ಅನಾಮಿಕ ಶ್ರೀಮಂತರು: ಸುನಿಲ್ ಮಿತ್ತಲ್
Team Udayavani, Jul 6, 2020, 4:40 AM IST
ಭಾರತದ ಟೆಲಿ ಕಮ್ಯುನಿ ಕೇಷನ್ ಕ್ಷೇತ್ರದಲ್ಲಿ ಏರ್‌ಟೆಲ್‌ನ ಸಾಧನೆ ಅದ್ವಿತೀಯ ವಾ ದುದು. ಅಪ್ಪಟ ಭಾರತೀಯ ಸಂಸ್ಥೆ ಯನ್ನು ಸ್ಥಾಪಿಸಿದ ಶ್ರೇಯ ಸುನಿಲ್ ಮಿತ್ತಲ್ ಅವರದು. ಸುನಿಲ್ ಪಂಜಾಬಿನವರು. ಅವರ ತಂದೆ ಎರಡು ಬಾರಿ ಸಂಸದರಾಗಿ ದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸ್ವಂತ ಉದ್ದಿಮೆ ಶುರುಮಾಡಬೇಕೆಂಬ ಕನಸು ಹೊತ್ತ ಸುನಿಲ್, ಮೊದಲಿಗೆ ಸೈಕಲ್ ಬಿಡಿಭಾಗಗಳನ್ನು ಮಾರುವ ಸಂಸ್ಥೆ ತೆರೆದರು. ನಂತರ ಅದನ್ನು ಮಾರಾಟ ಮಾಡಿ ಮುಂಬೈಗೆ ಬಂದರು.
ಅಲ್ಲಿ ಸುಝುಕಿ ಸಂಸ್ಥೆಯ ಜನರೇಟರ್ ಗಳನ್ನು ಆಮದು ಮಾಡಿ ಕೊಂಡು ಮಾರಲು ಶುರುಮಾಡಿದರು. ನಂತರ 1984ರಲ್ಲಿ ಲ್ಯಾಂಡ್ ಲೈನ್ ಫೋನುಗಳಲ್ಲಿ ಬಟನ್‌ಗಳ ಬಳಕೆ ಚಾಲ್ತಿಗೆ ಬಂದ ಸಮಯದಲ್ಲಿ ಬಟನ್‌ಗಳನ್ನು ಅಸೆಂಬಲ್ ಮಾಡುವ ಉದ್ದಿಮೆ ಶುರುಮಾಡಿ ದರು. ಹೀಗೆ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಸುನಿಲ್, ಭಾರ್ತಿ ಟೆಲಿಕಾಂ ಸಂಸ್ಥೆ ಸ್ಥಾಪಿಸಿ, ಜರ್ಮನಿಯ ಸೀಮೆನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಪುಶ್ ಬಟನ್ ಫೋನು ಗಳನ್ನು ತಯಾರಿಸತೊಡಗಿದರು.
ಬೀಟೆಲ್ ಎಂಬ ಬ್ರ್ಯಾಂಡ್ ಅಡಿಯಲ್ಲೂ ಫೋನು, ಫ್ಯಾಕ್ಸ್ ಮಶೀನ್‌ಗಳನ್ನು ತಯಾರಿಸತೊಡಗಿ ದರು. ಅವು ಜನ ಪ್ರಿಯವೂ ಆದವು. 1995ರಲ್ಲಿ ಏರ್‌ಟೆಲ್ ಟೆಲಿಕಾಂ ದೇಶದಲ್ಲಿ ಕಾರ್ಯಾಚರಣೆ ಶುರುಮಾಡಿತು. ಬಹಳ ಬೇಗನೆ 20 ಲಕ್ಷ ಚಂದಾದಾರರನ್ನು ಹೊಂದಿದ ಸಂಸ್ಥೆ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಇಂದು ಹಲವು ಟೆಲಿಕಾಂ ಸಂಸ್ಥೆಗಳ ಜೊತೆ ಪೈಪೋಟಿ ನಡೆಸುತ್ತಲೇ ಏರ್‌ಟೆಲ್ ತನ್ನ ಛಾಪು ಉಳಿಸಿಕೊಂಡಿದೆ.
ಉದ್ಯೋಗ: ಚೇರ್‌ಮನ್
ಸ್ಥಾಪಿಸಿದ ಸಂಸ್ಥೆ: ಭಾರ್ತಿ ಏರ್‌ಟೆಲ್
ಹವ್ಯಾಸ: ಫಾರ್ಮುಲಾ ಒನ್ ಕಾರ್ ರೇಸ್ ವೀಕ್ಷಣೆ
ಸಂಪತ್ತು: 87,685 ಕೋಟಿ ರೂ. (ನೆಟ್‌ವರ್ತ್)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.