ಆರ್ಥಿಕ ಹಿತದೃಷ್ಟಿಗಾಗಿ ಲಾಕ್‌ಡೌನ್ ತೆರವುಗೊಳಿಸಿದ ನ್ಯೂಯಾರ್ಕ್
Team Udayavani, Jun 30, 2020, 1:36 PM IST
ನ್ಯೂಯಾರ್ಕ್: ಕೋವಿಡ್-19ರ ಕೆನ್ನಾಲೆಗೆ ಬಲಿಯಾಗಿ ಅಕ್ಷರಶಃ ನಲುಗಿ ಹೋಗಿದ್ದ ಯುಸ್‌ನ ಪ್ರಮುಖ ನಗರ ನ್ಯೂಯಾರ್ಕ್ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಜತೆಗೆ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ಉದ್ಯಮ ಕ್ಷೇತ್ರಗಳು ತೆರವುಗೊಳ್ಳುತ್ತಿದ್ದು, ಜನ ಜೀವನ ಮತ್ತು ವ್ಯಾಪಾರ ಚಟುವಟಿಕೆಗಳು ನಿಧಾನವಾಗಿ ಪ್ರಾರಂಭ ವಾಗುತ್ತಿವೆ.
ಸೋಂಕು ಪೀಡಿತ ನ್ಯೂಯಾರ್ಕ್‌ಗೆ ಅನ್‌ಲಾಕ್ 2 ಭಾಗ್ಯ
ದಾಖಲೆ ಮಟ್ಟದ ಸೋಂಕು ಪ್ರಕರಣಗಳು ದಾಖಲಾದ ದೇಶಗಳ ಪೈಕಿ ಅಗ್ರಸ್ಥಾನದಲ್ಲಿದ್ದ ನ್ಯೂಯಾರ್ಕ್‌ನಲ್ಲಿ ಇದೀಗ ಚೇತರಿಕೆಯ ಗಾಳಿ ಬೀಸ ತೊಡಗಿದೆ. ಅತಿಹೆಚ್ಚು ಸೋಂಕು ಪೀಡಿತರನ್ನು ಹೊಂದಿದ್ದ ವಿಶ್ವದ ದೊಡ್ಡ ಮಹಾನಗರಿಯಲ್ಲೀಗ ಸೋಂಕು ಪ್ರಸರಣ ಮಟ್ಟ ಕಡಿಮೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿಯೇ ಲಾಕ್‌ಡೌನ್ ನಿಬಂಧನೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಅಲ್ಲಿನ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಸೋಂಕಿನ ಬಾಧೆಯಿಂದ ಬಳಲಿದ್ದ ನ್ಯೂಯಾರ್ಕ್‌ಗೆ ಅನ್‌ಲಾಕ್.2 ಭಾಗ್ಯ ಲಭಿಸಿದ್ದು, ಮುಂಬರುವ ದಿನಗಳಲ್ಲಿ ದೇಶ ಎಂದಿನಂತಾಗಲಿದೆ ಎಂದು ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಚೇತರಿಕೆಗಾಗಿ ಸಡಿಲಿಕೆ
ಲಾಕ್‌ಡೌನ್ ಜಾರಿಯಾದಾಗಿನಿಂದ ದೇಶದ ಅಭಿವೃದ್ಧಿ ದರ ಕಡಿತವಾಗಿದ್ದು, ನಿರುದ್ಯೋಗ ಸಮಸ್ಯೆಯೂ ಹೆಚ್ಚಳವಾಗುತ್ತಿದೆ. ಹಾಗಾಗಿ ಸರಕಾರ ಆರ್ಥಿಕತೆಯ ಹಿತದೃಷ್ಟಿಯಿಂದ ಮತ್ತು ಸಹಜ ಜೀವನಕ್ಕೆ ಮರಳುವ ದೃಷ್ಟಿಯಿಂದ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದ್ದು, ಆರ್ಥಿಕವಾಗಿ ದೇಶವನ್ನು ಸದೃಢಗೊಳಿಸುವ ಯೋಜನೆ ರೂಪಿಸುವುದಾಗಿ ತಿಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.