7 ವರ್ಷದ ಹಿಂದೆಯೇ ವುಹಾನ್ ಲ್ಯಾಬ್‌ಗ ವೈರಸ್ ಮಾದರಿ ಸಲ್ಲಿಕೆ
Team Udayavani, Jul 7, 2020, 12:16 PM IST
ಬೀಜಿಂಗ್: 7 ವರ್ಷಗಳ ಹಿಂದೆಯೇ ಚೀನದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ವೈರಸ್‌ನ ಮಾದರಿಗಳನ್ನು ಕಳುಹಿಸಲಾಗಿತ್ತು. ಈ ವೈರಸ್‌ನ ಮಾದರಿ ಕೋವಿಡ್-19ನ್ನು ಹೋಲುತ್ತದೆ ಎಂದು ಸಂಡೆ ಟೈಮ್ಸ್ ವರದಿ ಮಾಡಿದೆ. 2013ರಲ್ಲಿ ನೈರುತ್ಯ ಚೀನದ ಯುನ್ನಾನ್ ಪ್ರಾಂತ್ಯದಲ್ಲಿರುವ ತಾಮ್ರದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 6 ಕಾರ್ಮಿಕರು ಅಲ್ಲಿದ್ದ ಬಾವಲಿಯ ಮಲವನ್ನು ಸ್ವಚ್ಛಗೊಳಿಸಿದ ನಂತರ ಜ್ವರಕ್ಕೆ ತುತ್ತಾಗಿದ್ದರು. ಬಳಿಕ, 6 ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದರು. ಬಹುಶಃ ಬಾವಲಿಯಿಂದ ಹರಡಿದ ಕೋವಿಡ್ ವೈರಸ್ ಇವರ ಸಾವಿಗೆ ಕಾರಣ ಎನ್ನಲಾಗಿದೆ. ನಂತರ, ಈ ಬಾವಲಿಯ ಮಲದಲ್ಲಿದ್ದ ವೈರಸ್‌ನ ಮಾದರಿಗಳನ್ನು ವುಹಾನ್‌ನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ನಂತರದ ದಿನಗಳಲ್ಲಿ ವುಹಾನ್ ಲ್ಯಾಬ್‌ನ ಖ್ಯಾತ ವೈರಾಲಜಿಸ್ಟ್ , “ಬ್ಯಾಟ್ ವುಮೆನ್’ ಎಂದೇ ಖ್ಯಾತರಾದ ಶಿ ಜೆಂಗ್‌ಲಿಯವರು ಈ ಗಣಿ ಪ್ರಾಂತ್ಯದಲ್ಲೇ ಅಧ್ಯಯನ ನಡೆಸಿದರು ಎಂದು ಪತ್ರಿಕೆ ವರದಿ ಮಾಡಿದೆ.
ಈ ವರ್ಷದ ಫೆಬ್ರವರಿಯಲ್ಲಿ ಹೇಳಿಕೆ ನೀಡಿದ್ದ ಶಿ ಜೆಂಗ್‌ಲಿ, ಕೋವಿಡ್-19ಗೂ, 2013ರ ಯುನ್ನಾನ್ ಪ್ರಾಂತ್ಯದಲ್ಲಿ ಕಂಡು ಬಂದ ಕೊರೊನಾ ವೈರಸ್‌ನ (ಆರ್‌ಎಟಿಜಿ13) ಮಾದರಿಗೂ ಶೇ. 96.2ರಷ್ಟು ಹೋಲಿಕೆಯಿದೆ ಎಂದಿದ್ದರು. ಆಗ ಗಣಿಯಲ್ಲಿ ಕಂಡು ಬಂದ ವೈರಸ್‌ನ ಮಾದರಿ ಇದೇ “ಆರ್‌ಎಟಿಜಿ13′ ಎಂದು ಪತ್ರಿಕೆ ಹೇಳಿದೆ. ಆದರೆ, ಈ ಬಗ್ಗೆ ವುಹಾನ್ ಲ್ಯಾಬ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.