ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ


Team Udayavani, Jul 8, 2020, 6:17 AM IST

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಸೌತಾಂಪ್ಟನ್‌: ಇದು ಕೋವಿಡ್ 19 ಮಾರಿಗೆ ಕ್ರಿಕೆಟ್‌ ಮೂಲಕ ಸಡ್ಡು ಹೊಡೆಯುವ ಕಾಲ.

ಬರೋಬ್ಬರಿ 4 ತಿಂಗಳಿಂದ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನುಂಗಿ, ಜಗತ್ತಿನ ತುಂಬ ದಾಂಗುಡಿ ಇಡುತ್ತಲೇ ಬಂದ ಕೋವಿಡ್ 19 ಪೀಡೆಗೆ ಇನ್ನು ಅಂಜುತ್ತ ಕುಳಿತರೆ ಸಾಧ್ಯವಾಗದು ಎಂಬ ದಿಟ್ಟ ನಿರ್ಧಾರಕ್ಕೆ ಬಂದ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡಗಳು ಬುಧವಾರದಿಂದ ಇಲ್ಲಿ ಟೆಸ್ಟ್‌ ಕದನಕ್ಕೆ ಇಳಿಯಲಿವೆ.

ಈ ಕೋವಿಡ್ 19 ಮಹಾಮಾರಿ ಒಲಿಂಪಿಕ್ಸ್‌ನಂಥ ಮಹೋನ್ನತ ಪಂದ್ಯಾವಳಿಯನ್ನೇ ಆಹುತಿ ಪಡೆದ ಹೆಮ್ಮಾರಿ. ಹೀಗಾಗಿ ಜಾಗತಿಕ ಕ್ರೀಡೆ ಮರಳಿ ಚಿಗುರೊಡೆಯುವ ಕಾಲಘಟಕ್ಕೆ ಈ ಕ್ರಿಕೆಟ್‌ ಸರಣಿ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ.

ಹಿಂದಿನಂತಲ್ಲ ಈ ಮುಖಾಮುಖಿ
ಇದು ಹಿಂದಿನ ಮಾಮೂಲು ಕ್ರಿಕೆಟ್‌ ಟೆಸ್ಟ್‌ ಪಂದ್ಯಗಳಂಥಲ್ಲ. ಕೋವಿಡ್ 19 ಭೀತಿ ಇರುವ ಕಾರಣ ಸಾಕಷ್ಟು ಮುಂಜಾಗ್ರತಾ ಕ್ರಮ, ನೂತನ ನಿಯಮ, ಪ್ರೇಕ್ಷಕರಿಲ್ಲದ ಶೂನ್ಯ ವಾತಾವರಣಕ್ಕೆಲ್ಲ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಸಂಭ್ರಮಾಚರಣೆ ಇಲ್ಲ
ವಿಕೆಟ್‌ ಉರುಳಿದಾಗ ಕ್ರಿಕೆಟಿಗರೆಲ್ಲ ಒಂದೆಡೆ ಗುಂಪುಗೂಡಿ ಸಂಭ್ರಮ ನಡೆಸುವಂತಿಲ್ಲ. ಓಡಿ ಬಂದು ತಬ್ಬಿಕೊಳ್ಳುವುದು, ಬೌಲರ್‌ಗಳ ಹಾಗೂ ಕ್ಯಾಚ್‌ ಪಡೆದವರ ಮೈಮೇಲೆ ಏರಿ ಹೋಗುವುದು, ಬೌಲರ್‌ಗಳ ಕೈ ತಟ್ಟಿ ಸಂಭ್ರಮಿಸುವುದು ಇಲ್ಲಿ ಕಂಡುಬರದು. ಮೊಣಕೈ ಸ್ಪರ್ಶಕ್ಕೆ ಯಾವುದೇ ಅಡ್ಡಿ ಇಲ್ಲ. ಬೇಕಿದ್ದರೆ ಕಾಲಿಗೆ ಕಾಲನ್ನು ತಾಗಿಸಲೂಬಹುದು!


ವೀಕ್ಷಕರಿಗೆ ನಿರ್ಬಂಧ
ಈ ಪಂದ್ಯದ ವೇಳೆ ಸ್ಟೇಡಿಯಂ ಸಂಪೂರ್ಣ ಖಾಲಿ ಇರಲಿದೆ. ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪಂದ್ಯದುದ್ದಕ್ಕೂ ಮೌನವೇ ಮುಂದುವರಿಯಲಿದೆ. ಆದರೆ ಟಿವಿ ವೀಕ್ಷಕರಿಗಾಗಿ ಪ್ರೇಕ್ಷಕರ ಭೋರ್ಗರೆತದ ಕೃತಕ ಧ್ವನಿಯನ್ನು ಅಳವಡಿಸಲಾಗುವುದು.

