ದ.ಆ.: 100 ದಿನಗಳ ಲಾಕ್‌ಡೌನ್ ಪೂರ್ಣ
ದ.ಆಫ್ರಿಕಾದ ವೆಸ್ಟರ್ನ್ ಕೇಪ್ ಪ್ರಾಂತ್ಯವು ಕೋವಿಡ್‌ನ ಹಾಟ್‌ಸ್ಪಾಟ್ ಆಗಿದ್ದು 68 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ
Team Udayavani, Jul 6, 2020, 2:25 PM IST
ಕೇಪ್ ಟೌನ್: ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಇದೇ ರೀತಿ ಆಫ್ರಿಕಾದಲ್ಲೂ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಅಧಿಕವಾಗುತ್ತಿರುವ ಸೋಂಕು ಪ್ರಕರಣಗಳ ಉಲ್ಬಣಕ್ಕೆ ಸಂಪೂರ್ಣವಾಗಿ ಬೆಚ್ಚಿಬಿದ್ದಿದೆ. ಸಲ್ಲದಕ್ಕೆ ಇಲ್ಲಿನ 10 ದೇಶದಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯಿದ್ದು, ವೆಂಟಿಲೇಟರ್‌ಗಳ ಅಭಾವವೂ ಇದೆ. ಈ ಬಿಕ್ಕಟ್ಟಿನ ವಾತಾವರಣದಲ್ಲಿಯೇ ದಕ್ಷಿಣ ಆಫ್ರಿಕಾ ನೂರು ದಿನಗಳ ಲಾಕ್‌ಡೌನ್ ಅವಧಿಯನ್ನು ಪೂರೈಸಿದೆ.
ಜಾಗತಿಕವಾಗಿ ಸೋಂಕಿನ ಬಿಕ್ಕಟ್ಟಿನ ವಿರುದ್ಧ ಹೋರಾಡುವಲ್ಲಿ ಹಿಂದುಳಿದಿರುವ ದೇಶವಾದ ದಕ್ಷಿಣ ಆಫ್ರಿಕಾ ದೇಶ ಮೂದಲ ಪ್ರಕರಣ ದಾಖಲಾಗಿ ಮೂರು ವಾರಗಳ ನಂತರ ಅಂದರೆ ಮಾರ್ಚ್ 27 ರಂದು ಇಡೀ ದೇಶವನ್ನು ಲಾಕ್‌ಡೌನ್ ಮಾಡಿತ್ತು. ಆದರೂ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೇಶ ವಿಫಲವಾಗಿದೆ.
ಇನ್ನು 100 ದಿನಗಳ ಕಾಲ ಲಾಕ್‌ಡೌನ್ ಹಂತವನ್ನು ಪೂರೈಸಿದರ ಕುರಿತು ವೆಸ್ಟರ್ನ್ ಕೇಪ್ ಮುಖ್ಯಮಂತ್ರಿ ಅಲನ್ ವಿಂಡೆ ಅವರು, ದಕ್ಷಿಣ ಆಫ್ರಿಕನ್ನರು ಮುಂದಿನ ಕೆಲವು ಸಮಯದವರೆಗೆ ಸೋಂಕಿನೊಂದಿಗೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ಲಾಕ್‌ಡೌನ್ ನಿವಾಸಿಗಳಿಗೆ ಕಷ್ಟಕರ ಮಾರ್ಗವಾಗಿದ್ದು, ಎದುರಾಗಿರುವ ಈ ಘಟ್ಟವನ್ನು ಎದುರಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ. ಪರಿಸ್ಥಿತಿ ಹೀನಾಯವಾಗಿದ್ದರೂ ದೇಶದಲ್ಲಿ ಮೇ 1 ರಿಂದ ಲಾಕ್‌ಡೌನ್ ನಿಯಮ ಸಡಿಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೋಂಕು ಪ್ರಕರಣ ಹೆಚ್ಚಳಕ್ಕೆ ಲಾಕ್‌ಡೌನ್ ಸಡಿಲಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ.
ದಕ್ಷಿಣ ಆಫ್ರಿಕಾದ ವೆಸ್ಟರ್ನ್ ಕೇಪ್ ಪ್ರಾಂತ್ಯವು ಸೋಂಕಿನ ಕೇಂದ್ರಬಿಂದುವಾಗಿದ್ದು, ಇಲ್ಲಿಯೇ ಸುಮಾರು 68,376 ಪ್ರಕರಣಗಳು ಮತ್ತು 2,026 ಮಂದಿ ಮರಣ ಹೊಂದಿದ್ದಾರೆ. ಶನಿವಾರ ಒಂದೇ ದಿನ 10,853 ಹೊಸ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯವರೆಗೆ ದಾಖಲಾದ ದೈನಂದಿನ ಹೆಚ್ಚಳ ಪ್ರಕರಣಗಳಾಗಿದೆ. ಒಟ್ಟಾರೆ ಸೋಂಕಿತರ ಪ್ರಮಾಣ 1,87,977 ಕ್ಕೆ ತಲುಪಿದ್ದು, 3,026 ಮಂದಿ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ತಿಳಿಸಿದೆ.
ಆಫ್ರಿಕಾ ಖಂಡದಲ್ಲಿ ಏರಿಕೆ
ಇತ್ತ ಆಫ್ರಿಕಾ ಖಂಡದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ರವಿವಾರ ಒಟ್ಟು ಪ್ರಕರಣಗಳ ಸಂಖ್ಯೆ1.87 ಲಕ್ಷಕ್ಕೇರಿದ್ದರೆ, ಒಟ್ಟು ಸಾವಿನ ಸಂಖ್ಯೆಯೂ 3026ಕ್ಕೇರಿದೆ. ಬಡ ರಾಷ್ಟ್ರಗಳಿಗೆ ಸಂಕಷ್ಟ ಜಗತ್ತಿನ ಅತಿ ಬಡ ರಾಷ್ಟ್ರಗಳಾದ ಆಫ್ರಿಕಾದ ಬುರುಂಡಿ ಮತ್ತು ಲೈಬೀರಿಯಾದಲ್ಲೂ ಕೋವಿಡ್ ಅಟ್ಟಹಾಸ ಮೆರೆಯುತ್ತಿದೆ. ಅಲ್ಲಿ ಚಿಕಿತ್ಸೆಗೆ ಜನರಲ್ಲಿ ಹಣವೂ ಇಲ್ಲ, ದೇಶದಲ್ಲಿ ಸರಿಯಾದ ವ್ಯವಸ್ಥೆಯೂ ಇಲ್ಲ ಎಂಬಂತಿದೆ ಪರಿಸ್ಥಿತಿ. ಬುರುಂಡಿಯಲ್ಲಿ 191 ಮಂದಿ ಕೋವಿಡ್ ಸೋಂಕು ತಗುಲಿದ್ದು, ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಬಗ್ಗೆ ಮಾಹಿತಿ ಇಲ್ಲ. ಇನ್ನು ಲೈಬೀರಿಯಾದಲ್ಲಿ 833 ಮಂದಿಗೆ ಸೋಂಕು ತಗುಲಿದ್ದು, 346 ಮಂದಿ ಚೇತರಿಸಿಕೊಂಡಿದ್ದಾರೆ. 37 ಮಂದಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.