ಪುತ್ರಿಗೆ ನಿದ್ದೆ ಮಾತ್ರೆ ಕೊಟ್ಟು ಅತ್ಯಾಚಾರ: ದೂರು
Team Udayavani, Jun 30, 2020, 5:59 AM IST
ಬೆಂಗಳೂರು: ಶೀತದಿಂದ ಬಳಲುತ್ತಿದ್ದ ಪುತ್ರಿಗೆ ನಿದ್ದೆ ಮಾತ್ರೆ ಕೊಟ್ಟು, ಸ್ವತಃ ತಂದೆ ಅತ್ಯಾ ಚಾರವೆಸಗಿದ ವಿಕೃತ ಘಟನೆ ಬೆಂಗಳೂರಿನ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಸಂಬಂಧ 19 ವರ್ಷದ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಬೆಳ್ಳಂದೂರಿನ ಹರಳೂರು ಗ್ರಾಮದ ನಿವಾಸಿ ಆರೋಪಿ ರಾಕೇಶ್ (40)ನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ರಾಕೇಶ್, ನಗರದ ಮಹಿಳೆಯನ್ನು 2ನೇ ವಿವಾಹವಾಗಿದ್ದು, ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಮೊದಲ ಪತ್ನಿಯೊಂದಿಗೆ ಏಳು ವರ್ಷಗಳ ಹಿಂದೆ ವಿಚ್ಛೇದನ ಪಡೆದು 2ನೇ ವಿವಾಹವಾಗಿದ್ದ. ಪಿಯುಸಿ ವ್ಯಾಸಂಗ ಮಾಡಿರುವ ಸಂತ್ರಸ್ತೆ ಕಾಲ್ ಸೆಂಟರ್‌ನಲ್ಲಿ ಉದ್ಯೋಗಿ ಯಾಗಿ ದ್ದಳು. ತಾಯಿ ಜತೆ ಜಗಳವಾಡಿಕೊಂಡು ಒಂದೂವರೆ ತಿಂಗಳ ಹಿಂದೆ ಹರಳೂರಿನಲ್ಲಿರುವ ತಂದೆ ಮನೆಗೆ ಬಂದಿದ್ದಳು.
ಜೂ. 23ರ ರಾತ್ರಿ ಸಂತ್ರಸ್ತೆ ಶೀತ ಇದೆ ಎಂದು ತಂದೆ ಬಳಿ ಹೇಳಿದ್ದಳು. ಆರೋಪಿ ಶೀತ ಕಡಿಮೆಯಾಗುವ ಮಾತ್ರೆ ಎಂದು ನಿದ್ದೆ ಮಾತ್ರೆ ಕೊಟ್ಟಿದ್ದಾನೆ. ಮಾತ್ರೆ ಸೇವಿಸಿದ ಯುವತಿ ನಿದ್ದೆಗೆ ಜಾರಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಯುವತಿ ಮೇಲೆ ಅತ್ಯಾ ಚಾರವೆಸಗಿದ್ದಾನೆ. ಮರುದಿನ ಮುಂಜಾನೆ ಬೆಳಗ್ಗೆ 9ರ ಸುಮಾರಿಗೆ ಎಚ್ಚರ ಗೊಂಡಾಗ ತಂದೆ ಪಕ್ಕದಲ್ಲಿ ಮಲಗಿದ್ದನ್ನು ಕಂಡು ಭಯಗೊಂಡಿದ್ದಾಳೆ.
ಆ ನಂತರ ಸಂತ್ರಸ್ತೆ ಘಟನೆ ಬಗ್ಗೆ ಮಲತಾಯಿ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಆಕೆ, ತನ್ನ ಪತಿಗೆ ನಿಂದಿಸಿದ್ದಾಳೆ. ಸಂತ್ರಸ್ತೆಗೂ ಸಮಾಧಾನ ಮಾಡಲು ಯತ್ನಿಸಿದ್ದಾಳೆ. ಆದರೆ, ತಂದೆ ವಿಕೃತಿಯಿಂದ ನೊಂದಿದ್ದ ಸಂತ್ರಸ್ತೆ ಕೂಡಲೇ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಆರಂಭದಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದ ಸಂತ್ರಸ್ತೆ, ಹೆದರಿ ಶೌಚಾಲಯಕ್ಕೆ ಬಳಸುವ ರಾಸಾಯನಿಕ ದ್ರಾವಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಪೊಲೀಸರು ಹೇಳಿದರು.
ಠಾಣೆಯಲ್ಲೇ ಅಸ್ವಸ್ಥಳಾದ ಸಂತ್ರಸ್ತೆ: ಒಂದೆರಡು ದಿನಗಳ ಬಳಿಕ ಠಾಣೆಗೆ ಬಂದು ದೂರು ನೀಡುವ ವೇಳೆ ಅಸ್ವಸ್ಥಗೊಂಡಿದ್ದಾಳೆ. ಪೊಲೀಸರೇ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸಂತ್ರಸ್ತೆ ವೈದ್ಯಕೀಯ ಪರೀಕ್ಷೆ ವರದಿ ಬರಬೇಕಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಮಲತಾಯಿಯೂ ಅಡುಗೆ ಕೆಲಸಕ್ಕೆ ಹೋಗಿದ್ದರು ಎಂದು ಹೇಳಿಕೆ ಕೊಟ್ಟಿದ್ದಾಳೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.