ಈ ಮಳೆಗಾಲವೂ ಕಾಲುಸಂಕದಲ್ಲೇ ಸಂಕಷ್ಟದ ನಡಿಗೆ
ಈಡೇರದ ಆಜ್ರಿ- ಬಡಬಾಳು ಸಂಪರ್ಕ ಸೇತುವೆ
Team Udayavani, Jul 7, 2020, 6:25 AM IST
ಕುಂದಾಪುರ: ಆಜ್ರಿ ಗ್ರಾಮದ ಬಡಬಾಳು, ಜಡ್ಡಿನಮೂಲೆ, ಯಡೂರು ಮತ್ತಿತರ ಭಾಗದ ಜನರು ಆಜ್ರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬೇಡಿಕೆ ಈ ವರ್ಷದ ಮಳೆಗಾಲಕ್ಕೂ ಈಡೇರಿಲ್ಲ. ಈಗ ಕುಬ್ಜಾ ನದಿ ದಾಟಲು ಊರವರೇ ನಿರ್ಮಿಸಿದ ಕಾಲುಸಂಕವೇ ಆಸರೆಯಾಗಿದೆ.
ಬಡಬಾಳು, ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದ ಜನರು ಸೇತುವೆಯಿಲ್ಲದೆ ಪ್ರತಿ ಮಳೆಗಾಲದಲ್ಲಿ ಕಾಲುಸಂಕದಲ್ಲಿ ಆತಂಕದಲ್ಲೇ ಸಂಚರಿಸುವುದು ಅನಿವಾರ್ಯವಾಗಿದೆ. ಮಳೆಗಾಲ ಬಂತೆಂದರೆ ಸಾಕು ಈ ಊರುಗಳಿಗೆ ಮುಖ್ಯ ಪೇಟೆ ಇರುವ ಆಜ್ರಿಯ ಸಂಪರ್ಕವೇ ಕಡಿತಗೊಳ್ಳುತ್ತದೆ. ಇಲ್ಲಿನ ಜನರು ಕೇವಲ 1 ಕಿ.ಮೀ. ದೂರಕ್ಕೆ ಸೇತುವೆಯಿಲ್ಲದ ಕಾರಣ 5 ಕಿ.ಮೀ. ಹೆಚ್ಚುವರಿ ದೂರ ಸಂಚರಿಸಬೇಕಾಗಿದೆ.
ಪ್ರತಿ ವರ್ಷ ಕಾಲುಸಂಕ
ಮಳೆಗಾಲದಲ್ಲಿ ಇಲ್ಲಿ ಊರವರೇ ಪ್ರತಿ ವರ್ಷ ನಿರ್ಮಿಸುವ ತಾತ್ಕಾಲಿಕ ಕಾಲುಸಂಕವೇ ನದಿ ದಾಟಲು ಆಸರೆಯಾಗಿದೆ. ಬೇಸಗೆಯಲ್ಲಿ ಕುಬ್ಜಾ ನದಿಯಲ್ಲಿ ನೀರು ಕಡಿಮೆಯಾದ ಅನಂತರ ನದಿಯಲ್ಲೇ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. 3 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಕಾಲು ಸಂಕ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಆ ವರ್ಷವಿಡೀ ಈ ಮಾರ್ಗದಲ್ಲಿ ಸಂಪರ್ಕವೇ ಕಡಿತಗೊಂಡಿತ್ತು.
ಜಡ್ಡಿನಮೂಲೆಯಲ್ಲಿ ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಸೇತುವೆಯ ಬೇಡಿಕೆಯನ್ನು ಇಲ್ಲಿನ ಜನ ಇಡುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಸೇತುವೆ ಘೋಷಣೆ ಯಾಗಿದ್ದರೂ ಲಾಕ್‌ಡೌನ್‌ನಿಂದಾಗಿ ಅಡ್ಡಿಯಾಗಿದೆ. ಇದರಿಂದ ಈ ಭಾಗದ ಜನರಿಗೆ ಈ ಮಳೆಗಾಲ ಕೂಡ ಕಾಲು ಸಂಕದಲ್ಲೇ ಹೊಳೆ ದಾಟಬೇಕಾದ ಪರಿಸ್ಥಿತಿಯಿದೆ. ಈ ವರ್ಷ ಶಾಲಾ – ಕಾಲೇಜು ಇನ್ನೂ ಆರಂಭವಾಗದ ಕಾರಣ ಮಕ್ಕಳು ಈ ಹೊಳೆ ದಾಟುವ ಸಂಭವ ಕಡಿಮೆ. ಆದರೆ ಆಗಸ್ಟ್- ಸೆಪ್ಟಂಬರ್‌ನಲ್ಲಿ ಶಾಲಾರಂಭವಾದರೆ ಮಕ್ಕಳಿಗೆ ಮತ್ತದೇ ಕಾಲುಸಂಕದ ನಡಿಗೆ ಅನಿವಾರ್ಯವಾಗುತ್ತದೆ.
ಸೇತುವೆ ಮಂಜೂರು
ಜಡ್ಡಿನಮೂಲೆಯಲ್ಲಿ ಕುಬ್ಜಾ ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋ.ರೂ. ಅನುದಾನ ಮಂಜೂರಾಗಿದೆ. ಆದರೆ ಕೋವಿಡ್ ದಿಂದಾಗಿ ಲಾಕ್‌ಡೌನ್ ಘೋಷಣೆಯಾಗಿದ್ದುದರಿಂದ ಈ ಬಾರಿಯ ಬೇಸಗೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ಇನ್ನೇನಿದರೂ ಮಳೆಗಾಲ ಮುಗಿದ ಬಳಿಕವಷ್ಟೇ ಇದು ಚಾಲನೆ ಪಡೆಯುವ ಸಾಧ್ಯತೆಗಳಿವೆ.
ಅನುಮತಿ ಸಿಗಬೇಕಷ್ಟೆ
ಶಾಸಕರ ಬೇಡಿಕೆಗೆ ಸರಕಾರ ಸ್ಪಂದಿಸಿ ಸೇತುವೆ ಹಾಗೂ ಕಿಂಡಿ ಅಣೆಕಟ್ಟನ್ನು ಘೋಷಿಸಿದ್ದು, ಅನುಮೋದನೆ ಕೂಡ ಸಿಕ್ಕಿದೆ. ಆದರೆ ಇನ್ನೂ ಕೂಡ ಕಾಮಗಾರಿಯ ಕಾರ್ಯಗತಕ್ಕೆ ಅನುಮತಿ ಸಿಕ್ಕಿಲ್ಲ. ಅದು ಸಿಕ್ಕ ಅನಂತರ ಕಾಮಗಾರಿ ಆರಂಭಿಸಲಾಗುವುದು.
– ಶೇಷಕೃಷ್ಣ, ಕಿರಿಯ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.