ಪ್ರತಿ ನೂರರಲ್ಲಿ 10 ಪಾಸಿಟಿವ್ ಪ್ರಕರಣ
Team Udayavani, Jun 30, 2020, 6:23 AM IST
ಬೆಂಗಳೂರು: ನಗರದಲ್ಲಿ ಕಳೆದ ಸುಮಾರು ನಾಲ್ಕು ತಿಂಗಳಲ್ಲಾದ ಒಟ್ಟಾರೆ ಪ್ರಕರಣಗಳಿಗಿಂತ ಹೆಚ್ಚು ಸೋಂಕು ಪ್ರಕರಣಗಳು ಕಳೆದ ಕೇವಲ ಮೂರು ದಿನಗಳಲ್ಲಿ ದಾಖಲಾಗಿದ್ದು, ಅಕ್ಷರಶಃ ತಲ್ಲಣ ಸೃಷ್ಟಿಸಿದೆ. ಸೋಮವಾರ 738 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜೂ.27, 28ರಂದು ಕ್ರಮವಾಗಿ 596 ಹಾಗೂ 783 ಪ್ರಕರಣ ದಾಖಲಾಗಿವೆ. ಅಂದರೆ ಒಟ್ಟಾರೆ ಕಳೆದ 3 ದಿನಗಳಲ್ಲಿ ನಗರದಲ್ಲಿ 2,117 ಜನ ಸೋಂಕಿತರಾಗಿದ್ದಾರೆ.
ಆದರೆ, ಮಾ.1ರಿಂದ ಜೂ. 26ರವರೆಗೆ 1,935 ಪಾಸಿಟಿವ್ ಪ್ರಕರಣ ಕಂಡು ಬಂದಿವೆ. ಈ ಮಧ್ಯೆ ಕಳೆದೆರಡು ದಿನಗಳಿಂದ ಗುಣಮುಖರಾಗಿರುವ ಸಂಖ್ಯೆಯೂ ಶೂನ್ಯ. ಇದು ಸೋಂಕಿನ ತೀವ್ರತೆ ಬಿಂಬಿಸುತ್ತದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಒಂದೇ ದಿನದಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. 3,427 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಇಡೀ ದಿನ 7,910 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಅಂದರೆ ಪ್ರತಿ ನೂರರಲ್ಲಿ ಹತ್ತು ಜನರಿಗೆ ಸೋಂಕು ಕಂಡುಬಂದಿದೆ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 4,052 ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 17,148 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಇನ್ನು ದಿನದ ಅಂತ್ಯಕ್ಕೆ 178 ಐಸಿಯುನಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 ವರ್ಷ ಕೆಳಗಿನ 25 ಮಕ್ಕಳಿಗೆ ಸೋಂಕು: ವಯಸ್ಕರು, ವೃದ್ಧರು ಮಾತ್ರವಲ್ಲ, ಮಕ್ಕಳಿಗೂ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸೋಮವಾರ 10 ವರ್ಷದ ಒಳಗಿನ 25 ಮಕ್ಕಳಿಗೆ ವೈರಸ್ ತಗುಲಿದೆ. ಈ ಮೂಲಕ ಕಳೆದ 3 ದಿನದಲ್ಲಿ ನೂರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.
ಚಿಕಿತ್ಸೆ ಸಿಗದೆ ಅಲೆದಾಟ: ಗೊಟ್ಟಿಗೆರೆಯ 45 ವರ್ಷದ ಕೋವಿಡ್ 19 ಸೋಂಕಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆ ಅಲೆದಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೋಂಕು ದೃಢಪಟ್ಟ ವ್ಯಕ್ತಿಗೆ ಕಳೆದ ಶುಕ್ರವಾರ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನಲೆ ಅವರನ್ನು ಮೊದಲು ಜಯನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಹಾಸಿಗೆ ಅಲಭ್ಯತೆ ಕಾರಣ ನೀಡಿ ವಾಪಸ್ ಕಳುಹಿಸಲಾಗಿದೆ. ನಂತರ ರೋಗಿಯನ್ನು ದಾಖಲಿಸಲು ವಿಕ್ಟೋರಿಯಾ, ಬನ್ನೇರುಘಟ್ಟ ರಸ್ತೆ ಆಸ್ಪತ್ರೆ, ಕೆಂಗೇರಿ ಬಳಿಯ ಆಸ್ಪತ್ರೆಗಳಲ್ಲೂ ದಾಖಲು ಮಾಡಿಕೊಂಡಿಲ್ಲ.
