೀಕರಣಗೊಳಿಸಲಾಯಿತು. ಕೇವಲ 2 ತಿಂಗಳಲ್ಲಿ ರಸ್ತೆಯು ಸಂಪೂರ್ಣವಾಗಿ ಬಿರುಕುಬಿಟ್ಟು ಕಾಮಗಾರಿ ಗುಣಮಟ್ಟವನ್ನು ಎತ್ತಿ ತೋರಿಸುತ್ತಿದೆ. ಈಗ ಅದಕ್ಕೆ ತೇಪೆ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.
ಈ ಹಿಂದೆ ಕಾಂಕ್ರೀಟ್ ರಸ್ತೆಗಳನ್ನು ಕಬ್ಬಿಣದ ಸರಳುಗಳಿಂದ ನಿರ್ಮಾಣ ಮಾಡುತ್ತಿದ್ದು, ಹತ್ತಾರು ವರ್ಷ ಬಾಳಿಕೆ ಬಂದಿರುವ ಉದಾಹರಣೆಗಳಿದೆ. ಆದರೆ ಈಗ ಇಲಾಖೆ ಬೇರೆ ಬೇರೆ ನೆಪಗಳನ್ನೊಡ್ಡಿ ಈ ರೀತಿ ಕಳಪೆ ಕಾಮಗಾರಿಗೆ ಸಹಕಾರ ನೀಡುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇಂತಹ ಕಾಮಗಾರಿಗಳಿಗೆ ಕಡಿವಾಣ ಹಾಕುವುದರ ಮೂಲಕ ಜನರ ತೆರಿಗೆ ಹಣ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕಾಗಿ ಹೇರೂರು ನಾಗರೀಕ ಹೋರಾಟ ಸಮಿತಿ ಆಗ್ರಹಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.