ಮಿತಿ ಮೀರಿದ ಭ್ರಷ್ಟಾಚಾರ
Team Udayavani, Jul 1, 2020, 6:19 AM IST
ಪಿರಿಯಾಪಟ್ಟಣ: ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಲಂಚವಿಲ್ಲದೇ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಾದ್ಯಂತ ಸರ್ಕಾರಿ ಗೋಮಾಳ, ಗ್ರಾಮ ಠಾಣ, ಕೆರೆಗಳ ಒತ್ತುವರಿ ತೆರವುಗೊಳಿಸಲು ತಾಲೂಕು ಆಡಳಿತ ಮುಂದಾಗಿರುವುದು ಸ್ವಾಗತಾರ್ಹ.
ಈ ಒತ್ತುವರಿ ತೆರವು ಕಾರ್ಯ ಪಕ್ಷತೀತವಾಗಿರಬೇಕು. ಆದರೆ ಶಾಸಕ ಕೆ.ಮಹದೇವ್ ಅವರೆ 3 ಎಕರೆ ಸರ್ಕಾರಿ ಜಾಗವನ್ನು ಕಬಳಿಕೆ ಹಾಗೂ ಚಟ್ಟೇನಹಳ್ಳಿ ಬಳಿ ನಿರ್ಮಿಸುತ್ತಿರುವ ಲೇಔಟ್‌ನಲ್ಲಿ 5 ಎಕರೆ ಸರ್ಕಾರಿ ಜಾಗ ಕಬಳಿಸುತ್ತಿದ್ದಾರೆ. ಮೊದಲು ತಹಶೀಲ್ದಾರರು ಇದರ ಬಗ್ಗೆ ಕ್ರಮ ವಹಿಸಲಿ, ಅದನ್ನು ಬಿಟ್ಟು ಅಮಾಯಕ ರೈತರು ಉತ್ತುಬಿತ್ತು ವ್ಯವಸಾಯ ಮಾಡುತ್ತಿರುವ ಭೂಮಿಯನ್ನು ಉದ್ದೇಶಪೂರ್ವಕವಾಗಿ ತೆರವು ಗೊಳಿಸುವ ನೆಪದಲ್ಲಿ ಕಿರುಕುಳ ನೀಡುವ ಮೂಲಕ ಶಾಸಕರಿಗೆ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಕೋವಿಡ್-19 ಸಮಸ್ಯೆ ಎದುರಾಗಿದ್ದ ಸಂದರ್ಭದಲ್ಲಿ ನಿರ್ಗತಿಕರಿಗೆ ನೆರವು ನೀಡಲು ಸಾರ್ವಜನಿಕರಿಂದ ಪಡೆದಿದ್ದ ದವಸದಾನ್ಯ ಹಾಗೂ ಹಣಕಾಸಿನ ನೆರವನ್ನು ನಿರ್ಗತಿಕರಿಗೆ ಹಂಚದೆ ಪಂಗನಾಮ ಹಾಕಿದ್ದಾರೆ. ತಹಶೀಲ್ದಾರ್ ಹಾಗೂ ಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿ, ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಸೇರಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಸುಳ್ಳು ಹೇಳಬೇಡಿ: ಯಾವುದೇ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆಯದೆ ಕಾಮಗಾರಿ ಪ್ರಾರಂಭವಾಗುವುದಿಲ್ಲ. ಆದರೆ ಶಾಸಕ ಮಹದೇವ್‌ಗೆ ಇದರ ಅರಿವಿಲ್ಲ, ಸಿದ್ದರಾಮಯ್ಯನವರ ಅವಧಿಯಲ್ಲಿ ಮಂಜೂರಾದ ಎಲ್ಲಾ ಅನುದಾನಗಳು ವಾಪಸಾಗಿವೆ. ಅವುಗಳನ್ನು ನಾನು ಸರ್ಕಾರದ ಮಟ್ಟದಲ್ಲಿ ಹೋರಾಡಿ ತಂದಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.