ಯಾದಗಿರಿ: 9 ಜನರಲ್ಲಿ ಸೋಂಕು ಪತ್ತೆ
Team Udayavani, Jun 30, 2020, 9:50 AM IST
ಯಾದಗಿರಿ: ಜಿಲ್ಲೆಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರು ಮಹಾಮಾರಿ ಕೋವಿಡ್ ಗೆ ತುತ್ತಾಗುತ್ತಿದ್ದು, ಇದೀಗ ಸುರಪುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ (ಪಿ-8227)ರ ಸಂಪರ್ಕದಿಂದ ದಿವಳಗುಡ್ಡದ 35 ಮತ್ತು 48 ವರ್ಷದ ಇಬ್ಬರು ಮಹಿಳೆಯರು (ಪಿ-13413, ಪಿ-13414) ರಲ್ಲಿ ಸೋಂಕು ದೃಢವಾಗಿದೆ.
ಯಾದಗಿರಿ ನಗರದ ಮಾತಾಮಾಣಿಕೇಶ್ವರಿ ನಗರದ 35 ವರ್ಷದ ಪುರುಷ (ಪಿ-13416)ರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸೋಂಕಿನ ಮೂಲ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಸೋಮವಾರ ಒಟ್ಟು 9 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ನಂಟು ಹೊಂದಿರುವ ಸುರಪುರ ತಾಲೂಕಿನ ಹೇಮನೂರ ಗ್ರಾಮದ 38 ವರ್ಷದ ಪುರುಷ (ಪಿ-13410), ಸುಗೂರ ಗ್ರಾಮದ 66 ವರ್ಷದ ಪುರುಷ (ಪಿ-13411) ಮತ್ತು ರಂಗಂಪೇಟ್‌ನ 26 ವರ್ಷದ ಪುರುಷ (ಪಿ-13415), ಕಲ್ಲದೇವನಹಳ್ಳಿಯ 30 ವರ್ಷದ ಪುರುಷ (ಪಿ-13417), 20 ವರ್ಷದ ಮಹಿಳೆ (ಪಿ-13418) ಹಾಗೂ ದೆಹಲಿ ನಂಟು ಇರುವ ದೇವಾಪುರ ಗ್ರಾಮದ 38 ವರ್ಷದ ಪುರುಷ (ಪಿ-13412) ಸೋಂಕಿಗೆ ತುತ್ತಾಗಿದ್ದಾರೆ.
ಜೂ.26 ಮತ್ತು 27ರಂದು ಪಿ-8227ರ ಪತಿ ಸುರಪುರ ಘಟಕದ ಸಾರಿಗೆ ಚಾಲಕ ಪಿ-8228ರ ಸಂಪರ್ಕದಿಂದ ಒಟ್ಟು 5 ಜನರಿಗೆ ಸೋಂಕು ತಗುಲಿತ್ತು. ಇದೀಗ ಪತ್ನಿ ಸಂಪರ್ಕದಿಂದ ಇಬ್ಬರಿಗೆ ಸೋಂಕು ದೃಢವಾದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.