ಇಲ್ಲಿ ಇನ್ನೊಂದು ಪ್ರಮುಖ ಸಂಗತಿ ಇದೆ. ಇತ್ತೀಚೆಗೆ ಜಗತ್ತಿನ ಕೆಲವೆಡೆ ವರ್ಣ ವೈಷಮ್ಯ ಮತ್ತೆ ಜನರ ನಡುವೆ ಕಂದಕವನ್ನು ಸೃಷ್ಟಿಸಿದೆ. ಇಂಥದೊಂದು ವಿಷಮ ಸ್ಥಿತಿಯಲ್ಲಿ ಬಿಳಿಯ ಆಂಗ್ಲರು ಮತ್ತು ಕೆರಿಬಿಯನ್ನರು ಕ್ರಿಕೆಟ್‌ನಲ್ಲಿ ಮುಖಾಮುಖಿ ಆಗುತ್ತಿರುವುದು ಕಚ್ಚಾಡುತ್ತಿರುವವರ ಪಾಲಿಗೊಂದು ಪಾಠ ಆಗುವುದರಲ್ಲಿ ಸಂಶಯವಿಲ್ಲ.

ಹೀಗಾಗಿ ಈ ಟೆಸ್ಟ್‌ ಪಂದ್ಯವನ್ನು, ಸರಣಿಯನ್ನು ಯಾರೇ ಗೆಲ್ಲಲಿ ಅಥವಾ ಸೋಲಲಿ, ಅದು ಮುಖ್ಯವಲ್ಲ. ಮತ್ತೆ ವಿಶ್ವ ಮಟ್ಟದ ಕ್ರೀಡೆಗೆ ಬಾಗಿಲು ತೆರೆದುಕೊಳ್ಳುತ್ತಿರುವುದೇ ಒಂದು ಸಂತಸದ ಬೆಳವಣಿಗೆ.

ಕಾಯುವಿಕೆಗೆ 32 ವರ್ಷ
ಇತ್ತಂಡಗಳ ಟೆಸ್ಟ್‌ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಸಮಬಲದ ಸಾಧನೆಯನ್ನು ಕಾಣಬಹುದು. ಇಂಗ್ಲೆಂಡ್‌ ಅತ್ಯಧಿಕ ಸರಣಿ ಗೆದ್ದರೆ, ವೆಸ್ಟ್‌ ಇಂಡೀಸ್‌ ಅತೀ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಜಯಿಸಿದೆ.

ಆದರೆ ಕಳೆದ 32 ವರ್ಷಗಳಿಂದ, ಅಂದರೆ 1988ರ ಬಳಿಕ ಕೆರಿಬಿಯನ್ನರಿಗೆ ಆಂಗ್ಲರ ನೆಲದಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ದೊಡ್ಡದೊಂದು ಕೊರಗು ಕಾಡುತ್ತಲೇ ಇದೆ. ಹೋಲ್ಡರ್‌ ಪಡೆ ಇದನ್ನು ನೀಗಿಸಿಕೊಂಡೀತೇ ಎಂಬುದೊಂದು ಕುತೂಹಲ.

ಕೋವಿಡ್ 19ಗೆ ಸವಾಲ್‌ ಎಂಬ ರೀತಿಯಲ್ಲಿ ನಡೆಯಲ್ಪಡುವ ಈ ಟೆಸ್ಟ್‌ ಮುಖಾಮುಖಿ ಹಿಂದಿನ ಪಂದ್ಯಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆ. ತೀವ್ರ ಮುನ್ನೆಚ್ಚರಿಕೆ ಹಾಗೂ ಆಟಗಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾದ ಈ ಪಂದ್ಯದ ವೇಳೆ ಕಂಡುಬರುವ ಪ್ರಮುಖ ಬದಲಾವಣೆಗಳು ಹೀಗಿವೆ..

ಚೆಂಡಿಗೆ ಎಂಜಲು ನಿಷೇಧ
ಕೋವಿಡ್ 19 ಭೀತಿಯಿಂದಾಗಿ ಚೆಂಡಿನ ಹೊಳಪನ್ನು ಕಾಯ್ದುಕೊಳ್ಳಲು ಎಂಜಲು ಹಚ್ಚುವುದನ್ನು ನಿಷೇಧಿಸಲಾಗಿದೆ. ಈ ನಿಯಮಾವಳಿಯಂತೆ ನಡೆಯುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಇದಾಗಿದೆ. ಆದರೆ ಅಭ್ಯಾಸಬಲದಿಂದ ಚೆಂಡಿಗೆ ಎಂಜಲು ಸವರುವ ಸಾಧ್ಯತೆ ಇದ್ದೇ ಇದೆ.

ಹೀಗಾಗಿ ಐಸಿಸಿ “ಹೊಂದಾಣಿಕೆ ಅವಧಿ’ಯನ್ನು ನಿಗದಿಪಡಿಸಿದೆ. ಇದರಂತೆ, ಪ್ರತೀ ತಂಡಕ್ಕೆ ಒಂದೊಂದು ಇನ್ನಿಂಗ್ಸ್‌ ವೇಳೆ ಅಂಪಾಯರ್‌ಗಳು ಎರಡು ಸಲ ಎಚ್ಚರಿಕೆ ನೀಡುತ್ತಾರೆ. ಆನಂತರ ಬ್ಯಾಟಿಂಗ್‌ ಮಾಡುತ್ತಿರುವ ತಂಡಕ್ಕೆ 5 ಪೆನಾಲ್ಟಿ ರನ್‌ ನೀಡಲಾಗುತ್ತದೆ. ಎಂಜಲಿನ ಬದಲು ಚೆಂಡಿಗೆ ಬೆವರು ಹಚ್ಚಬಹುದಾಗಿದೆ.