ರಾಜೀವ್ ಗಾಂಧಿ ಆಸ್ಪತ್ರೆಯಲ್ಲೂ ಹಾಸಿಗೆ ಸಿಗದೆ ರೋಗಿ ಪರದಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಕೊನೆಗೆ ಪ್ರಕ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ತುಮಕೂರು ರಸ್ತೆ ಮೇಲ್ಸೇತುವೆ ಮೇಲೆ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಬಿದ್ದಿದ್ದು, ಪೀಣ್ಯ ಪೊಲೀಸರು ಆ್ಯಂಬುಲನ್ಸ್‌ಗೆ ಫೋನ್ ಮಾಡಿ ಗಂಟೆಗಳೇ ಕಳೆದರೂ ಬರಲಿಲ್ಲ. ವ್ಯಕ್ತಿ ಜ್ವರದಿಂದ ಬಳಲುತ್ತಿದ್ದರಿಂದ ಯಾರೂ ಹತ್ತಿರ ಸುಳಿಯಲಿಲ್ಲ. ಹೊಯ್ಸಳ ವಾಹನ ಅಡ್ಡಲಾಗಿ ನಿಲ್ಲಿಸಿ ಕಾವಲು ನೀಡಲಾಗಿದೆ. 4 ತಾಸಿನ ನಂತರ ಆ್ಯಂಬುಲನ್ಸ್ ಬಂದಿದ್ದು, ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
5.99ಲಕ್ಷ ರೂ. ಸಂಗ್ರಹ: ಕೋವಿಡ್-19 ಸೋಂಕು ನಿಯಂತ್ರಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ , ಮುಖಗವಸು (ಮಾÓR…) ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಮಾರ್ಷಲ್‌ಗಳು ದಂಡ ಸಂಗ್ರಹಿಸುತ್ತಿದ್ದು, ಸೋಮವಾರ ಮಾಸ್ಕ್ ಧರಿಸದ 2,733 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 264 ಮಂದಿ ಸೇರಿ 2,997 ಮಂದಿಯಿಂದ ಒಟ್ಟು 5.99 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಬೆಂಗಳೂರು ಪೂರ್ವ 438, ಪಶ್ಚಿಮ 508, ದಕ್ಷಿಣ 885, ಮಹದೇವಪುರ 283, ರಾಜರಾಜೇಶ್ವರಿ ನಗರ 317, ಯಲಹಂಕ 113, ದಾಸರಹಳ್ಳಿ 40, ಬೊಮ್ಮನಹಳ್ಳಿ ವಲಯದಲ್ಲಿ 411 ಮಂದಿಗೆ ದಂಡ ಹಾಕಲಾಗಿದೆ.
ಒಂದೇ ಕುಟುಂಬದ 9 ಮಂದಿಗೆ ಸೋಂಕು: ಕೋವಿಡ್ 19 ಸೊಂಕು ಸಮುದಾಯಕ್ಕೂ ಹರಡುತ್ತಿದ್ದು, ಚಾಮರಾಜಪೇಟೆಯ ಜ್ಯುವೆಲ್ಲರಿ ಅಂಗಡಿ ಮಾಲೀಕರ ಒಂದೇ ಕುಟುಂಬದ 9 ಮಂದಿಗೆ ಸೋಮವಾರ ಸೋಂಕು ದೃಢಪಟ್ಟಿದೆ. 60 ವರ್ಷದ ವೃದ್ಧ, 53 ವರ್ಷದ ಪುರುಷ, 49 ವರ್ಷದ ಮಹಿಳೆ, 16 ವರ್ಷದ ಬಾಲಕಿ, 23 ವರ್ಷದ ಯುವಕ, 21 ವರ್ಷದ ಯುವತಿ ಸೇರಿ 9 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇವರ ಸಂಪರ್ಕದಲ್ಲಿರುವವರನ್ನು ಆರೋಗ್ಯಾ ಧಿಕಾರಿಗಳು ಕ್ವಾರಂಟೈನ್ ಮಾಡಲಾಗಿದೆ. ಸೋಮವಾರ ದೃಢಪಟ್ಟ ಸೋಂಕಿತರಲ್ಲಿ ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯ ದವರೇ ಹೆಚ್ಚಿದ್ದಾರೆ. ಈ ವಲಯಗಳಲ್ಲಿಯೇ ಕೋವಿಡ್ 19 ಚಿಕಿತ್ಸೆಗೆ ಕೋರ ಮಂಗಲ ಒಳಾಂಗಣ ಕ್ರೀಡಾಂಗ ಣ ದ ಲ್ಲಿ ಸಿದ್ಧತೆ ಕೈಗೊಂಡಿರುವುದು. ಕಂಟೈನ್ಮೆಂಟ್ ವಲಯಗಳು ಅಧಿಕವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.