ಯಾದಗಿರಿ ಮತ್ತೆ ಎಂಟು ಮಂದಿಗೆ ಸೋಂಕು
Team Udayavani, Jul 2, 2020, 10:46 AM IST
ಯಾದಗಿರಿ: ಇಷ್ಟು ದಿನಗಳಿಂದ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಟು ಹೊಂದಿರುವ ಸೋಂಕಿತರೇ ಹೆಚ್ಚಾಗಿ ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿದ್ದರು. ಇದೀಗ ಸೋಂಕಿನ ಸಂಪರ್ಕರಕ್ಕೆ ಬರದ ಜನರು ಮತ್ತು ಸೋಂಕಿತರ ಸಂಪರ್ಕದಿಂದಲೇ ಸಮುದಾಯಕ್ಕೆ ಸೋಂಕು ಹರಡುತ್ತಿರುವುದು ಕಂಡು ಬರುತ್ತಿದೆ.
ಬುಧವಾರ ಮತ್ತೆ 8 ಜನರಲ್ಲಿ ಸೋಂಕು ದೃಢವಾಗಿದ್ದು ಇವರಲ್ಲಿ ಸುರಪುರ ಸಾರಿಗೆ ಘಟಕದ ಚಾಲಕ (ಪಿ-8228)ನ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಸೋಂಕು ತಗುಲಿದೆ. ಹುಣಸಗಿ ತಾಲೂಕಿನ ಯಣ್ಣಿವಡಗೇರಾದ 38 ವರ್ಷದ ಪುರುಷ (ಪಿ-15475), ಸುರಪುರ ತಾಲೂಕಿನ ಚಿಂಚೋಡಿಯ 34 ವರ್ಷದ ಪುರುಷ (ಪಿ-15476)ಗೆ ಸೋಂಕು ತಗುಲಿದೆ.
ಇನ್ನು ಸಂಪರ್ಕವೇ ಪತ್ತೆಯಾಗದ 3 ಜನ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿಯ 30 ವರ್ಷದ ಮಹಿಳೆ (ಪಿ-15480), ಯಾದಗಿರಿಯ ಮುಸ್ಲಿಮ್‌ಪುರ ಗಾಂಧಿ ಚೌಕ್‌ನ 28 ವರ್ಷದ ಮಹಿಳೆ (ಪಿ-15481) ಹಾಗೂ ಹೊನಗೇರಾದ 28 ವರ್ಷದ ಪುರುಷ (ಪಿ-15482)ಗೆ ಸೋಂಕು ವಕ್ಕರಿಸಿದೆ. ಮಹಾರಾಷ್ಟ್ರದ ನಂಟು ಇರುವ ಮೂವರಲ್ಲಿ ಶಹಾಪುರ ತಾಲೂಕಿನ ಉರ್ಸ್‌ಗುಂಡಗಿಯ ಇಬ್ಬರು 35 ವರ್ಷದ ಮಹಿಳೆ (ಪಿ-15477), 20 ವರ್ಷದ ಮಹಿಳೆ (ಪಿ-15478) ಹಾಗೂ ಗೋಗಿಪೇಠದ 28 ವರ್ಷದ ಪುರುಷ (ಪಿ-15479) ಸೋಂಕಿಗೆ ಗುರಿಯಾಗಿದ್ದಾರೆ. ಬುಧವಾರ 132 ಜನರ ಮಾದರಿ ಸಂಗ್ರಹಿಸಲಾಗಿದ್ದು, 998 ಜನರ ವರದಿ ಬರಬೇಕಿದೆ. ಇಂದು 275 ವರದಿ ನೆಗೆಟಿವ್ ಸೇರಿ ಈವರೆಗೆ 24097 ಜನರ ವರದಿ ನೆಗೆಟಿವ್ ಬಂದಿದೆ. ಹೊಸದಾಗಿ ಒಂದು ಕಂಟೈನ್ಮೆಂಟ್ ಝೋನ್ ರಚಿಸಲಾಗಿದ್ದು ಅವುಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಈವರೆಗೆ 949 ಸೋಂಕಿತರಲ್ಲಿ 837 ಜನರು ಗುಣಮುಖವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.