ಬಟ್ಟೆಗಳ ಅಂದ ಹೆಚ್ಚಿಸುವ ಬೆಲ್ಟ್ ಈಗ ಫ್ಯಾಶನ್‌ !

Team Udayavani, Jul 7, 2020, 4:40 PM IST

ಬಟ್ಟೆಗಳ ಅಂದ ಹೆಚ್ಚಿಸುವ ಬೆಲ್ಟ್ ಈಗ ಫ್ಯಾಶನ್‌

ಬೆಲ್ಟ್ ಫ್ಯಾಶನ್‌ ಆಗಿ ಉಪಯೋಗಿಸುವುದಕ್ಕಿಂತ ಹೆಚ್ಚಾಗಿ ಪ್ಯಾಂಟ್‌ನ ಜತೆ ಧರಿಸುತ್ತಿದ್ದರು. ಆದರೆ ಈಗ ಬೆಲ್ಟ್ ಫ್ಯಾಶನ್‌ ಆಗಿದೆ. ಉಡುಪಿನ ಅಂದ ಚೆಂದ ಹೆಚ್ಚಿಸಲೂ ಬಳಸಲಾಗುತ್ತದೆ. ಶರ್ಟ್‌ ಪ್ಯಾಂಟ್‌ ಅಲ್ಲದೆ ಮಹಿಳೆಯರ ಡ್ರೆಸ್‌ ಗೂ ಈಗ ಬೆಲ್ಟ್ ಹಾಕಿಕೊಳ್ಳಲಾಗುತ್ತದೆ.
ಮಹಿಳೆಯರು ತಮ್ಮ ಡ್ರೆಸ್‌ ಮೇಲೆ ಬಣ್ಣ ಬಣ್ಣದ, ವಿಭಿನ್ನ ಆಕಾರದ, ವಿಶಿಷ್ಟ ಶೈಲಿಯ ಬೆಲ್ಟ್ ಗಳನ್ನು ಹಾಕುತ್ತಿದ್ದಾರೆ. ಈಗಿನ ಲೇಟೆಸ್ಟ್‌ ಟ್ರೆಂಡ್‌, ಸೀರೆ ಮೇಲೆ ಬೆಲ್ಟ್ ತೊಡುವುದು! ಹೌದು, ಸಿಂಪಲಲ್ ಆದ ಸೀರೆಯೂ ಗ್ರ್ಯಾಂಡ್‌ ಆಗಿರೋ ಬೆಲ್ಟ್ ನಿಂದಾಗಿ ತುಂಬಾ ಸ್ಟೈಲಿಶ್‌ ಆಗಿ ಕಾಣಿಸುತ್ತದೆ. ಹೆವಿ ಎಂಬ್ರಾಯ್ಡರಿ ಇರುವ ಸೀರೆಗಳ ಮೇಲೆ ಪ್ಲೈನ್ ಬೆಲ್ಟ್ ಮತ್ತು ಪ್ಲೈನ್ ಸೀರೆಗಳ ಮೇಲೆ ಗ್ರಾಂಡ್‌ ಬೆಲ್ಟ್ ತೊಡಬೇಕೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಸೀರೆಗಳ ಮೇಲೆ ಹಾಕಿಕೊಳ್ಳುವ ಬೆಲ್ಟ್ ಗಳಲ್ಲಿ ಅದೆಷ್ಟು ವಿಧಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೊದಲಿಗೆ ಸೀರೆಯನ್ನು ಉಟ್ಟು, ನಂತರ ಅದರ ಮೇಲೆ ಕಾಲರ್‌ ಇರುವ ಜಾಕೆಟ್‌ ರವಿಕೆಯನ್ನು ತೊಟ್ಟು, ಅದರ ಮೇಲೆ ಬೆಲ್ಟ್ ಅನ್ನು ತೊಡಬಹುದು. ಈ ಲುಕ್‌ ಪಡೆಯಲು ಪ್ಲೈನ್‌ ಸೀರೆಗೆ ಎಂಬ್ರಾಯ್ಡರಿ ಇರುವ ಜಾಕೆಟ್‌ ಬ್ಲೌಸ್‌ ಉಟ್ಟು, ಸ್ವರ್ಣ ಬಣ್ಣದ ಬೆಲ್ಟ್ ಧರಿಸಿಸಬಹುದು. ಸೀರೆಗೆ ಬೆಲ್ಟ್ ಹಾಕಿಕೊಳ್ಳುವುದರಿಂದ ನೆರಿಗೆ ಮತ್ತು ಸೆರಗು ಅಚ್ಚುಕಟ್ಟಾಗಿ ನಿಲ್ಲುತ್ತವೆ. ಪ್ಲೈನ್ ಡ್ರೆಸ್‌ ಹಾಕಿಕೊಳ್ಳುವುದಾದರೆ ಮೆಟಲ್ ಬೆಲ್ಟ್ , ಗೋಲ್ಡ್ ಬೆಲ್ಟ್, ಚೈನ್‌ ಬೆಲ್ಟ್ ಸೇರಿದಂತೆ ಟಾಸ್ಸೆಲ್ ಬೆಲ್ಟ್ ಗಳನ್ನು ಬಳಸಬಹುದು. ಇದರಿಂದ ಬೋರಿಂಗ್‌ ಬಟ್ಟೆಗಳಿಗೆ ಮೆರಗು ಸಿಗುತ್ತದೆ. ಎಲಾಸ್ಟಿಕ್‌ ಬೆಲ್ಟ್ ಗಳಲ್ಲೂ ಲೋಹದ ಬಕಲ್ ಗಳಿದ್ದು, ಇವು ತೊಡಲು ಸರಳ ಹಾಗು ಸುಲಭವಾಗಿರುತ್ತವೆ.

