ಎಲ್ಲಾ ಗ್ರೇಡ್ ರೇಷ್ಮೆ ಖರೀದಿಗೆ ಆಗ್ರಹಿಸಿ ಪ್ರತಿಭಟನೆ
Team Udayavani, Jul 1, 2020, 7:18 AM IST
ರಾಮನಗರ: ಎಲ್ಲ ಗ್ರೇಡುಗಳ ರೇಷ್ಮೆ ನೂಲು ಖರೀದಿಸುವಂತೆ ಒತ್ತಾಯಿಸಿ ರೇಷ್ಮೆ ರೀಲರ್‌ಗಳು ನಗರದ ಛತ್ರದ ಬೀದಿಯ ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್ ಎಂಬಿ) ರಾಮನಗರ ಘಟಕದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದ ರೀಲರ್‌ಗಳು ಸ್ಥಳೀಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಮಳೆಗಾಲವಾದ್ದರಿಂದ ರೇಷ್ಮೆ ಗೂಡಿನ ಗುಣಮಟ್ಟ ಕಡಿಮೆಯಿರುತ್ತದೆ.
ರೈತರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ರೀಲರ್‌ಗಳು ಎಲ್ಲ ರೀತಿಯ ಗೂಡು ಖರೀ ದಿಸುತ್ತಿದ್ದಾರೆ. ಹೀಗಾಗಿ ನೂಲಿನಲ್ಲಿಯೂ ಗುಣಮಟ್ಟ ಸಾಧ್ಯವಿಲ್ಲ. ಎ, ಬಿ, ಸಿ ಎಂಬ ಗ್ರೇಡ್‌ಗಳಲ್ಲಿ ಕೆಎಸ್‌ಎಂಬಿ ನೂಲು ಖರೀದಿಸು ತ್ತಿದೆ. ಡಿ ಗ್ರೇಡ್ ನೂಲನ್ನು ನಿರಾಕರಿಸುತ್ತಿದೆ. ಇದು ತಮಗಾಗುತ್ತಿರುವ ಅನ್ಯಾಯ ಎಂದು ರೀಲರ್‌ಗಳು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ರೀಲರ್ ಅಕ್ಲಿಂ ಪಾಷ ಮಾತನಾಡಿ, ಕೆಎಸ್‌ಎಂಬಿ ವ್ಯವಸ್ಥಾಪಕ ನಿರ್ದೇ ಶಕರು ಡೀನಿಯರ್ ಆಧಾರದಲ್ಲಿ ನೂಲು ಖರೀದಿಸುವಂತೆ ಆದೇಶ ನೀಡಿದ್ದರು.
ಸ್ಥಳೀಯ ಅಧಿಕಾರಿಗಳು ತಮಗೆ ಇಲಾಖೆ ಆಯುಕ್ತರ ಆದೇಶ ಬರಬೇಕು ಎಂದು ಖ್ಯಾತೆ ತೆಗೆಯುತ್ತಿ ದ್ದಾರೆ. ರೀಲರ್‌ಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೀಲರ್ ಮೊಹಮದ್ ಆರೀಫ್ ಪಾಷ ಮಾತನಾಡಿ, ಏಷ್ಯಾ ಖಂಡದಲ್ಲೇ ರಾಮನಗರ ಷ್ಮೆಗೆ ಪ್ರಸಿದಟಛಿ ಎನ್ನುತ್ತಾರೆ. ಆದರೆ ಇಲ್ಲಿ ನೂಲಿನ ಡೀನಿಯರ್ ಮತ್ತು ಗ್ರೇಡ್ ನಿಗದಿ ಪಡಿಸುವ ಸಾಧನಗಳೇ ಇಲ್ಲ.
ನೂಲು ಪಡೆ ಯುವ ಸ್ಥಳೀಯ ಕೆಎಸ್‌ಎಂಬಿ ಅಧಿಕಾರಿಗಳು, ಅದನ್ನು ಬೆಂಗಳೂರಿಗೆ ಕಳುಹಿಸುತ್ತಾರೆ. ಅಲ್ಲಿಂದ ಗ್ರೇಡ್ ವರದಿ ಬರುವುದು ವಾರಗಟ್ಟೆಲೆ ತೆಗೆದುಕೊಳ್ಳುತ್ತಿದೆ. ಅಷ್ಟರಲ್ಲಿ ನೂಲಿನ ಬೆಲೆಯಲ್ಲೂ ವ್ಯತ್ಯಾಸಗಳಾ ಗುತ್ತಿವೆ. ಇದರಿಂದ ನಷ್ಟವಾಗುತ್ತಿದ್ದು, ರೈತರಿಂ ದ ರೇಷ್ಮೆ ಖರೀದಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು. ಉದಾಹರಣೆಗೆ ಆರ್‌ಟಿ 440 ಗುರುತಿರುವ ನೂಲನ್ನು ಜೂನ್ 22ರಂದು ಕೊಡಲಾಗಿದೆ. ಈವರೆಗೂ ಗ್ರೇಡ್ ಬಂದಿಲ್ಲ ಎಂದು ರೀಲರ್‌ಗಳು ದೂರಿದರು.
ಇನ್ನೊಂದು ಪ್ರಕರಣದಲ್ಲಿ ಜೂನ್ 29ರಂದು ಗ್ರೇಡ್ ಫಲಿತಾಂಶ ಬಂದಿದೆ. ಆದರೆ ಜೂನ್ 22ರಂದೇ ನೂಲಿನ ಪ್ರಮಾಣ ಪತ್ರ ಕೊಡಲಾ ಗಿದೆ. ಅದೆಲ್ಲ ಸ್ಥಳೀಯ ಅಧಿಕಾರಿಗಳ ಖರಾಮತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಡೀನಿಯರ್ ಆಧಾರದಲ್ಲಿ ಕೊಳ್ಳಿ: ರೇಷ್ಮೆ ನೂಲನ್ನು ಗ್ರೇಡ್ ಆಧಾರದಲ್ಲಿ ಕೊಳ್ಳುವುದ ಕ್ಕಿಂತ, ಡೀನಿಯರ್ ಆಧಾರದಲ್ಲಿ ಖರೀ ದಿಸಬೇಕು ಎಂದು ರೀಲರ್‌ಗಳು ಒತ್ತಾಯಿಸಿದರು. ಪ್ರಮುಖ ರೀಲರ್‌ಗಳಾದ ಎ.ರವಿ, ಅಲ್ಲಾಭಕ್ಷ, ಸೈಯದ್ ಕೈಸರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.