ಕೋವಿಡ್ 19 ಹೆಚ್ಚಿದರೆ ವಸತಿ ಶಾಲೆಗಳಲ್ಲಿ ಚಿಕಿತ್ಸೆ
Team Udayavani, Jul 2, 2020, 7:05 AM IST
ದೊಡ್ಡಬಳ್ಳಾಪುರ: ನಗರದ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಸದ್ಯ 40 ಹಾಸಿಗೆಗಳಿದ್ದು, ಸೋಂಕು ಹೆಚ್ಚಿದರೆ ನಗರದ ಹೊರವಲಯದ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡುವ ಅನಿವಾರ್ಯ ಎದುರಾಗಲಿದೆ ಎಂದು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ತಿಳಿಸಿದರು. ತಾಪಂ ಸಭಾಂಗಣದಲ್ಲಿ ಡಿ.ಸಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ 20 ಹಾಸಿಗೆಗಳು ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಲಭ್ಯವಿದೆ.
ಹೆಚ್ಚುವರಿ 20 ಹಾಸಿಗೆ ಸಿದಟಛಿಗೊಳಿಸಲಾಗುತ್ತಿದೆ. ನಗರದ ಹೊರ ವಲಯದ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡಬೇಕಾಗುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು. ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ಕೋವಿಡ್ 19 ಸೋಂಕು ತಡೆಗೆ ತಾಪಂ ಸದಸ್ಯರ ಸಂಪೂರ್ಣ ಸಹಕಾರವಿದ್ದು, ತಡೆಗೆ ಜನಜಾಗೃತಿ ಮೂಡಿಸಲಾಗುವುದು. ತಾಪಂಗೆ ಅನುಬಂಧಿತ ಅನುದಾನ 2 ಕೋಟಿ ಬಂದಿದ್ದು, ಸದಸ್ಯರ ಸಲಹೆ ಮೇರೆಗೆ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುವುದು ಎಂದರು.
ನೂತನ ಅಂಗನವಾಡಿ ಕಟ್ಟಡಗಳಿಗೆ ವಿದ್ಯುತ್ ಮೀಟರ್ ಅಳವಡಿಕೆಗೆ ಮೀಸಲಾಗಿದ್ದ 5 ಲಕ್ಷ ಅನುದಾನ ಬಳಕೆಯಾಗದೆ, ಸರ್ಕಾರಕ್ಕೆ ವಾಪಸ್ಸಾಗಿದೆ. ಅಧಿಕಾರಿಗಳನ ನಡುವಿನ ಸಮ ನ್ವಯದ ಕೊರತೆ ಅಥವಾ ಬೇಜವಾಬ್ದಾರಿ ಕಾರಣವೋ? ಎಂದು ಸದಸ್ಯ ಶಂಕರಪ್ಪ,ನಾರಾಯಣಗೌಡ, ಕಣಿವೇಪುರ ಸುನೀಲ್ ಕುಮಾರ್ ಬೇಸರಿಸಿದರು. ಅನುದಾನ ಸಿಗುವುದು ಕಷ್ಟ. ಅಂಥದ್ದರಲ್ಲಿ ಬಂದ ಅನು ದಾನ ವಾಪಸ್ ತೆರಳಿರುವುದಕ್ಕೆ ಹೊಣೆಯಾರು? ಎಂದು ನಾರಾಯಣಗೌಡ ಪ್ರಶ್ನಿಸಿದರು.
ಮಧ್ಯ ಪ್ರವೇಶಿಸಿದ ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಮಾ.31ರವರೆಗೂ ಕಾಯದೆ ಅನುದಾನ ಸಮರ್ಪಕವಾಗಿ ಬಳಸಿಕೊಂಡು ತಾಲೂಕಿನ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು. ಬಾಲ್ಯವಿವಾಹ ತಡೆಗೆ ದೂರು ಬಂದರೆ ಕ್ರಮಕೈಗೊಳ್ಳದೇ ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವು ಪಡೆದು ಬಾಲ್ಯವಿವಾಹ ತಡೆಗೆ ಒತ್ತು ನೀಡುವಂತೆ ಸಿಡಿಪಿಒ ಅನಿತಾ ಅವರಿಗೆ ಸದಸ್ಯರು ಒತ್ತಾಯಿಸಿದರು.
ಬಿಇಒ ಬೈಯಪ್ಪರೆಡ್ಡಿ ಮಾಹಿತಿ ನೀಡಿ, ಶಾಲಾ ಆಸ್ತಿಗಳ ಬಗ್ಗೆ ತಕರಾರಿದ್ದು, ಶೇ.60ರಷ್ಟು ಸರ್ಕಾರಿ ಶಾಲೆ ನೋಂದಣಿಯಾಗಿಲ್ಲ. ಕೆಲ ದಾನಿಗಳು 30-40 ವರ್ಷಗಳ ಹಿಂದೆ ಕೊಟ್ಟಿರುವುದು ನೋಂದಣಿಯಾಗದೆ ಉಳಿದಿದೆ. ದಾನ ನೀಡಿರುವವರು ಕಾಲವಾಗಿ ಪ್ರಸ್ತುತ ವಾರಸುದಾರರು ಶಾಲೆ ಸ್ವಾಧೀನಕ್ಕೆ ಒಪ್ಪುತ್ತಿಲ್ಲ. ತಾಲೂಕಿನಲ್ಲಿ ಅಂತಹ 80 ಪ್ರಕರಣಗಳಿವೆ. ಅದರಲ್ಲಿ 7 ಪ್ರಕರಣಗಳನ್ನು ನೋಂದಣಿಗೆ ಒಪ್ಪಿಸಲಾಗಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಶಿಧರ್, ಸಮಸ್ಯೆ ಬಗೆಹರಿಸಲು 80 ಶಾಲೆಗಳ ಪಟ್ಟಿ ಪಡೆದು ಸಿಇಒ ಮೂಲಕ ಡೀಸಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಅರಣ್ಯ ಇಲಾಖೆಯಿಂದ ಶಾಲಾ ಕಾಲೇಜುಗಳ ವ್ಯಾಪ್ತಿಯ ಆವರಣದಲ್ಲಿ ಗಿಡ ನೆಡುವುದು, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಬೋರ್ವೆಲ್ ಕೊರೆಸುವುದು, ಅಥವಾ ಟ್ಯಾಂಕರ್ನಿಂದ ನೀರು ಪೂರೈಕೆಗೆ ಕ್ರಮ ಮತ್ತಿತರ ವಿಚಾರ ಚರ್ಚಿಸಲಾಯಿತು. ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಇಒ ಮುರುಡಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೆನ್ನಮ್ಮ ರಾಮಲಿಂಗಯ್ಯ, ಸಹಾಯಕ ನಿರ್ದೇಶಕಿ ಸಿ.ಗೀತಾ ಮಣಿ ಸೇರಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.