ಮೂರುಪಟ್ಟಾದ ಕಂಟೈನ್ಮೆಂಟ್
Team Udayavani, Jul 6, 2020, 5:56 AM IST
ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳಿಗೆ ತಕ್ಕಂತೆ ಅತ್ತ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಾವಿರದ ಗಡಿ ದಾಟಿದೆ. ಕೇವಲ ಒಂದೇ ದಿನದಲ್ಲಿ ಈ ವಲಯಗಳ ಸಂಖ್ಯೆ ಮೂರುಪಟ್ಟು ಹೆಚ್ಚಳವಾಗಿದೆ! ಶನಿವಾರವಷ್ಟೇ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 481 ಇತ್ತು. ಭಾನುವಾರ 1423 ಆಗಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಏರಿಕೆ ಕ್ರಮದಲ್ಲಿ ಸಾಗುವ ಸಾಧ್ಯತೆ ಇದೆ.
ಹೀಗೆ ಗುರುತಿಸಿದ ವಲಯಗಳ ಸುಮಾರು 50 ಮೀಟರ್ ಸುತ್ತ ನಿರ್ಬಂಧ ವಿಧಿಸಲಾಗಿರುತ್ತದೆ. ಸೋಂಕು ತಗುಲಿರುವ ವ್ಯಕ್ತಿ ಮನೆ ಅಕ್ಕಪಕ್ಕ ವಾಣಿಜ್ಯ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಇಲ್ಲ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಪೂರ್ವ ವಲಯ 442, ಪಶ್ಚಿಮ ವಲಯ 791, ದಕ್ಷಿಣ ವಲಯ 118, ದಾಸರಹಳ್ಳಿ ವಲಯ 08, ಬೊಮ್ಮನಹಳ್ಳಿ 64, ಯಲಹಂಕ 28, ರಾಜರಾಜೇಶ್ವರಿ ನಗರ 47, ಮಹದೇವಪುರ 124 ಸ್ಥಳಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ.
ಪಾಲಿಕೆಯ 4ನೇ ಒಂದರಷ್ಟು ವಾರ್ಡ್ಗಳಲ್ಲಿ 50ಕ್ಕೂ ಅಧಿಕ ಸೋಂಕಿತರಿದ್ದಾರೆ. ಈ ಮಧ್ಯೆ ಗುಣಮುಖರ ಸಂಖ್ಯೆ ಶೇ.13ರಷ್ಟು ಮಾತ್ರ ಇದೆ ಎಂದು ಬಿಬಿಎಂಪಿ ಬುಲೆಟಿನ್ ಮಾಹಿತಿ ನೀಡಿದೆ. ಇನ್ನು ನಗರದಲ್ಲಿ ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ಈ 3 ವಲಯಗಳಲ್ಲಿ ಶೇ.60 ಸೋಂಕಿತರಿದ್ದಾರೆ.
ಈ ವಲಯಗಳಲ್ಲಿ 5,657 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇವು ಕೋವಿಡ್ 19 ಹಾಟ್ಸ್ಪಾಟ್ಗಳಾಗಿ ಪರಿವರ್ತನೆಯಾಗಿವೆ. ಈ ಪೈಕಿ ಪೂರ್ವ ವಲಯದಲ್ಲಿ 1,694, ಪಶ್ಚಿಮ 1,650, ದಕ್ಷಿಣ 2,313, ರಾಜರಾಜೇಶ್ವರಿ ನಗರ 322, ಬೊಮ್ಮನಹಳ್ಳಿ 630, ಯಲಹಂಕ 310, ದಾಸರಹಳ್ಳಿ 65, ಮಹದೇವಪುರ 499 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ ನಗರದಲ್ಲಿ ಭಾನುವಾರ ದಾಖಲೆಯ 1,235 ಹೊಸ ಪ್ರಕರಣ ದೃಢಪಟ್ಟಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 9,580 ಏರಿಕೆ ಆಗಿದ್ದು, 132 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರ, ಆರೈಕೆ ಕೇಂದ್ರಗಳಲ್ಲಿ 8,167 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 145 ಜನ ಸೋಂಕಿಗೆ ಬಲಿಯಾಗಿದ್ದು, 302 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸೋಂಕಿತರ ಓಡಾಟ!: ನಗರದಲ್ಲಿ ಸೋಂಕಿತರನ್ನು ಕರೆದೊಯ್ಯಲು ಸಕಾಲದಲ್ಲಿ ಆ್ಯಂಬುಲೆನ್ಸ್ ದೊರೆಯದ ಕಾರಣ ಹಾಗೂ ಬೆಡ್ ಕೊರತೆಯಿಂದ ಖುದ್ದಾಗಿ ಚಿಕಿತ್ಸೆಗೆ ತೆರಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳ ಮೂಲಕ ಹಾದುಹೋಗುವುದ ರಿಂದ ಸೋಂಕಿನ ಭೀತಿ ಕಾಡುತ್ತಿದೆ. ಇನ್ನು ಕನ್ನಡ -ಸಂಸ್ಕೃತಿ ಇಲಾಖೆ ಜಾನಪದ ಅಕಾ ಡೆಮಿ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿದ್ದು, ಇವರ ಸಂಪರ್ಕದಲ್ಲಿದ್ದವರನ್ನು ಜಿಕೆವಿಕೆ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ಸಮ ಯಕ್ಕೆ ಊಟ, ತಿಂಡಿ ನೀಡುತ್ತಿಲ್ಲ. ಶುಚಿತ್ವ ಇಲ್ಲ. ಸೋಂಕಿತರ ಪರೀಕ್ಷೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಕೊನೇ ಬಾರಿ ತಂದೆ ಮುಖ ನೋಡಲಾಗದ ಮಗ: ಕುರುಬರಹಳ್ಳಿಯ 60 ವರ್ಷದ ವ್ಯಕ್ತಿಯೊಬ್ಬರು ಸೋಂಕಿ ನಿಂದ ಅಸುನೀಗಿದ್ದು, ವೃದ್ಧನ ಅಂತ್ಯ ಸಂಸ್ಕಾರ ಸುಮನಹಳ್ಳಿ ಯ ಚಿತಾಗಾರದಲ್ಲಿ ನೆರವೇರಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ತಂದೆ ಮುಖವನ್ನು ಕೊನೇ ಬಾರಿ ನೋಡಲಾಗದೆ ಅವರ ಮಗ ಸಂಕಟದಿಂದ ಕಣ್ಣೀರಿಟ್ಟ ದೃಶ್ಯ ನೆರೆದವರ ಮನಕಲುಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.