ಮಹಿಳೆಗೆ ಮನೆ ನಿರ್ಮಿಸಿಕೊಟ್ಟ ಎಸ್ಕೆಎಸ್ಸೆಸ್ಸೆಫ್
Team Udayavani, Jul 3, 2020, 5:16 AM IST
ಬಡಗನ್ನೂರು: ಎಸ್ಕೆಎಸ್ಸೆಸ್ಸೆಫ್ ಈಶ್ವರಮಂಗಲದ ವಿಖಾಯ ಕಾರ್ಯಕರ್ತರು ಪಡುವನ್ನೂರು ಗ್ರಾಮದ ಮೈದನಡ್ಕದಲ್ಲಿ ನಿರ್ಗತಿಕ ವಿಧವೆಯೋರ್ವರ ಪಾಳುಬಿದ್ದ ಮನೆಯನ್ನು ದುರಸ್ತಿಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮಳೆಯಿಂದಾಗಿ ಮನೆಯ ಛಾವಣಿ ಕುಸಿದು ಬಿದ್ದಿದ್ದರಿಂದ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯು ಸಣ್ಣಪ್ರಾಯದ ಮಗನೊಂದಿಗೆ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ವಿಷಯ ತಿಳಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕಾರ್ಯಕರ್ತರು ಈಗ ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.
ಸ್ವಯಂಸೇವಕರಿಂದ ನಿರಂತರ ಸೇವೆ
ಸುಮಾರು ಮೂರು ವಾರಗಳ ಕಾಲ ಮೈದನಡ್ಕ, ಪಾಳ್ಯತ್ತಡ್ಕ, ಮೇನಾಲ, ಮುಂಡೋಳೆ ಶಾಖೆಯ ಸುಮಾರು 75ರಷ್ಟು ಕಾರ್ಯಕರ್ತರು ಶ್ರಮದಾನ ಮಾಡಿದ್ದಾರೆ. ದಾನಿಗಳ ಸಹಕಾರದಿಂದ ಸುಮಾರು 2 ಲ. ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಿದೆ.
ನಮ್ಮ ಕ್ಲಸ್ಟರ್ ವ್ಯಾಪ್ತಿಯಲ್ಲಿ ಇಂಥ ಹಲವು ದುಃಸ್ಥಿತಿಯ ಮನೆಗಳಿರುವುದು ಗಮನಕ್ಕೆ ಬಂದಿದೆ. ಹಲವರು ನಮ್ಮಲ್ಲಿ ಸಹಾಯ ಕೋರಿದ್ದಾರೆ. ದಾನಿಗಳು ಇಚ್ಛಾಶಕ್ತಿ ತೋರಿಸಿದರೆ ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸಬಹುದಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಈಶ್ವರಮಂಗಲ ಕ್ಲಸ್ಟರ್‌ನ ಅಧ್ಯಕ್ಷ ಖಲೀಲುರಹ್ಮಾನ್ ಅರ್ಷದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.