“ಹಗ್ ಕರ್ಟನ್’ ಸುರಕ್ಷಾ ಕವಚ ತಯಾರಿಸಿದ ಬ್ರಝಿಲ್ ಉದ್ಯಮಿ
Team Udayavani, Jun 30, 2020, 2:53 PM IST
ರಿಯೊ ಡಿ ಜನೈರೊ: ಕೋವಿಡ್ -19 ಸೃಷ್ಟಿಸಿರುವ ಅವಾಂತರದಿಂದ ಸಂಘಜೀವಿಯಾಗಿದ್ದ ಮನುಷ್ಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ನಾಲ್ಕು ತಿಂಗಳು ಕಳೆದಿದ್ದಾನೆ. ಇದೀಗ ಅನ್ಲಾಕ್ ಆಗಿದ್ದರೂ ಸ್ನೇಹಿತರು ಸಂಬಂಧಿಗಳೊಂದಿಗೆ ಮುಕ್ತವಾಗಿ ಕಾಲ ಕಳೆಯಲು ಸಾಮಾಜಿಕ ಅಂತರ ನಿಯಮ ಅಡ್ಡ ಬರುತ್ತಿದ್ದು, ಪ್ರೀತಿಯ ಅಪ್ಪುಗೆಯಿಂದ ವಂಚಿತರಾಗುತ್ತಿದ್ದಾನೆ.
ಇಂತಹ ಪರಿಸ್ಥಿತಿಯ ತೀವ್ರತೆಯನ್ನು ಅರಿತ ಬ್ರಝಿಲ್ನ ಉದ್ಯಮಿಯೊಬ್ಬರು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದು, “ಹಗ್ ಕರ್ಟನ್’ ಎಂಬ ಸುರಕ್ಷಿತ ಕವಚವನ್ನು ತಯಾರಿಸಿದ್ದಾರೆ.
ಸಾಕಷ್ಟು ಜನರು ಲಾಕ್ಡೌನ್ ವೇಳೆ ತಮ್ಮ ಪ್ರೀತಿ ಪಾತ್ರರಾದವರನ್ನು ಸನಿಹದಿಂದ ನೋಡಲಾಗದೇ ಬೇಸರಗೊಂಡಿದ್ದಾರೆ. ಮಾತ್ರವಲ್ಲದೇ ತಮ್ಮ ತೀರಾ ಹತ್ತಿರ ಸಂಬಂಧಿಗಳೂ ಚಿಕಿತ್ಸೆಗೆ ಒಳಗಾಗುತ್ತಿದ್ದ ವೇಳೆ ಅವರ ಬಳಿ ಇದ್ದು ಹಾರೈಕೆ ಮಾಡಲಾಗದೇ ವ್ಯಥೆ ಪಟ್ಟಿದ್ದಾರೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು “ಹಗ್ ಕಾರ್ಟನ್’ ಸಿದ್ಧಪಡಿಸಲಾಗಿದೆ ಎಂದು ಉದ್ಯಮಿ ಹೇಳಿದ್ದಾರೆ.
ಮಗಳಿಗೆ ಪ್ರೀತಿಯ ಅಪ್ಪುಗೆ
ಬ್ರಝಿಲ್ನ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 93 ವರ್ಷದ ಡಿಸರ್ ಎಂಬ ಅಜ್ಜಿ 70 ದಿನಗಳ ಬಳಿಕ ಮೊದಲ ಬಾರಿಗೆ ತನ್ನ ಮಗಳನ್ನು ಭೇಟಿಯಾಗಿದ್ದು, “ಹಗ್ ಕಾರ್ಟನ್’ ಧರಿಸುವ ಮೂಲಕ ತಮ್ಮ ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ಸಾಮಾಜಿಕ ಅಂತರ ನಿಯಮವೂ ಪಾಲನೆಯೊಂದಿಗೆ ಪ್ರೀತಿ ಪಾತ್ರರನ್ನು ಸನಿಹದಿಂದ ನೋಡಲು ಅವಕಾಶ ಮಾಡಿಕೊಟ್ಟ ಉದ್ಯಮಿಯ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವೈದ್ಯರು ಕೂಡ “ಹಗ್ ಕಾರ್ಟನ್’ ಬಳಕೆಗೆ ಅರ್ಹ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.