ಚಾರ್ಮಾಡಿ: ಪೊಲೀಸ್ ಚೆಕ್‌ಪೋಸ್ಟ್‌ಗೆ ಕಾಯಕಲ್ಪ
ಗಾಳಿ, ಮಳೆಗೆ ಶಾಶ್ವತ ಶೆಡ್ ನಿರ್ಮಾಣ; ಚಾರ್ಮಾಡಿ ಗ್ರಾ.ಪಂ. ನೆರವು
Team Udayavani, Jul 7, 2020, 5:40 AM IST
ಮುಂಡಾಜೆ: ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಮಂಗಳೂರು- ಮೂಡಿಗೆರೆ ರಾಜ್ಯ ಹೆದ್ದಾರಿಯ ಚಾರ್ಮಾಡಿ ಪೊಲೀಸ್ ಚೆಕ್‌ಪೋಸ್ಟ್‌ಗೆ ಕೊನೆಗೂ ಕಾಯಕಲ್ಪ ಸಿಕ್ಕಿದೆ.
ಈ ಹಿಂದೆ ಇಲ್ಲಿ ಮುಖ್ಯ ರಸ್ತೆಯಿಂದ ಸುಮಾರು 30 ಮೀ. ನಷ್ಟು ದೂರದಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಇತ್ತು. ಅಷ್ಟು ದೂರದಿಂದ ಪೊಲೀಸ್ ಸಿಬಂದಿ ವಾಹನಗಳ ಬಳಿ ತಪಾಸಣೆಗೆ ಬರುವಾಗ ವಾಹನಗಳು ತೆರಳಿ ಆಗುತ್ತಿತ್ತು. ಸಿಬಂದಿ ರಸ್ತೆ ಬದಿಯಲ್ಲಿ ಬಿಸಿಲು, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ನಿಂತು ಅಥವಾ ಕುರ್ಚಿ ಹಾಕಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು. ಲಾಕ್‌ಡೌನ್ ಸಮಯದಲ್ಲಿ ವಾಹನ ತಪಾಸಣೆ ಮಾಡುವ ಸಿಬಂದಿಗೆ ಶೀಟ್ ಹಾಕಿ ತಾತ್ಕಾಲಿಕ ಶೆಡ್ ಒಂದನ್ನು ಚಾರ್ಮಾಡಿ ಗ್ರಾ.ಪಂ. ನಿರ್ಮಿಸಿ ಕೊಟ್ಟು ಸಹಕರಿಸಿತ್ತು.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಚಾರ್ಮಾಡಿ ಪೊಲೀಸ್ ಚೆಕ್ ಪೋಸ್ಟ್, ಇತ್ತೀಚೆಗೆ ನೂತನ ಪಿ.ಎಸ್. ಐ.ಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಾಯಕ್ ನೇತೃತ್ವದಲ್ಲಿ ಕಾಯಕಲ್ಪ ಕಂಡಿದೆ. ರಸ್ತೆ ಸಮೀಪವೇ ನೂತನ ಚೆಕ್‌ಪೋಸ್ಟ್ ನಿರ್ಮಾಣ ಗೊಂಡಿದೆ. ಇದರಿಂದ ಪೊಲೀಸರು, ವಾಹನ ಚಾಲಕರು ಅಲ್ಲಿಂದಿಲ್ಲಿಗೆ ಅಲೆಯುವುದು ತಪ್ಪಿದೆ. ಅಲ್ಲದೆ ಈ ಹಿಂದಿನ ಚೆಕ್ ಪೋಸ್ಟ್‌ಗೆ ಫಲಕ ಕೂಡ ಇರಲಿಲ್ಲ. ಈಗ ದೂರದಿಂದಲೇ ಕಾಣುವಂತಹ ರಿಫ್ಲೆಕ್ಟರ್ ಉಳ್ಳ ಫಲಕವನ್ನು ಹಾಕಲಾಗಿದೆ. ಹಲವಾರು ಸಮಯದಿಂದ ತೊಂದರೆಗಳನ್ನು ಎದುರಿಸುತ್ತಿದ್ದ ಚಾರ್ಮಾಡಿ ಪೊಲೀಸ್ ಗೇಟ್‌ಗೆ ಕಾಯಕಲ್ಪ ದೊರಕಿರುವುದು ವಾಹನ ಸವಾರರು ಹಾಗೂ ಪೊಲೀಸ್ ಸಿಬಂದಿಗೆ ಅನುಕೂಲವಾಗಿದೆ.
ಗೇಟ್ ದುರಸ್ತಿ
ಚೆಕ್‌ಪೋಸ್ಟ್‌ಗೆ ಇರುವ ಗೇಟ್ ಮುರಿದು ಬಿದ್ದು ದುರಸ್ತಿ ಕಾಣದ ಕಾರಣ ಚೆಕ್‌ಪೋಸ್ಟ್ ಜಾಗದಲ್ಲಿ ಬಣ್ಣ, ಸ್ಟಿಕರ್ ಮಾಸಿದ್ದ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಳವಡಿಸಲಾಗಿತ್ತು. ಇದರಿಂದ ವಾಹನ ಸವಾರರಿಗೆ ಭಾರೀ ತೊಂದರೆ ಆಗುತ್ತಿತ್ತು. ಈಗ ಮುರಿದು ಬಿದ್ದ ಗೇಟ್‌ದುರಸ್ತಿ ಪಡಿಸಿ ಅಳವಡಿಸಲಾಗಿದೆ.
ಹೊಸ ಗೇಟ್ ನಿರ್ಮಾಣಕ್ಕೆ ಮನವಿ
ಹಿಂದಿನ ಇಲ್ಲಿಯ ವ್ಯವಸ್ಥೆಯಿಂದ ವಾಹನ ಸವಾರರು ಹಾಗೂ ಪೊಲೀಸರು ತೊಂದರೆ ಅನುಭವಿಸುವುದನ್ನು ಮನಗಂಡು, ನೂತನ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸುವುದರೊಂದಿಗೆ ಮುರಿದು ಬಿದ್ದಿದ್ದ ಗೇಟ್‌ನ್ನು ಅಳವಡಿಸಲಾಗಿದೆ. ಹೊಸ ಗೇಟ್ ನಿರ್ಮಿಸಲು ಮೇಲಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ.
– ಪವನ್ ನಾಯಕ್, ಪಿ.ಎಸ್.ಐ.,
ಧರ್ಮಸ್ಥಳ ಪೊಲೀಸ್ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.