ಬಡ ಕುಟುಂಬಕ್ಕೆ ಉಚಿತವಾಗಿ ಶೌಚಾಲಯ ನಿರ್ಮಾಣ
ರೆಖ್ಯ: ಆದರ್ಶ ಮೆರೆದ ಗಾರೆ ಕೆಲಸಗಾರ
Team Udayavani, Jul 7, 2020, 6:36 AM IST
ಬೆಳ್ತಂಗಡಿ: ಶೌಚಾಲಯವಿಲ್ಲದ ಬಡ ಕುಟುಂಬವೊಂದಕ್ಕೆ ಉಚಿತವಾಗಿ ಶೌಚಾಲಯ ನಿರ್ಮಿಸಿ ಕೊಟ್ಟು ಗಾರೆ ಕೆಲಸಗಾರರೊಬ್ಬರು ಆದರ್ಶ ಮೆರೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕೆಲೆಂಜಿಲೋಡಿ ಎಂಬ ಗ್ರಾಮಾಂತರ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬವೊಂದು ಶೌಚಾಲಯವಿಲ್ಲದೆ ಸಂಕಷ್ಟದಲ್ಲಿತ್ತು. ಇದನ್ನು ಗಮನಿಸಿ ಪಂಚಾಯತ್ ಸದಸ್ಯರೊಬ್ಬರು ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಿ ಕೊಟ್ಟಿದ್ದರೂ ಗಾರೆ ಕೆಲಸದವರಿಗೆ ವೇತನ ನೀಡಲೂ ಸಾಧ್ಯವಾಗದೆ ಸಂಕಷ್ಟ ಉಂಟಾಗಿತ್ತು.
ವಿಷಯ ತಿಳಿದ ಅದೇ ಊರಿನ ನಾರಾಯಣ ಗೌಡ ಮತ್ತವರ ತಂಡ ಕೂಡಲೇ ಕಾರ್ಯಪ್ರವೃತ್ತವಾಗಿ ಶೌಚಾ ಲಯ ನಿರ್ಮಿಸಿಕೊಟ್ಟಿದೆ. ನಾರಾಯಣ ಗೌಡ ವೃತ್ತಿಯಲ್ಲಿ ಗಾರೆ ಕೆಲಸದವರು. ಬೆಳ್ತಂಗಡಿ ತಾಲೂಕು ವಿಪತ್ತು ನಿರ್ವಹಣ ಘಟಕದ ಸದಸ್ಯರೂ ಆಗಿದ್ದಾರೆ. ಇತ್ತೀಚೆಗಷ್ಟೆ ತರಬೇತಿ ಮುಗಿಸಿದ್ದರು. ಇದೀಗ ತನಗೆ ತಿಳಿದಿರುವ ಕೌಶಲದ ಮುಖಾಂತರ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ತಲೆಹೊರೆಯಲ್ಲಿ ಎರಡು ಕಿ.ಮೀ. ಕಚ್ಚಾ ವಸ್ತು ಸಾಗಣೆ!
ಶೌಚಾಲಯ ನಿರ್ಮಿಸಬೇಕಾಗಿದ್ದ ಮನೆ ಗ್ರಾಮಾಂತರ ಪ್ರದೇಶದಲ್ಲಿದ್ದು, ಯಾವುದೇ ವಾಹನ ಬರಲಾರದಷ್ಟು ದುರ್ಗಮ ಸ್ಥಳದಲ್ಲಿತ್ತು. ಹಾಗಾಗಿ ಎರಡು ಕಿಲೋ ಮೀಟರ್ ದೂರದಿಂದ ಅಗತ್ಯ ವಸ್ತುಗಳನ್ನು ತಲೆಹೊರೆಯಲ್ಲಿ ಸಾಗಿಸಬೇಕಾದ ಅನಿವಾರ್ಯವಿತ್ತು. ಅದು ವೆಚ್ಚದಾಯಕವಾದ್ದರಿಂದ ಬಡ ಕುಟುಂಬ ಇಲ್ಲಿಯವರೆಗೆ ಶೌಚಾಲಯ ನಿರ್ಮಿಸಲು ಹೋಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.