ವೀರಂ ಮೂಲಕ ಮತ್ತೆ ಬಂದ ಶ್ರೀನಗರ ಕಿಟ್ಟಿ
ನೆಗೆಟಿವ್ ಶೇಡ್‌ನಲ್ಲಿ ಕಿಟ್ಟಿ ಕಮಾಲ್
Team Udayavani, Jul 4, 2020, 4:41 AM IST
ಶ್ರೀನಗರ ಕಿಟ್ಟಿ ಎಲ್ಲೋ ಮರೆಯಾಗಿಬಿಟ್ಟರು ಎನ್ನುತ್ತಿದ್ದಂತೆಯೇ ಅವರೀಗ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಅಣಿಯಾಗುತ್ತಿದ್ದಾರೆ. ಹೌದು, ಶ್ರೀನಗರ ಕಿಟ್ಟಿ ಬಹಳ ದಿನಗಳ ಬಳಿಕ ಹೊಸದೊಂದು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ “ವೀರಂ ‘ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿದ್ದಾರೆ. ಅವರಿಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ ಎಂಬುದು ವಿಶೇಷ. ಖದರ್ ಕುಮಾರ್ ನಿರ್ದೇಶನದ ಈ ಚಿತ್ರ ಇನ್ನೇನು ಚಿತ್ರೀಕರಣಕ್ಕೆ ಸಜ್ಜಾಗಿದೆ.
ಈಗ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಿಂದೆಂದೂ ಕಾಣದ ಪಾತ್ರ ಮಾಡುತ್ತಿದ್ದಾರೆ. ಆ ಬಗ್ಗೆ ಹೇಳುವ ನಿರ್ದೇಶಕ ಕುಮಾರ್, “ವೀರಂ’ ಚಿತ್ರದಲ್ಲಿ ಕಿಟ್ಟಿ ಅವರು ಹಿಂದೆಂದೂ ಕಾಣದಂತ ಪಾತ್ರ ಮಾಡುತ್ತಿದ್ದಾರೆ. ಇಡೀ ಸಿನಿಮಾ ಕಥೆ ಅವರ ಮೇಲೆಯೇ ಸಾಗಲಿದೆ. ಒಂದು ರೀತಿ ಅವರು ರಾ ಪಾತ್ರ ಮಾಡುತ್ತಿದ್ದು, ನೆಗೆಟಿವ್ ಶೇಡ್ ಇದೆ. ಬಹಳ ದಿನಗಳ ಬಳಿಕ ಬರುತ್ತಿರುವ ಅವರಿಗೆ ಇದೊಂದು ಕಮ್‌ಬ್ಯಾಕ್ ಸಿನಿಮಾ ಆಗಲಿದೆ ಎಂಬುದು ಅವರ ಮಾತು.
ಸಿನಿಮಾದಲ್ಲಿ ಅವರ ಪಾತ್ರ ಮನೆ ಮಾತು ಆಗಲಿದೆ ಎನ್ನುವ ಅವರು, ನಗೆಟಿವ್ ಶೇಡ್ ಇದ್ದರೂ, ಅದೊಂದು ರೀತಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತಹ ಪಾತ್ರ ಅವರದು. ಕಥೆಗೆ ಅವರ ಪಾತ್ರವೇ ಹೈಲೈಟ್. ಇಡೀ ಸಿನಿಮಾದಲ್ಲಿ ಅವರ ಪಾತ್ರದಲ್ಲಿ ವಿಶೇಷತೆ ಇದೆ. ಪ್ರಜ್ವಲ್, ಶಿಷ್ಯ ದೀಪಕ್ ಇಬ್ಬರ ಜೊತೆಯಲ್ಲೂ ಕಾಂಬಿನೇಷನ್ ಇರಲಿದೆ. ಇಲ್ಲಿ ಕಿಟ್ಟಿ ಅವರಿಗೆ ಜೋಡಿ ಇರಲ್ಲ. ಆದರೆ, ಇಡೀ ಪಾತ್ರ ಸಖತ್ ಮಜವಾಗಿದೆ ಎನ್ನುತ್ತಾರೆ ಕುಮಾರ್.
ಚಿತ್ರವನ್ನು ಶಶಿಧರ್ ಕೆ.ಎಂ. ನಿರ್ಮಿಸುತ್ತಿದ್ದು, ಇವರೊಂದಿಗೆ ರಘು ಹಾಗೂ ಕೃಷ್ಣೇಗೌಡ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ನಾಲ್ಕು ಹಾಡು ಒಂದು ಬಿಟ್ ಇದೆ. ಲವಿತ್ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನವಿದೆ. ಒಟ್ಟು 106 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಲಾಕ್‌ಡೌನ್ ಬಗೆಹರಿದ ಬಳಿಕ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ತಯಾರಾಗಿದೆ. ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ಬಾಲಿವುಡ್ ನಟರೊಬ್ಬರು ನಟಿಸಲಿದ್ದು, ಇಷ್ಟರಲ್ಲೇ ಅವರ್ಯಾರು ಎಂಬುದನ್ನ ಬಹಿರಂಗಪಡಿಸಲಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.