ವಾಯುಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಬಲ
38,900 ಕೋ.ರೂ. ರಕ್ಷಣ ಸಾಮಗ್ರಿ ಖರೀದಿಗೆ ಡಿಎಸಿ ಒಪ್ಪಿಗೆ
Team Udayavani, Jul 3, 2020, 6:10 AM IST
ಹೊಸದಿಲ್ಲಿ: ಚೀನದ ಜತೆಗೆ ಗಡಿ ಬಿಕ್ಕಟ್ಟು ವಿಷಮಿಸಿರುವ ನಡುವೆಯೇ 33 ಮುಂಚೂಣಿ ಯುದ್ಧ ವಿಮಾನಗಳು, ಬಹು ಸಂಖ್ಯೆಯ ಕ್ಷಿಪಣಿ ವ್ಯವಸ್ಥೆಗಳು ಮತ್ತು ಇತರ ಮಿಲಿಟರಿ ಸಾಮಗ್ರಿಗಳನ್ನು 38,900 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವ ಮೂಲಕ ಸಶಸ್ತ್ರ ಪಡೆಗಳ ಬಲವರ್ಧನೆಗೆ ಭಾರತದ ರಕ್ಷಣ ಸಚಿವಾಲಯವು ಗುರುವಾರ ಸಮ್ಮತಿ ನೀಡಿದೆ.
ರಷ್ಯಾದಿಂದ ಮಿಗ್- 29 ಎಸ್ ವಿಮಾನಗಳ ಖರೀದಿ ಮತ್ತು ನವೀಕರಣಕ್ಕೆ 7,418 ಕೋಟಿ ರೂ. ವೆಚ್ಚವಾಗಲಿದೆ. ಇವುಗಳ ಜತೆಗೆ 12 ಸುಖೋಯ್ ಸು- 30 ಎಂಕೆಐ ಯುದ್ಧ ವಿಮಾನಗಳನ್ನು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನಿಂದ ಖರೀದಿಸಲಾಗುತ್ತಿದೆ. ಇದಕ್ಕಾಗಿ ರಕ್ಷಣ ಇಲಾಖೆ 10,730 ಕೋಟಿ ರೂ. ವಿನಿಯೋಗಿಸಲಿದೆ ಎಂದು ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ (ಡಿಎಸಿ) ತಿಳಿಸಿದೆ.
ವಿಮಾನಗಳ ನವೀಕರಣ
ಪ್ರಸ್ತುತ ಇರುವ 59 ಮಿಗ್- 29 ವಿಮಾನಗಳನ್ನು ನವೀಕರಣಗೊಳಿಸಲು ಕೂಡ ಡಿಎಸಿ ಸಭೆ ನಿರ್ಧರಿಸಿದೆ. ಮಿಗ್-29 ಎಸ್‌ಗಳನ್ನು ಆದಷ್ಟು ಬೇಗ ಹಸ್ತಾಂತರಿಸಲು ರಷ್ಯಾ ಒಪ್ಪಿದೆ. ಮಿಗ್-29 ವಿಮಾನ ನವೀಕರಣ ಯೋಜನೆಯನ್ನೂ ಬೇಗನೆ ಕೈಗೆತ್ತಿಕೊಳ್ಳಲಿದೆ. 59 ಮಿಗ್- 29ಗಳನ್ನು ನಾಲ್ಕನೇ ತಲೆಮಾರಿನ ಫೈಟರ್ ಜೆಟ್‌ಗಳಿಗೆ ಸಮನಾಗಿ ಉನ್ನತೀಕರಿಸಲಾಗುತ್ತಿದೆ.
ಆತ್ಮನಿರ್ಭರಕ್ಕೆ ಒತ್ತು
ಯುದ್ಧ ಸಾಮಗ್ರಿಗಳ ಖರೀದಿಗೆ ಮೀಸಲಿರಿಸಿರುವ 38,900 ಕೋಟಿ ರೂ.ಗಳಲ್ಲಿ 31,130 ಕೋಟಿ ರೂ.ಗಳ ಪ್ರಯೋಜನವನ್ನು ಸ್ಥಳೀಯ ಕೈಗಾರಿಕೆಗಳು ಪಡೆಯಲಿವೆ. ಡಿಆರ್ ಡಿಒ ಘಟಕದಲ್ಲಿ ಹೆಚ್ಚಿನ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಪಿನಾಕಾ ಯುದ್ಧ ಸಾಮಗ್ರಿ, ಬಿಎಂಪಿ ಶಸ್ತ್ರಾಸ್ತ್ರ ನವೀಕರಣ ಮತ್ತು ಸಾಫ್ಟ್ ವೇರ್ ಡಿಫೈನ್x ರೇಡಿಯೊ, ಬಲುದೂರ ದಾಳಿ ಸಾಮರ್ಥ್ಯದ ಕ್ಷಿಪಣಿ ವ್ಯವಸ್ಥೆ ಮತ್ತು “ಅಸ್ತ್ರ’ ಕ್ಷಿಪಣಿಗಳನ್ನು ಡಿಆರ್‌ಡಿಒದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ಏನೇನು ಖರೀದಿ?
-ಪಿನಾಕಾ ಶಸ್ತ್ರಾಸ್ತ್ರಗಳು
-ಬಿಎಂಪಿ ಶಸ್ತ್ರಾಸ್ತ್ರ ನವೀಕರಣಗಳು
-ಸೇನೆಗಾಗಿ ಸಾಫ್ಟ್ ವೇರ್ ಒಳಗೊಂಡ ರೇಡಿಯೋ
-1,000 ಕಿ.ಮೀ.ಗಳಷ್ಟು ಬಹುದೂರಕ್ಕೆ ದಾಳಿ ಮಾಡಬಲ್ಲ ಕ್ರೂಸ್ ಕ್ಷಿಪಣಿ ವ್ಯವಸ್ಥೆ
-248 ಅಸ್ತ್ರಾ ಕ್ಷಿಪಣಿಗಳು – ಕಣ್ಣಿಗೆ ಕಾಣ ದಷ್ಟು ದೂರಕ್ಕೆ ನೆಗೆಯಬಲ್ಲ ಸಾಮರ್ಥ್ಯ
-21ಮಿಗ್-29 ಎಸ್ ಫೈಟರ್ ಜೆಟ್
-ಸದ್ಯ ಇರುವ 59 ಮಿಗ್ 29 ಫೈಟರ್ ಗಳ ನವೀಕರಣ
-12 ಸುಖೋಯ್ ಎಂಕೆಐ ಏರ್ ಕ್ರಾಫ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.