2011ರ ವಿಶ್ವಕಪ್ ಕ್ರಿಕೆಟ್ ಫೈನಲ್ ಫಿಕ್ಸ್ ಆಗಿದ್ದಕ್ಕೆ ಸಾಕ್ಷ್ಯವಿಲ್ಲ
ಕ್ರಿಕೆಟಿಗರ ವಿಚಾರಣೆ ಮುಗಿಸಿದ ಪೊಲೀಸರು, ಐಸಿಸಿ, ಬಿಸಿಸಿಐ ತನಿಖೆ ನಡೆಸೀತೇ?
Team Udayavani, Jul 4, 2020, 5:45 AM IST
ಕೊಲಂಬೊ: 2011ರ ವಿಶ್ವ ಕಪ್ ಕ್ರಿಕೆಟ್ ಫೈನಲ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು ತನಿಖೆಯನ್ನು ಪೂರ್ತಿಗೊಳಿಸಿದ್ದಾರೆ. ಇದಕ್ಕೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ ಎಂದಿದ್ದಾರೆ.
ಅಂದಿನ ತಂಡದ ನಾಯಕ ಕುಮಾರ ಸಂಗಕ್ಕರ ಮತ್ತು ಪ್ರಮುಖ ಬ್ಯಾಟ್ಸ್‌ಮನ್ ಮಾಹೇಲ ಜಯವರ್ಧನೆ ಅವರನ್ನು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಅಂದಿನ ಆಯ್ಕೆ ಸಮಿತಿ ಅಧ್ಯಕ್ಷ ಅರವಿಂದ ಡಿ ಸಿಲ್ವ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.
ಆರೋಪ ದೃಢಪಟ್ಟಿಲ್ಲ
“ನಾವು ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೆ ಈಗಾಗಲೇ ವರದಿ ಸಲ್ಲಿ ಸಿದ್ದೇವೆ. ಇಂದು ನಡೆದ ಆಂತರಿಕ ಸಂವಾದದ ಬಳಿಕ ನಾವು ತನಿಖೆಯನ್ನು ಮುಗಿಸಿದ್ದೇವೆ. ಪಂದ್ಯ ಫಿಕ್ಸ್ ಆಗಿರುವುದಕ್ಕೆ ನಮಗೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ’ ಎಂದು ಪೊಲೀಸ್ ಮಹಾನಿರ್ದೇಶಕ ಜಗತ್ ಫೊನ್ಸೇಕ ತಿಳಿಸಿದ್ದಾರೆ.
“ಅಂದಿನ ಕ್ರೀಡಾ ಸಚಿವ ಮಹಿಂದಾ ನಂದ ಅಲುತಗಾಮಗೆ ಅವರ 14 ಅಂಶಗಳ ಆರೋಪಗಳಾÂವುವೂ ದೃಢ ಪಟ್ಟಿಲ್ಲ. ಹೀಗಾಗಿ ಎಲ್ಲ ಆಟಗಾರರಿಗೂ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಮುಂದುವರಿಸುವ ಅಗತ್ಯ ಕಂಡು ಬರುವುದಿಲ್ಲ’ ಎಂದು ಜಗತ್ ಫೊನ್ಸೇಕ ಹೇಳಿದರು.
“ಕೊನೆಯ ಗಳಿಗೆಯಲ್ಲಿ ತಂಡದಲ್ಲಿ ಭಾರೀ ಬದಲಾವಣೆ ಸಂಭವಿಸಿತು ಎಂಬುದು ಅಲುತಗಾಮಗೆ ಮಾಡಿದ ಆರೋಪಗಳಲ್ಲಿ ಪ್ರಮುಖವಾದುದು. ಇದಕ್ಕೇನು ಕಾರಣ ಎಂಬುದನ್ನು ಮೂವರು ಕ್ರಿಕೆಟಿಗರ ವಿಚಾರಣೆಯ ವೇಳೆ ವಿವರಣೆ ಪಡೆಯಲಾಗಿದೆ’ ಎಂದರು.
ಆದರೆ ಆಟಗಾರರ್ಯಾರೂ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ, ಹೊರಗಿನ ನಿರ್ದಿಷ್ಟ ಫಿಕ್ಸಿಂಗ್ ತಂಡವೊಂದರ ಕೈವಾಡವಿದೆ ಎಂಬುದು ಅಲುತಗಾಮಗೆ ಮಾಡಿದ ಮುಖ್ಯ ಆರೋಪವಾಗಿತ್ತು.
ತನಿಖೆ ಈ ಜಾಡಿನಲ್ಲಿ ಮುಂದು ವರಿದೀತೇ, ಐಸಿಸಿ ಹೆಚ್ಚಿನ ತನಿಖೆಗೆ ಸೂಚಿ ಸೀತೇ ಎಂಬುದು ಮುಂದಿನ ಹಂತದ ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.