ಕೋಟದಲ್ಲಿ ಹೋಟೆಲ್ ಸಿಬಂದಿಗಳು ಸೇರಿ ಮತ್ತೆ 9ಮಂದಿಗೆ ಕೋವಿಡ್ ಪಾಸಿಟಿವ್
Team Udayavani, Jul 5, 2020, 6:34 PM IST
ಕೋಟ: ಕೋಟದಲ್ಲಿ ಹೋಟೆಲ್ ಸಿಬಂದಿ, ದಿನಸಿ ಅಂಗಡಿಯ ಮಾಲೀಕನ ಕುಟುಂಬ ಸೇರಿದಂತೆ ಒಟ್ಟು 9ಮಂದಿಯಲ್ಲಿ ಕೋವಿಡ್ ಸೋಂಕಿರುವುದು ರವಿವಾರ ದೃಢಪಟ್ಟಿದೆ.
ಈ ಹಿಂದೆ ಬುಧವಾರ ಇಲ್ಲಿನ ಹೋಟೆಲ್ವೊಂದರ ಮಾಲೀಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು ರೋಗಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿ ಮನೆ, ಹೋಟೆಲ್ ಸೀಲ್ಡೌನ್ ಮಾಡಲಾಗಿತ್ತು ಹಾಗೂ ಸಿಬಂದಿ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿರುವವರಿಗೆ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು. ಇದೀಗ ಹೋಟೆಲ್ ಮಾಲೀಕನ ಸಂಪರ್ಕದಲ್ಲಿದ್ದ 5ಮಂದಿ ಸಿಬಂದಿಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಮತ್ತು ಹೋಟೆಲ್ ಪಕ್ಕದ ದಿನಬಳಕೆಯ ಅಂಗಡಿಯೊಂದರ ಮಾಲೀಕನ ಕುಟುಂಬದ ನಾಲ್ಕು ಮಂದಿಗೆ ಸೋಂಕು ಕಂಡು ಬಂದಿದೆ. ಆದರೆ ಅಂಗಡಿ ಮಾಲೀಕನೂ ಕೂಡ ತಪಾಸಣೆಗೆ ಒಳಗಾಗಿದ್ದು ವರದಿ ನೆಗಿಟಿವ್ ಬಂದಿದೆ.
ಸ್ಥಳೀಯರಲ್ಲಿ ಆತಂಕ :
ಹೋಟೆಲ್ಗೆ ಪ್ರತಿದಿನ ನೂರಾರು ಮಂದಿ ಗ್ರಾಹಕರು ಭೇಟಿ ನೀಡುತ್ತಾರೆ ಹೀಗಾಗಿ ಮಾಲೀಕನಿಗೆ ಸೋಂಕು ತಗಲಿದಾಗಲೇ ಸ್ಥಳೀಯರು ಸಾಕಷ್ಟು ಆತಂಕಗೊಂಡಿದ್ದರು. ಇದೀಗ ಸಿಬಂದಿಗಳಿಗೂ ಇರುವುದು ದೃಢವಾಗಿರುವುದರಿಂದ ಮತ್ತಷ್ಟು ಆತಂಕ ಮನೆ ಮಾಡಿದೆ.
ಕೋಟ ಕಂದಾಯ ಅಧಿಕಾರಿ ರಾಜು, ವಿ.ಎ. ಚೆಲುವರಾಜ್, ಕೋಟ ಗ್ರಾ.ಪಂ. ಪಿ.ಡಿ.ಒ. ಸುರೇಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮತ್ತು ಮನೆಯನ್ನು ಸೀಲ್ಡೌನ್ ಮಾಡಿದ್ದಾರೆ. ಹೋಟೆಲ್ ಕಾರ್ಮಿಕರ ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.