ವಿಶ್ವಕಪ್ ಫಿಕ್ಸಿಂಗ್: ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಡಿ ಸಿಲ್ವ ವಿಚಾರಣೆ
Team Udayavani, Jul 2, 2020, 5:02 AM IST
ಕೊಲಂಬೊ: 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ “ಫಿಕ್ಸಿಂಗ್ ಪ್ರಕರಣ’ವನ್ನು ಶ್ರೀಲಂಕಾ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ವಿಚಾರಣೆ ತೀವ್ರಗೊಂಡಿದೆ. ಅಂದಿನ ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಅರವಿಂದ ಡಿ ಸಿಲ್ವ ಅವರನ್ನು ಪೊಲೀಸರು ಸತತ 6 ಗಂಟೆಗಳ ವಿಚಾರಣೆ ನಡೆಸಿದ್ದಾರೆ.
ವಿಶೇಷ ಪೊಲೀಸ್ ತನಿಖಾ ದಳ ಅರವಿಂದ ಡಿ ಸಿಲ್ವ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು. ಬಳಿಕ ಅಂದಿನ ನಾಯಕ ಕುಮಾರ ಸಂಗಕ್ಕರ ಅವರಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಸಂಗಕ್ಕರ ಗುರುವಾರ ಬೆಳಗ್ಗೆ 9 ಗಂಟೆಗೆ ತನಿಖಾ ಆಯೋಗದ ಮುಂದೆ ಹಾಜರಾಗಲಿದ್ದಾರೆ.
ಮುಂದಿನ ವಿಚಾರಣೆಯ ಸರದಿ, 2011ರ ಫೈನಲ್ ಪಂದ್ಯದ ಆರಂಭಿಕನಾಗಿದ್ದ ಉಪುಲ್ ತರಂಗ ಅವರದದ್ದು ಎನ್ನಲಾಗಿದೆ.
ಈ ಪಂದ್ಯವನ್ನು ಶ್ರೀಲಂಕಾ ಭಾರತಕ್ಕೆ ಬಿಟ್ಟುಕೊಟ್ಟಿತ್ತು ಎಂಬ ಲಂಕೆಯ ಅಂದಿನ ಕ್ರೀಡಾ ಸಚಿವ ಮಹಿಂದಾನಂದ ಅಲುತಗಾಮಗೆ ಅವರ ಸ್ಫೋಟಕ ಆರೋಪಕ್ಕೆ ಅರವಿಂದ ಡಿ ಸಿಲ್ವ ಖಾರವಾಗಿ ಪ್ರತಿಕ್ರಿಯಿಸಿದ್ದರು. ಶ್ರೀಲಂಕಾ ಕ್ರಿಕೆಟ್ ಮಂಡಳಿ, ಬಿಸಿಸಿಐ ಮತ್ತು ಐಸಿಸಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅಂಕಣವೊಂದರಲ್ಲಿ ಬರೆದಿದ್ದರು. ಬಳಿಕ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.