ಚೀನಿ ಸೇನೆಗೆ ಆಘಾತ ನೀಡುತ್ತೆ ಘಾತಕ್ ಪಡೆ
Team Udayavani, Jun 30, 2020, 6:27 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಭಾರತ ಹಾಗೂ ಚೀನ ನಡುವಿನ ಬಿಗುವಿನ ವಾತಾವರಣ ದಿನೇ ದಿನೆ ಬಿಗಡಾಯಿಸುತ್ತಾ ಸಾಗಿರುವ ನಡುವೆಯೇ ಎಲ್ಎಸಿಯಲ್ಲಿ ನಿಯೋಜನೆಗೊಂಡಿರುವ ತನ್ನ ಸೈನಿಕರಿಗೆ ಚೀನ, ಮಾರ್ಷಲ್ ಆರ್ಟ್ಸ್ ತರಬೇತಿ ನೀಡುತ್ತಿದೆ.
ಆದರೆ, ಭಾರತವೇನೂ ಕೈಕಟ್ಟಿ ಕುಳಿತಿಲ್ಲ. ಚೀನ ಯಾವುದೇ ರೀತಿಯ ದಾಳಿ ನಡೆಸಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥವಾಗಿರುವ ಯೋಧರ ಪಡೆಗಳು ಈಗಾಗಲೆ ಭಾರತದ ಪಾಳಯದಲ್ಲಿ ಸರ್ವ ಸನ್ನದ್ಧವಾಗಿ ನಿಂತಿವೆ.
ಅಂತಹವುಗಳಲ್ಲಿ ಒಂದು ‘ಘಾತಕ್’ ಕಮಾಂಡೊ ಪಡೆ. ಘಾತಕ್ ಅದೆಷ್ಟು ಸಮರ್ಥ ಕಮಾಂಡೊಗಳನ್ನು ಒಳಗೊಂಡ ಪಡೆ ಎಂದರೆ, ಚೀನದ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದ ಸೈನಿಕರು ಈ ಕಮಾಂಡೊಗಳ ಮುಂದೆ ಮಂಕಾಗುತ್ತಾರೆ.
ಏನಿದು ಘಾತಕ್ ಪಡೆ?
– ಕಾಲಾಳು ಪಡೆಯಲ್ಲೇ ದೈಹಿಕವಾಗಿ ಅತ್ಯಂತ ಸದೃಢರಾಗಿರುವ ಯೋಧರ ತಂಡ ಇದು.
– ಪ್ರತಿಯೊಬ್ಬ ಘಾತಕ್ ಕಮಾಂಡೊಗೆ 45 ದಿನಗಳ ಕಠಿನ ತರಬೇತಿ.
– ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದಿರುವ ಕಮಾಂಡೊಗಳು, ಮಲ್ಲ ಯುದ್ಧದಲ್ಲೂ ಪ್ರವೀಣರು.
– 35 ಕೆ.ಜಿ ಭಾರ ಹೊತ್ತು 40 ಕಿ.ಮೀ ದೂರದವರೆಗೆ ಓಡುವ ಸಾಮರ್ಥ್ಯ ಕಮಾಂಡೊಗಳಿಗಿರುತ್ತದೆ.
– ವಿಶೇಷ ಕಾರ್ಯಾಚರಣೆ, ಯುದ್ಧದ ವೇಳೆ ಭಾರೀ ತೂಕದ ಶಸ್ತ್ರಾಸ್ತ್ರ ಹೊತ್ತು ಮುನ್ನೆಲೆಯಲ್ಲಿ ನಿಂತು ಹೋರಾಡುವುದು ಇದರ ಕೆಲಸ.
– ಯಾರ ಬೆಂಬಲವೂ ಇಲ್ಲದೆ ತಾವೊಬ್ಬರೇ ಶತ್ರುವಿನ ಮೇಲೆ ದಾಳಿ ಮಾಡುವುದು ಇವರ ವೈಶಿಷ್ಟ್ಯ.
– ಹೆಲಿಬಾರ್ನ್ ದಾಳಿ, ಪರ್ವತ ಸಂಗ್ರಾಮ, ರಾಕ್ ಕ್ಲೈಂಬಿಂಗ್, ಡೆಮಾಲಿಷನ್, ಮುಖಾಮುಖಿ ಕಾದಾಟ ಮತ್ತು ಆಡಳಿತ, ವ್ಯವಸ್ಥಾಪನೆ ಕುರಿತಂತೆಯೂ ತರಬೇತಿ ಪಡೆದಿರುತ್ತಾರೆ.
ಎಲ್ಲಿದೆ ಈ ಘಾತಕ್ ಪಡೆ?
ಚೀನಿ ಸೈನಿಕರಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಿ ಲಡಾಖ್ ಬಳಿಯ ಗಡಿಯಲ್ಲಿ ನಿಯೋಜಿಸಲಾಗಿದೆ. ಸರಿಯಾಗಿ ಅವರಿಗೆ ಎದುರಾಗಿ ಭಾರತದ ಭಾಗದ ಗಡಿಯಲ್ಲಿ ಘಾತಕ್ ಕಮಾಂಡೊಗಳು ನಿಂತಿದ್ದಾರೆ.
ನಮ್ಮ ಬೆಳಗಾವಿಯಲ್ಲಿ ತರಬೇತಿ
ವಿಶೇಷವೇನೆಂದರೆ ಘಾತಕ್ ಕಮಾಂಡೊಗಳಿಗೆ ತರಬೇತಿ ನೀಡುತ್ತಿರುವುದು ಬೆಳಗಾವಿಯಲ್ಲಿ. ಸಾಮಾನ್ಯವಾಗಿ ಈ ಪಡೆಯಲ್ಲಿ 20 ಕಮಾಂಡೊಗಳಿರುತ್ತಾರೆ. ಆ ಪೈಕಿ, ಒಬ್ಬ ಕಮಾಂಡಿಂಗ್ ಕ್ಯಾಪ್ಟನ್, ಇಬ್ಬರು ಅನಿಯೋಜಿತ ಅಧಿಕಾರಿಗಳು, ಮಾರ್ಕ್ಸ್ ಮ್ಯಾನ್ ಮತ್ತು ಸ್ಪಾಟರ್ ಜೋಡಿ, ಲೈಟ್ ಮೆಷೀನ್ ಗನ್ನರ್ಗಳು ಮತ್ತು ರೇಡಿಯೋ ಆಪರೇಟರ್ಗಳು ಈ ತಂಡದಲ್ಲಿರುತ್ತಾರೆ. ಉಳಿದವರು ದಾಳಿ ಪಡೆಯ ರೀತಿ ಕಾರ್ಯನಿರ್ವಹಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.