ಐಪಿಎಲ್ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್
ಯುಎಇ, ಶ್ರೀಲಂಕಾ ಬಳಿಕ ದೂರದ ಕಿವೀಸ್‌ಗೆ ಐಪಿಎಲ್ ಆಸಕ್ತಿ ; ಸಮಯದ ಅಂತರದ್ದೇ ಚಿಂತೆ
Team Udayavani, Jul 7, 2020, 6:40 AM IST
ಹೊಸದಿಲ್ಲಿ: ಈ ವರ್ಷದ ಐಪಿಎಲ್ ಭವಿಷ್ಯ ತೂಗುಯ್ಯಾ ಲೆಯಲ್ಲಿದೆ. ಅಕಸ್ಮಾತ್ ಭಾರತದಲ್ಲಿ ನಡೆಯದೇ ಹೋದರೆ ಇದನ್ನು ವಿದೇಶಗಳಲ್ಲಾದರೂ ನಡೆಸಬೇಕು ಎನ್ನುವ ಜಿದ್ದಿಗೆ ಬಿದ್ದಿದೆ ಬಿಸಿಸಿಐ. ಈಗಾಗಲೇ ಯುಎಇ ಮತ್ತು ಶ್ರೀಲಂಕಾ ಹೆಸರು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಂಡಿದೆ. ಇದೀಗ ನ್ಯೂಜಿಲ್ಯಾಂಡ್ ಕೂಡ ಐಪಿಎಲ್ ಆತಿಥ್ಯದ ಉಮೇದು ತೋರಿದೆ ಎಂದು ತಿಳಿದು ಬಂದಿದೆ.
“ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸುವುದಕ್ಕೆ ನಮ್ಮ ಮೊದಲ ಆದ್ಯತೆ. ಇದು ಸುರಕ್ಷಿತವಲ್ಲ ಎಂದಾದರೆ ನಾವು ವಿದೇಶಗಳ ಆಯ್ಕೆಯನ್ನು ಪರಿ ಗಣಿಸಬೇಕಾಗುತ್ತದೆ. ಯುಎಇ ಮತ್ತು ಶ್ರೀಲಂಕಾ ಈಗಾಗಲೇ ಮುಂದೆ ಬಂದಿವೆ. ಈಗ ನ್ಯೂಜಿಲ್ಯಾಂಡ್ ಕೂಡ ಐಪಿಎಲ್ ನಡೆಸಲು ಆಸಕ್ತಿ ತೋರಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
“ನಾವು ಪ್ರಸಾರಕರು, ಫ್ರಾಂಚೈಸಿಗಳು ಹಾಗೂ ತಂಡಗಳ ಜತೆ ಸೇರಿ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಬೇಕಿದೆ. ನಮಗೆ ಆಟಗಾರರ ಸುರಕ್ಷತೆ ಮುಖ್ಯ. ಇದರೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.
ಏಳೂವರೆ ಗಂಟೆ ಅಂತರ!
ಐಪಿಎಲ್ ವಿದೇಶದಲ್ಲಿ ನಡೆಯುವು ದಾದರೆ ಆಗ ಮೊದಲ ಆಯ್ಕೆ ಯುಎಇ. ಮಿತವ್ಯಯದ ಲೆಕ್ಕಾಚಾರದಲ್ಲಿ ಶ್ರೀಲಂಕಾ ಉತ್ತಮ ಆಯ್ಕೆ. ಆದರೆ ” ಮುಕ್ತ’ ನ್ಯೂಜಿಲ್ಯಾಂಡ್ ಮತ್ತು ಭಾರತದ ನಡುವೆ ಏಳೂವರೆ ಗಂಟೆಗಳ ದೊಡ್ಡ ಅಂತರವಿದೆ. ಭಾರತದ ಸಂಜೆ ಹಾಗೂ ರಾತ್ರಿಯ ಕಾಲಮಾನಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಅಲ್ಲಿ ಪಂದ್ಯಗಳನ್ನು ನಡೆ ಸುವುದು ಸಾಧ್ಯವಿಲ್ಲದ ಮಾತು.
ನ್ಯೂಜಿಲ್ಯಾಂಡ್‌ನಲ್ಲಿ ಪ್ರಯಾಣದ ಸಮಸ್ಯೆ ಇದೆ. ಹ್ಯಾಮಿಲ್ಟನ್-ಆಕ್ಲೆಂಡ್ ನಡುವೆ ರಸ್ತೆ ಪ್ರಯಾಣ ಮಾಡಬಹುದು. ಆದರೆ ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್, ನೇಪಿಯರ್, ಡ್ಯುನೆಡಿನ್ ಮೊದಲಾದೆಡೆ ವಿಮಾನ ಪ್ರಯಾಣ ಅನಿವಾರ್ಯವಾಗಲಿದೆ. ಇದರಿಂದ ವೆಚ್ಚ ಜಾಸ್ತಿಯಾಗಲಿದೆ.
ಇಂದಿನ ಕಾರಣವೇ ಬೇರೆ…
ಐಪಿಎಲ್ ವಿದೇಶದಲ್ಲಿ ನಡೆಯುವುದು ಹೊಸತೇನಲ್ಲ. 2009ರಲ್ಲಿ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾ ಆಯೋಜಿಸಿತ್ತು. 2014ರಲ್ಲಿ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಇದಕ್ಕೆ ಕಾರಣ, ದೇಶದ ಮಹಾಚುನಾವಣೆ.
ಆದರೆ ಈಗಿನ ಕಾರಣ ಕೋವಿಡ್ . ಈ ಮಹಾಮಾರಿ ವಿಶ್ವವನ್ನೇ ವ್ಯಾಪಿಸಿದೆ. ಭಾರತವಂತೂ ಪದಕಪಟ್ಟಿಯಲ್ಲಿ ಮೇಲೇರುವಂತೆ ಸೋಂಕಿತರ ಯಾದಿಯಲ್ಲಿ 3ನೇ ಸ್ಥಾನಕ್ಕೆ ನೆಗೆದಿದೆ. ಇಂಥ ಸ್ಥಿತಿಯಲ್ಲಿ ಇಲ್ಲಿ ಐಪಿಎಲ್ ನಡೆಸುವುದು ಕಷ್ಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.