ದೇಹ ಕೊಡದ್ದಕ್ಕೆ ಅಧಿಕಾರಿಗಳ ಅಪಹರಿಸಿದ ಆದಿವಾಸಿಗಳು
Team Udayavani, Jul 6, 2020, 2:44 PM IST
ಕ್ವಿಟೋ: ಕೋವಿಡ್ ಸೋಂಕು ಅಮೆಜಾನ್ ಕಾಡಿನಲ್ಲಿರುವ ಆದಿವಾಸಿಗಳನ್ನೂ ಬಿಟ್ಟಿಲ್ಲ. ಹೀಗೆ ಸೋಂಕು ಬಂದಿದ್ದ ಆದಿವಾಸಿ ಸಮುದಾಯದ ನಾಯಕನೊಬ್ಬನನ್ನು ಈಕ್ವೆಡಾರ್‌ನ ಸರಕಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆದರೆ ಆತ ಮೃತಪಟ್ಟಿದ್ದ. ಬಳಿಕ ಆರೋಗ್ಯ ಇಲಾಖೆ ನಿಯಮಗಳ ಪ್ರಕಾರ ಮೃತದೇಹವನ್ನು ಕೊಡದೇ ಇದ್ದುದಕ್ಕೆ ಆದಿವಾಸಿಗಳು ಅಧಿಕಾರಿಗಳನ್ನೇ ಅಪಹರಿಸಿದ್ದಾರೆ.
ಒಟ್ಟು ಆರು ಮಂದಿಯನ್ನು ಆದಿವಾಸಿಗಳು ಅಪಹರಿಸಿದ್ದು, ತಮ್ಮ ನಾಯಕನ ದೇಹವನ್ನು ವಾಪಸ್ ಕೊಟ್ಟ ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ. ಅಪಹರಣಕ್ಕೆ ಒಳಗಾದವರಲ್ಲಿ ಇಬ್ಬರು ಯೋಧರು, ಇಬ್ಬರು ಪೊಲೀಸ್ ಅಧಿಕಾರಿಗಳು, ಇಬ್ಬರು ಜನಸಾಮಾನ್ಯರು ಸೇರಿದ್ದರು. ಪೆರುವಿನ ಗಡಿ ಸನಿಹದ ಹಳ್ಳಿಯೊಂದರಿಂದ ಇವರನ್ನು ಅಪಹರಿಸಿದ್ದು, ನಾಯಕನ ಶವ ವಾಪಸ್ ಕೊಡದ ಹೊರತು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು.
ಸುಮಾರು 600 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಆದಿವಾಸಿಗಳ ಈ ಪಟ್ಟಿನಿಂದಾಗಿ ಕೊನೆಗೆ ಸರಕಾರವೇ ಮೆತ್ತಗಾಗಿದ್ದು ಹೂಳಿದ್ದ ನಾಯಕನ ಶವವನ್ನು ಮಣ್ಣಿನಿಂದ ಮೇಲೆತ್ತಿ ಅವರಿಗೆ ನೀಡಿದೆ. ಬಳಿಕ ಅಪಹೃತರ ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.