ಮಾಸ್ಕ್ ಧರಿಸದ ಗ್ರಾಹಕಿಗೆ ಕಾಫಿ ನೀಡದ ಮಾಲಕ
Team Udayavani, Jun 30, 2020, 12:14 PM IST
ಸ್ಯಾಂಕ್ರ ಮೆಂಟೊ: ಕೋವಿಡ್ -19 ದೆಸೆಯಿಂದಾಗಿ ಎಲ್ಲೆಡೆ ಲಾಕ್ ಡೌನ್, ಕ್ವಾರಂಟೈನ್ ಸಾಮಾಜಿಕ ಅಂತರ ಸಾಮಾನ್ಯವಾಗಿದೆ. ಅದರಲ್ಲೂ ಮನೆ ಬಿಟ್ಟು ಹೊರಬರಬೇಕಾದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು,ನಿಯಮ ಪಾಲನೆ ಮಾಡದಿದ್ದರೆ ದಂಡ ವಿಧಿಸುವ ಕ್ರಮಗಳನ್ನು ಎಲ್ಲೆಡೆ ಜಾರಿ ಮಾಡಲಾಗಿದೆ.
ಕ್ಯಾಲಿಫೋರ್ನಿಯಾದ ಕಾಫಿ ಮಳಿಗೆಯೊಂದಕ್ಕೆ ಬಂದ ಗ್ರಾಹಕಿಯೋಬ್ಬರು ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮಾಲಕ ಗರಂ ಆಗಿ ಆಕೆಗೆ ಕಾಫಿ ನೀಡಲು ನಿರಾಕರಿಸಿ ಅಂಗಡಿಯಿಂದ ಹೊರಗೆ ಕಳುಹಿಸಿ¨ªಾನೆ.
ಪೋಸ್ಟ್ ಹಂಚಿಕೊಂಡು ಮತ್ತೆ ಪೆಟ್ಟು ತಿಂದಳು
ಈ ಸಮಸ್ಯೆಯ ತೀವ್ರತೆಯನ್ನು ಅರಿಯದೇ ಗ್ರಾಹಕಿ ಆಯಂಬರ್ ಲಿನ್ ಗಿಲ್ಸ್ ಕಾಫಿ ಅಂಗಡಿ ಮಾಲಕ ನನಗೆ ಅವಮಾನ ಮಾಡಿದ್ದಾನೆಂದು ಕಿಡಿಕಾರಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಫಿ ಮಳಿಗೆ ಹಾಗೂ ಕಾಫಿ ಕೊಡಲು ನಿರಾಕರಿಸಿದ ಮಾಲಕ ಲೆನಿನ್ ಅವರ ಪೋಟೋ ಹಂಚಿಕೊಂಡಿದ್ದಾಳೆ. ಇಷ್ಟು ಮಾತ್ರವಲ್ಲದೇ ಲೆನಿನ್ ನಡೆಯನ್ನು ಮಹಾಪರಾಧ ಎಂದು ಬಿಂಬಿಸಿದ್ದು, ತನಗೆ ಅವಮಾನ ಆಗಿದೆ ಎಂದು ತನ್ನ ನೋವು ತೋಡಿಕೊಂಡಿದ್ದಾಳೆ.
ಆದರೆ, ಲಿನ್ ಗಿಲ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮಾಸ್ಕ್ ಧರಿಸದೇ ಹೊರಹೋಗಿದ್ದು ನಿನ್ನದೇ ತಪ್ಪು ಎಂದು ಲಿನ್‌ಳನ್ನೇ ತರಾಟೆಗೆ ತೆಗೆದುಕೊಂಡಿದ್ದು, ಕಾಫಿ ಅಂಗಡಿ ಮಾಲಕ ಲೆನಿನ್ ಅವರ ಮೇಲೆ ಮಾಡಿರುವ ಆರೋಪವನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಪಾರ ಮತ್ತು ಗಿರಾಕಿಯನ್ನು ಕಳೆದುಕೊಳ್ಳಲು ಮುಂದಾದ ಲೆನಿನ್ ಅವರ ನಡೆಯನ್ನು ಶ್ಲಾಘಿಸಿದ್ದು, ಆತನಿಗಿರುವ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.