ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್ ಲೀಗ್?
Team Udayavani, Jul 2, 2020, 10:16 PM IST
ಸಾಂದರ್ಭಿಕ ಚಿತ್ರ.
ಕೊಲಂಬೊ: ಶ್ರೀಲಂಕಾ ತನ್ನ ಚೊಚ್ಚಲ ಟಿ20 ಕ್ರಿಕೆಟ್ ಲೀಗ್ ಆರಂಭಿಸುವ ಸಿದ್ಧತೆಯಲ್ಲಿದೆ. ಇದಕ್ಕಾಗಿ ಆ. 8ರಿಂದ ಆ. 22ರ ವರೆಗಿನ ದಿನಾಂಕವನ್ನು ಕಾದಿರಿಸಿದೆ.
ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಆಯೋಜನೆಗೆ ಕ್ರೀಡಾ ಸಚಿವಾಲಯದಿಂದ ಅನುಮತಿ ಕೂಡ ಲಭಿಸಿದೆ. ಆದರೆ ವಿದೇಶಿಗರಿಗೆ ಶ್ರೀಲಂಕಾದ ಬಾಗಿಲು ಯಾವಾಗ ತೆರೆಯಲಿದೆ ಎಂಬುದರ ಮೇಲೆ ಈ ಕೂಟದ ಭವಿಷ್ಯ ನಿಂತಿದೆ.
ಕೋವಿಡ್-19 ಕಾರಣದಿಂದ ಜುಲೈ ಅಂತ್ಯದ ತನಕ ಲಂಕೆಯ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮುಚ್ಚಿರುತ್ತವೆ. ಆಗಸ್ಟ್ ನಲ್ಲಿ ಪರಿಸ್ಥಿತಿ ಹೇಗೆ ನಿಲ್ಲುತ್ತದೆ ಎಂಬು ದನ್ನು ಕಾದು ನೋಡಬೇಕಿದೆ.
ವಿದೇಶಿಗರು ಹೆದರಬೇಕಿಲ್ಲ
ಶ್ರೀಲಂಕಾ ಕೋವಿಡ್-19 ನಿಯಂತ್ರಣದಲ್ಲಿ ಹೆಚ್ಚಿನ ಯಶಸ್ಸು ಕಂಡಿದೆ. ಈವರೆಗೆ ಕೇವಲ 2 ಸಾವಿರದಷ್ಟು ಸೋಂಕಿತರು ಮಾತ್ರ ಕಾಣಿಸಿಕೊಂಡಿದ್ದಾರೆ. ಇವರಲ್ಲಿ 1,700 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಲಂಕೆಗೆ ಆಗಮಿಸಲು ವಿದೇಶಿಗರು ಭೀತಿಪಡಬೇಕಾದ ಅಗತ್ಯವಿಲ್ಲ. ಇದರಿಂದ ಎಲ್‌ಪಿಎಲ್‌ಗೆ ಯಾವುದೇ ಅಡ್ಡಿಯಾಗದು ಎಂಬುದು ಲಂಕಾ ಕ್ರಿಕೆಟ್ ಮಂಡಳಿಯ ವಿಶ್ವಾಸ.
“ಈ ಪಂದ್ಯಾವಳಿಯ ಕುರಿತು ನಾವು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ಅವ ರೊಂದಿಗೆ ಮಾತುಕತೆ ನಡೆಸಲಿದ್ದೇವೆ. ಅನಂತರವೇ ನಿರ್ಧಾರವೊಂದಕ್ಕೆ ಬರಲು ಸಾಧ್ಯ’ ಎಂಬುದಾಗಿ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.