ಆ್ಯಪ್ ಮಿತ್ರ: ಕ್ರೆಡಿಟ್ ಕರ್ಮ
Team Udayavani, Jul 6, 2020, 4:38 AM IST
ಕ್ರೆಡಿಟ್ ಸ್ಕೋರ್ ಅನ್ನು ಪತ್ತೆ ಹಚ್ಚಿ ತಿಳಿಸುವ ಆ್ಯಪ್-ಕ್ರೆಡಿಟ್ ಕರ್ಮ. ಇಂದಿನ ದಿನಗಳಲ್ಲಿ ಉತ್ತಮ ಕ್ರೆಡಿಟ್ ಸ್ಕೋರನ್ನು ಮೇಂಟೇನ್ ಮಾಡಬೇಕಾದ ಜರೂರತ್ತು, ಬ್ಯಾಂಕ್ ಗ್ರಾಹಕರ ಮೇಲಿದೆ. ಉತ್ತಮ ಕ್ರೆಡಿಟ್ ಸ್ಕೋರನ್ನು ಹೊಂದಿದ್ದರೆ, ಬ್ಯಾಂಕುಗಳು ಹಲವು ಸೌಲಭ್ಯಗಳನ್ನು ನೀಡುತ್ತವೆ. ಶಾಲೆಗಳಲ್ಲಿ ವಿದ್ಯಾರ್ಥಿಯೋರ್ವನ ಶಿಸ್ತನ್ನು ಆತ ತೊಡುವ ಸಮವಸ್ತ್ರ, ಪಾಲಿಶ್ಡ್ ಶೂ, ಟೈನಿಂದ ತಿಳಿಯುತ್ತಾರಲ್ಲ,
ಅದೇ ರೀತಿ ಬ್ಯಾಂಕ್ ಗ್ರಾಹಕನ ಶಿಸ್ತನ್ನು ಕ್ರೆಡಿಟ್ ಸ್ಕೋರ್ ಮೂಲಕ ಅಳೆಯ ಲಾಗುತ್ತದೆ. ಗ್ರಾಹಕ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕುಗಳು ಮೊದಲು ನೋಡುವುದೇ ಆತನ ಕ್ರೆಡಿಟ್ ಸ್ಕೋರ್. ಅದು ಉತ್ತಮವಾಗಿದ್ದಲ್ಲಿ ಬ್ಯಾಂಕು ಆತನ ಸಾಲದ ಅರ್ಜಿಯನ್ನು ಸ್ವೀಕರಿಸುತ್ತದೆ. ಕ್ರೆಡಿಟ್ ಸ್ಕೋರ್, ಬ್ಯಾಂಕ್ ವ್ಯವಹಾರಗಳಿಗೆ ಹಿಡಿದ ಕೈಗನ್ನಡಿ ಎನ್ನುವುದೇ ಈ ಕಾರಣಕ್ಕೆ. ಅದನ್ನು ಕಾಲ ಕಾಲಕ್ಕೆ ಮಾನಿಟರ್ ಮಾಡಲು, “ಕ್ರೆಡಿಟ್ ಕರ್ಮ’ ಆ್ಯಪ್ ಸಹಕರಿಸುತ್ತದೆ.
ಬಳಕೆದಾರನ ಕ್ರೆಡಿಟ್ ಸ್ಕೋರ್‌ನಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದ ತಕ್ಷಣ ಈ ಆ್ಯಪ್, ನೋಟಿಫಿಕೇಷನ್ ಸಹಾಯದಿಂದ ವಿಷಯ ಮುಟ್ಟಿಸುತ್ತದೆ. ಕೆಲ ತಿಂಗಳುಗಳ ಹಿಂದಷ್ಟೆ ಈ ಆ್ಯಪ್ ಅನ್ನು ಇನ್ ಟುಯ್ಟ್ ಎಂಬ ಜನಪ್ರಿಯ ಆ್ಯಪ್ ತಯಾರಕ ಸಂಸ್ಥೆ, 7 ಬಿಲಿಯನ್ ಡಾಲರ್ ನೀಡಿ ಖರೀದಿಸಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ, ಈ ಆ್ಯಪ್‌ಗೆ ಇನ್ನಷ್ಟು ಸವಲತ್ತುಗಳು ಸೇರಿಕೊಳ್ಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.