ಆಟಗಾರರ ಬದಲಾವಣೆ
ಪಂದ್ಯಆರಂಭಕ್ಕೂ ಮುನ್ನ ದಿನಂಪ್ರತಿ ಆಟಗಾರರಿಗೆ ಕೋವಿಡ್‌ ಟೆಸ್ಟ್‌ ನಡೆಯುತ್ತದೆ. ಅಕಸ್ಮಾತ್‌ ಆಟದ ವೇಳೆ ಕ್ರಿಕೆಟಿಗನಿಗೆ ಕೋವಿಡ್ 19 ಲಕ್ಷಣ ಕಂಡುಬಂದಲ್ಲಿ ಬದಲಿ ಆಟಗಾರನನ್ನು ಆಡಿಸಬಹುದು.

ಹೆಚ್ಚುವರಿ ಡಿಆರ್‌ಎಸ್‌
ಸರಣಿಯ ವೇಳೆ ಅಷ್ಟೇನೂ ಅನುಭವವಿಲ್ಲದ ಅಂಪಾಯರ್‌ಗಳು ಕಾರ್ಯ ನಿಭಾಯಿಸುವುದರಿಂದ ಐಸಿಸಿ ಪ್ರತಿಯೊಂದು ಇನ್ನಿಂಗ್ಸಿಗೂ ಹೆಚ್ಚುವರಿ ಡಿಆರ್‌ಎಸ್‌ ರಿವ್ಯೂಗೆ ಅವಕಾಶ ನೀಡಿದೆ. ಹೀಗಾಗಿ ಬ್ಯಾಟಿಂಗ್‌, ಬೌಲಿಂಗ್‌ ಕಡೆಗಳಿಂದ ಎರಡರ ಬದಲು 3 ಡಿಆರ್‌ಎಸ್‌ ರಿವ್ಯೂ ಮಾಡಬಹುದಾಗಿದೆ.

ತಟಸ್ಥ ಅಂಪಾಯರ್‌ಗಳಿಲ್ಲ
ಕಳೆದ 19 ವರ್ಷಗಳಿಂದ ಜಾರಿಯಲ್ಲಿದ್ದ ತಟಸ್ಥ ಅಂಪಾಯರ್‌ ನಿಯಮವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಪ್ರಯಾಣ ನಿರ್ಬಂಧವೇ ಇದಕ್ಕೆ ಕಾರಣ. ಈ ಪಂದ್ಯದ ವೇಳೆ ಎಲ್ಲ ಅಂಪಾಯರ್‌ಗಳೂ ತವರು ದೇಶದವರೇ ಆಗಿರುತ್ತಾರೆ. ಈ ಸರಣಿಯ ಅಂಪಾಯರ್‌ಗಳೆಂದರೆ ರಿಚರ್ಡ್‌ ಇಲ್ಲಿಂಗ್‌ವರ್ತ್‌, ರಿಚರ್ಡ್‌ ಕ್ಯಾಟಲ್‌ಬರೋ, ಮೈಕಲ್‌ ಗಾಫ್‌, ಅಲೆಕ್ಸ್‌ ವಾರ್ಫ್‌ ಮತ್ತು ಡೇವಿಡ್‌ ಮಿಲ್ಸ್.

ಟೆಸ್ಟ್‌ ಸರಣಿ ವೇಳಾಪಟ್ಟಿ

– ಮೊದಲ ಟೆಸ್ಟ್‌: ಸೌತಾಂಪ್ಟನ್‌- ಜು. 8-12

– ಎರಡನೇ ಟೆಸ್ಟ್‌: ಮ್ಯಾಂಚೆಸ್ಟರ್‌- ಜು. 16-20

– ಮೂರನೇ ಟೆಸ್ಟ್‌: ಮ್ಯಾಂಚೆಸ್ಟರ್‌  -ಜು.24-28

– ಆರಂಭ: ಅಪರಾಹ್ನ 3.30

– ಪ್ರಸಾರ: ಸೋನಿ ನ್ಪೋರ್ಟ್ಸ್

ಮುಖಾಮುಖಿ
ಒಟ್ಟು ಟೆಸ್ಟ್‌:
157

ಇಂಗ್ಲೆಂಡ್‌ ಜಯ: 49

ವಿಂಡೀಸ್‌ ಜಯ: 57

ಡ್ರಾ: 51

ಒಟ್ಟು ಸರಣಿ: 36

ಇಂಗ್ಲೆಂಡ್‌ ಜಯ: 21

ವಿಂಡೀಸ್‌ ಜಯ: 06

ಡ್ರಾ: 09

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.