ಪದೇ ಪದೇ ಸಡಿಲ ಅಥವಾ ಬಿಗಿ ಮಾಡಿಕೊಳ್ಳಬೇಕಿಲ್ಲ. ಮಾರುಕಟ್ಟೆಯಲ್ಲಿ ಒರಿಜಿನಲ್ ಲೆದರ್‌ಗಿಂತ ಸ್ವಲ್ಪವೂ ಭಿನ್ನವಾಗಿ ಕಾಣದ ಫೇಕ್‌ ಲೆದರ್‌ನಿಂದ ಮಾಡಿದ ಸುಂದರ ಬೆಲ್ಟ್ ಗಳು ಲಭ್ಯವಿವೆ! ಇನ್ನು ಮುತ್ತು, ರತ್ನ, ಹವಳ, ವಜ್ರ ಸೇರಿದಂತೆ ಅಮೂಲ್ಯ ಕಲ್ಲುಗಳಂತೆ ಕಾಣುವ ಪ್ಲಾಸ್ಟಿಕ್‌, ಕುಪ್ಪಿ ಮತ್ತು ಇತರ ವಸ್ತುಗಳಿಂದ ಸರ, ಹಾರದಂತೆ ಪೋಣಿಸಿ ಬೆಲ್ಟ್ ಗಳನ್ನು ಮಾಡಲಾಗುತ್ತದೆ. ಇವು ಚೈನ್‌ ಬೆಲ್ಟ್ ಗಳ ಸಾಲಿಗೆ ಸೇರುತ್ತವೆ. ಇವುಗಳಿಗೆ ಮ್ಯಾಚಿಂಗ್‌ ಕಿವಿಯೋಲೆ, ಸರ ಮತ್ತು ಬಳೆಗಳನ್ನು ಹಾಕಿಕೊಳ್ಳಬಹುದು. ತಲೆಕೂದಲಿಗೆ ಕಟ್ಟಿಕೊಳ್ಳುವ ರಿಬ್ಬನ್‌ಗಳನ್ನೂ ಬಳಸಿ ಬೆಲ್ಟ್ ನಂತೆ ತೊಡಬಹುದು.

– ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

9

Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.