ಗಣೇಶ್ ಹುಟ್ಟುಹಬ್ಬಕ್ಕೆ ಜಗ್ಗೇಶ್- ಶಿವಣ್ಣ ಏನಂದ್ರು ಗೊತ್ತಾ?
Team Udayavani, Jul 3, 2020, 7:45 AM IST
ಗುರುವಾರ ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ 40ನೇ ವರ್ಷದ ಹುಟ್ಟುಹಬ್ಬಕ್ಕೆ ಚಂದನವನದ ಬಹುತೇಕ ನಟ, ನಟಿಯರು ಸೇರಿದಂತೆ ನಿರ್ದೇಶಕ-ನಿರ್ಮಾಪಕರೂ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಶಿವಣ್ಣ, ಜಗ್ಗೇಶ್, ಸಿಂಪಲ್ ಸುನಿ, ಪ್ರೀತಮ್ ಗುಬ್ಬಿ, ರಘುರಾಮ್, ಹಾಸ್ಯ ನಟ ಧರ್ಮಣ್ಣ ಕಡೂರ್, ರವಿಶಂಕರ್ ಗೌಡ ಸೇರಿದಂತೆ ಬಹುತೇಕ ಸಿನಿಮಾಮಂದಿ ಗಣಿಗೆ ಶುಭಾಶಯವನ್ನು ತಿಳಿಸಿದ್ದಾರೆ.
ನಟ ಜಗ್ಗೇಶ್ ಕೂಡಾ ಗಣೇಶ್ ಜನ್ಮ ದಿನಕ್ಕೆ ಟ್ವೀಟರ್‌ನಲ್ಲಿ “ನಾವಿಬ್ಬರು ನಾಣ್ಯದ ಎರಡುಮುಖ! ಇವನು ಅಡಕಮಾರನಹಳ್ಳಿ ನಾನು ಜಡೆಮಾಯಸಂದ್ರ! ಇಬ್ಬರಿಗು ಪ್ರತಿಭೆಯೇ godfather! ನನ್ನಂತೆ ಇವನಿಗು ಜೋತಿಷ್ಯಾಸ್ತ್ರ ಇಷ್ಟದ ವಿಷಯ! ನನ್ನಂತೆ ಅಳೆದುತೂಗಿ ಜನಸೇರುತ್ತಾನೆ! ನನ್ನಂತೆ ಮೇಲೆ ನಗು ಒಳಗೆ ಒಬ್ಬನೆ ಜೀವಿಸುತ್ತಾನೆ! ನಮ್ಮಿಬ್ಬರನ್ನು ಅನ್ಯರು ಯಾಮಾರಿಸಲು ಸ್ವಲ್ಪಕಷ್ಟ!ಕಾರಣ ರಸ್ತೆಯಿಂದ ಬಂದವರು! Hpy.bdy? ಎಂದು ಟ್ವೀಟ್ ಮಾಡಿದ್ದಾರೆ.
ನಾವಿಬ್ಬರು ನಾಣ್ಯದ ಎರಡುಮುಖ!ಇವನು ಅಡಕಮಾರನಹಳ್ಳಿ ನಾನು ಜಡೆಮಾಯಸಂದ್ರ!ಇಬ್ಬರಿಗು ಪ್ರತಿಭೆಯೇgodfather!
ನನ್ನಂತೆ ಇವನಿಗು ಜೋತಿಷ್ಯಾಸ್ತ್ರ
ಇಷ್ಟದವಿಷಯ!ನನ್ನಂತೆ ಅಳೆದುತೂಗಿ ಜನಸೇರುತ್ತಾನೆ!
ನನ್ನಂತೆ ಮೇಲೆ ನಗು ಒಳಗೆ
ಒಬ್ಬನೆ ಜೀವಿಸುತ್ತಾನೆ!ನಮ್ಮಿಬ್ಬರನ್ನು ಅನ್ಯರು ಯಾಮಾರಿಸಲು ಸ್ವಲ್ಪಕಷ್ಟ!ಕಾರಣ ರಸ್ತೆಯಿಂದ ಬಂದವರು!
Hpy.bdy? pic.twitter.com/WPkz6Yhs1r— ನವರಸನಾಯಕ ಜಗ್ಗೇಶ್ (@Jaggesh2) July 2, 2020
ಅಲ್ಲದೇ ಶಿವಣ್ಣ ಕೂಡಾ “ಹುಟ್ಟು ಹಬ್ಬದ ಶುಭಾಶಯಗಳು ಗಣೇಶ..ದೇವರು ನಿಮಗೆ ಸುಖ ಶಾಂತಿ ಕೊಟ್ಟು ಆಶೀರ್ವದಿಸಲಿ. ಒಳ್ಳೆ ಆರೋಗ್ಯ ಕೀರ್ತಿ ಹಾಗೂ ಹರುಷ ನಿಮ್ಮೊಂದಿಗಿರಲಿ..happy birthday ಎಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಗಣೇಶ್, ‘ಥ್ಯಾಂಕ್ಯೂ ಅಣ್ಣ’ ಎಂದು ಮರು ಟ್ವೀಟ್ ಮಾಡಿದ್ದಾರೆ.
ಹುಟ್ಟು ಹಬ್ಬದ ಶುಭಾಶಯಗಳು ಗಣೇಶ..ದೇವರು ನಿಮಗೆ ಸುಖ ಶಾಂತಿ ಕೊಟ್ಟು ಆಶೀರ್ವದಿಸಲಿ. ಒಳ್ಳೆ ಆರೋಗ್ಯ ಕೀರ್ತಿ ಹಾಗೂ ಹರುಷ ನಿಮ್ಮೊಂದಿಗಿರಲಿ..happy birthday @Official_Ganesh pic.twitter.com/ub0vRrGlJw
— DrShivaRajkumar (@NimmaShivanna) July 2, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.