ಕಾಗೆಯ ದ್ವೇಷ 2 ವರ್ಷ ! ಅಧ್ಯಯನವೊಂದರಿಂದ ಈ ಅಂಶ ಬಹಿರಂಗ
Team Udayavani, Jul 1, 2020, 12:05 PM IST
ಹೊಸದಿಲ್ಲಿ: ಹಾವಿನ ದ್ವೇಷ ಹನ್ನೆರಡು ವರ್ಷ, ನನ್ನ ದ್ವೇಷ ನೂರು ವರ್ಷ ಎಂಬ ನಟ ವಿಷ್ಣುವರ್ಧನ್ ಅವರ ಹಾಡು ಕೇಳಿರಬಹುದು… ಈ ಹಾಡು ಕೇಳಿದ ಮೇಲೆ ಹಾವು ಕೂಡ 12 ವರ್ಷ ದ್ವೇಷ ಸಾಧಿಸುತ್ತಾ ಎಂಬ ಪ್ರಶ್ನೆ ಮೂಡಿರಬಹುದು. ಆದರೆ, ಇಲ್ಲೊಂದು ವಿಚಿತ್ರ ಸಂಗತಿ ಹೊರಬಿದ್ದಿದೆ. ಅದೇನೆಂದರೆ, ಕಾಗೆ ಕೂಡ ದ್ವೇಷ ಸಾಧಿಸುತ್ತದೆಯಂತೆ…!
ಹೌದು, ಸಂಶೋಧಕರ ತಂಡವೊಂದು ಈ ಬಗ್ಗೆ ಸಾಬೀತು ಮಾಡಿದೆ. ಹಾಗೆಯೇ, 2011ರಲ್ಲಿ ಹೊರಬಂದಿದ್ದ ಅಧ್ಯಯನವೊಂದು, ಕಾಗೆಗಳು ಮನುಷ್ಯರ ಮುಖಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತವೆ ಎಂದು ಹೇಳಿತ್ತು. ಆದರೆ, ಅದಕ್ಕಿಂತ ವಿಚಿತ್ರವಾದ ಅಂಶ ಈಗ ಬಯಲಾಗಿದ್ದು, ಅವು ಮುಖ ಗುರುತಿಟ್ಟುಕೊಳ್ಳುವುದಷ್ಟೇ ಅಲ್ಲ, ಏನಾದರೂ ತಪ್ಪು ಮಾಡಿದ್ದಲ್ಲಿ ದ್ವೇಷವನ್ನೂ ಕಾರುತ್ತವೆ ಎಂಬುದು ಬಹಿರಂಗವಾಗಿದೆ. ಜತೆಗೆ, ಈ ದ್ವೇಷದ ಬಗ್ಗೆ ತನ್ನ ಕುಟುಂಬ ಸದಸ್ಯರಿಗೂ ಕಾಗೆಗಳು ಹೇಳುತ್ತವೆಯಂತೆ. ಈ ಬಗ್ಗೆ ಎರಡು ವರ್ಷದವರೆಗೆ ಇದೇ ರೀತಿ ದ್ವೇಷ ಕಾರುತ್ತಲೇ ಇರುತ್ತವೆ ಎಂದೂ ಈ ಸಂಶೋಧನೆ ಹೇಳಿದೆ.
ಪತ್ತೆ ಮಾಡಿದ್ದು ಹೇಗೆ?: ಸ್ವೀಡನ್ನ ಲಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವೊಂದು ಕೆಲವು ಕಾಗೆಗಳನ್ನು ಆರಿಸಿ ತಂದು ಇವುಗಳನ್ನು ಇರಿಸಿಕೊಂಡು ಅಧ್ಯಯನ ನಡೆಸಿತು. ಈ ತಂಡವು ಮೃದು ಮತ್ತು ಒರಟು ಸ್ವಭಾವದ ತರಬೇತಿದಾರರನ್ನು ಪ್ರತ್ಯೇಕಿಸಿ ಇವರ ಕಡೆಯಿಂದ ಕಾಗೆಗಳಿಗೆ ಆಹಾರ ನೀಡಿಸಲಾಯಿತು. ಮೊದಲನೇ ಬಾರಿಗೆ ಈ ಎರಡೂ ಸ್ವಭಾವದವರಿಂದ ಆಹಾರ ಪಡೆದ ಕಾಗೆಗಳು, ಮಗದೊಮ್ಮೆ ಕೇವಲ ಮೃದು ಸ್ವಭಾವದ ತರಬೇತುದಾರರ ಕಡೆಯಿಂದ ಆಹಾರ ಪಡೆದವು. ಒರಟು ಸ್ವಭಾವದವರ ಬಳಿ ಹೋಗಲೇ ಇಲ್ಲ. ಈ ರೀತಿ ಎರಡು ವರ್ಷಗಳ ವರೆಗೆ ಮುಖ ಗುರುತಿಸಿಟ್ಟುಕೊಳ್ಳುತ್ತವೆ ಎಂದು ಈ ತಂಡ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.