ಒಂದು ದಿನದ ಹೆಣ್ಣು ಹಸುಗೂಸಿಗೂ ಪಾಸಿಟಿವ್ ; ಸಾವಿನ ಸಂಖ್ಯೆ 8ಕ್ಕೆ ಏರಿಕೆ ; 17 ಪಾಸಿಟಿವ್
Team Udayavani, Jun 30, 2020, 11:37 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಧಾರವಾಡ: ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಸೋಂಕಿತರು ಕೋವಿಡ್‌ಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವಲಗುಂದ ತಾಲೂಕಿನ ಮೊರಬ ಗ್ರಾಮದ 83 ವರ್ಷದ (ಪಿ-10375) ಹಾಗೂ ಮಂಗಳವಾರ ದಿನವೇ ಸೋಂಕು ಧೃಡಪಟ್ಟ 69 ವರ್ಷದ (ಪಿ-14535) ಸೇರಿ ವೃದ್ದರಿಬ್ಬರು ಮೃತಪಟ್ಟಿದ್ದಾರೆ.
ಮತ್ತೆ 17 ಪಾಸಿಟಿವ್: ಬಾಣಂತಿ ತಾಯಿಯಿಂದ 2-3 ದಿನ ನವಜಾತ ಶಿಶುವಿಗೆ, ಸೋಂಕು ಲಕ್ಷಣವಿರುವ 9 ತಿಂಗಳ ಗಂಡು ಮಗುವಿಗೆ ಸೇರಿ ಮಂಗಳವಾರ 17 ಜನರಲ್ಲಿ ಕೋವಿಡ್ 19 ಸೋಂಕು ಧೃಢಪಟ್ಟಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ 5 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆಯೂ 180ಕ್ಕೆ ಏರಿಕೆ ಕಂಡಿದೆ.
62 ವರ್ಷದ ಮಹಿಳೆ (ಪಿ-14532), 25 ವರ್ಷದ ಪುರುಷ (ಪಿ-14534), 65 ವರ್ಷದ ಮಹಿಳೆ (ಪಿ-14536), 55 ವರ್ಷದ ಪುರುಷ (ಪಿ-14537), 58 ವರ್ಷದ ಮಹಿಳೆಯಲ್ಲಿ (ಪಿ-14538) ಸೋಂಕು ಧೃಡಪಟ್ಟಿದ್ದು, ಈ ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಉತ್ತರ ಕನ್ನಡದ ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯ 55 ವರ್ಷದ ಪುರುಷ (ಪಿ-14523), 30 ವರ್ಷದ ಮಹಿಳೆ (ಪಿ-14524), 65 ವರ್ಷದ ಮಹಿಳೆ (ಪಿ-14530) ಹಾಗೂ ಕಲಬುರ್ಗಿಯ ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯ 47 ವರ್ಷದ ಪುರುಷ (ಪಿ-14529), ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ 31 ವರ್ಷದ ಪುರುಷ (ಪಿ-14526), 36 ವರ್ಷದ ಪುರುಷ (ಪಿ-14527), 38 ವರ್ಷದ ಪುರುಷ (ಪಿ-14528) ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿಯಾದ ಪಿ-12137 ಸಂಪರ್ಕದಿAದ 70 ವರ್ಷದ ವೃದ್ದರೊಬ್ಬರಲ್ಲಿ (ಪಿ-14531) ಸೋಂಕು ಧೃಡಪಟ್ಟಿದೆ.
5 ಸೋಂಕಿತರು ಗುಣಮುಖ: ಕೊವೀಡ್ ಸೋಂಕಿತರಾದ ಹುಬ್ಬಳ್ಳಿಯ ಆದರ್ಶ ನಗರದ ನಿವಾಸಿಯಾದ 27 ವರ್ಷದ ಮಹಿಳೆ (ಪಿ-8744), ನವಲಗುಂದ ತಾಲೂಕಿನ ಮೊರಬ ಗ್ರಾಮದ 71 ವರ್ಷದ ವೃದ್ದ ಮಹಿಳೆ (ಪಿ-9158), 43 ವರ್ಷದ ಪುರುಷ (ಪಿ-9159), 30 ವರ್ಷದ ಪುರುಷ (ಪಿ-9160) ಹಾಗೂ ಧಾರವಾಡದ ವಿಜಯನಗರ ಮಾವಿನ ತೋಪಿನ ಹತ್ತಿರದ ನಿವಾಸಿಯಾದ 35 ವರ್ಷದ ಮಹಿಳೆ (ಪಿ-9161) ಗುಣಮುಖರಾಗಿ ಕಿಮ್ಸನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬಾಣಂತಿಯಿಂದ ನವಜಾತ ಮಗುವಿಗೂ ಸೋಂಕು
ಕೋವಿಡ್ 19 ಸೋಂಕಿತ ಮಹಿಳೆಯಾದ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ 25 ವರ್ಷದ ಗರ್ಭಿಣಿಗೆ (ಪಿ-10800) ಜೂ.28 ರಂದು ಶಸ್ತ್ರಚಿಕಿತ್ಸೆ ಮೂಲಕ ಕಿಮ್ಸನ ವೈದ್ಯರು ಹೆರಿಗೆ ಮಾಡಿಸಿದ್ದರು. ಈ ಮಹಿಳೆಯಿಂದ ಜನಿಸಿರುವ 2-3 ದಿನದ ನವಜಾತ ಹೆಣ್ಣು ಹಸಿಗೂಸಿಗೆ (ಪಿ-14522) ಸಹ ಈಗ ತಾಯಿಯ ಸಂಪರ್ಕದಿಂದ ಕೋವಿಡ್ 19 ಸೋಂಕು ತಾಗಿದೆ. ಇದರ ಜೊತೆಗೆ 30 ವರ್ಷದ ಪುರುಷ (ಪಿ-14533) ವ್ಯಕ್ತಿಗೂ ಸೋಂಕು ಧೃಡಪಟ್ಟಿದೆ. ಇದಲ್ಲದೇ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ (ಐಎಲ್‌ಐ) ಬಳಲುತ್ತಿದ್ದ 9 ತಿಂಗಳ ಗಂಡು ಮಗುವಿನಲ್ಲೂ (ಪಿ-14525) ಕೋವಿಡ್ 19 ಸೋಂಕು ಧೃಡಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.